ಧರ್ಮ ಜಾಗೃತಿ ಜ್ಯೋತಿ ರಥಯಾತ್ರೆಗೆ ಚಾಲನೆ

17sor4
ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ಪ್ರಯುಕ್ತ ಭಾನುವಾರ ಪುಟ್ಟನಹಳ್ಳಿಯಿಂದ ಬಾಳೆಹೊನ್ನೂರು ರಂಭಾಪುರಿ ಪೀಠದವರೆಗೆ ಧರ್ಮಜಾಗೃತಿ ಜ್ಯೋತಿ ರಥಯಾತ್ರೆಗೆ ಜೆಡಿಎಸ್ ಹಿರಿಯ ಮುಖಂಡ ಬಾಸೂರು ಚಂದ್ರೇಗೌಡ ಚಾಲನೆ ನೀಡಿದರು. ಶಂಭುಲಿಂಗಯ್ಯ ಕೆರೆಕಪ್ಪ, ನಾಗರಾಜ ಗೌಡ್ರು ನಿಟ್ಟಕ್ಕಿ, ಮಹೇಶ್ವರಯ್ಯ ಹೊಂಡದಮಠ ಬೆಲವಂತನಕೊಪ್ಪ, ರೇಣುಕಮ್ಮ ಬೆಲವಂತನಕೊಪ್ಪ ಇದ್ದರು.
Published on

ಸೊರಬ: ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ಪ್ರಯುಕ್ತ ತಾಲೂಕಿನ ಪುಟ್ಟನಹಳ್ಳಿಯಿಂದ ಬಾಳೆಹೊನ್ನೂರು ರಂಭಾಪುರಿ ಪೀಠದವರೆಗೆ ಹಮ್ಮಿಕೊಂಡಿರುವ ಧರ್ಮ ಜಾಗೃತಿ ಜ್ಯೋತಿ ರಥಯಾತ್ರೆಗೆ ಭಾನುವಾರ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಜೆಡಿಎಸ್ ಹಿರಿಯ ಮುಖಂಡ ಬಾಸೂರು ಚಂದ್ರೇಗೌಡ ಚಾಲನೆ ನೀಡಿದರು. ಧರ್ಮಜಾಗೃತಿ ಜ್ಯೋತಿ ರಥಯಾತ್ರೆ ಪಂಚಾಚಾರ್ಯ ಸೇವಾ ಸಮಿತಿಯಿಂದ ಹಮ್ಮಿಕೊಂಡಿರುವ 9ನೇ ವರ್ಷದ ಧರ್ಮ ಜಾಗೃತಿ ಜ್ಯೋತಿಯ ರಥಯಾತ್ರೆಯು ಪುಟ್ಟನಹಳ್ಳಿಯಿಂದ ಹೊರಟು ಮಾ.22ಕ್ಕೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠಕ್ಕೆ ತಲುಪಲಿದೆ. ಪ್ರತಿ ವರ್ಷವೂ ಧರ್ಮ ಜಾಗೃತಿ ಉದ್ದೇಶದೊಂದಿಗೆ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಶಂಭುಲಿಂಗಯ್ಯ ಕೆ.ಎನ್ ಕೆರೆಕೊಪ್ಪ ತಿಳಿಸಿದರು. ನಾಗರಾಜ ಗೌಡ್ರು ನಿಟ್ಟಕ್ಕಿ, ಮಹೇಶ್ವರಯ್ಯ ಹೊಂಡದಮಠ ಬೆಲವಂತನಕೊಪ್ಪ, ರೇಣುಕಮ್ಮ ಬೆಲವಂತನಕೊಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net