ಹೆಚ್ಚುವರಿ ಶುಲ್ಕ ಮರುಪಾವತಿಗೆ ಆಗ್ರಹಿಸಿ ಪ್ರತಿಭಟನೆ

Protest over refund of excess charges
ಪದವಿ ಪ್ರವೇಶಾತಿಯ ಹೆಚ್ಚುವರಿ ಶುಲ್ಕ ಮರುಪಾವತಿ ಹಾಗೂ ಮೂಲ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಧಾರವಾಡದ ಕರ್ನಾಟಕ ಕಾಲೇಜು ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು
ಪದವಿ ಪ್ರವೇಶಾತಿಯ ಹೆಚ್ಚುವರಿ ಶುಲ್ಕ ಮರುಪಾವತಿ ಹಾಗೂ ಮೂಲ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಧಾರವಾಡದ ಕರ್ನಾಟಕ ಕಾಲೇಜು ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು
Published on: 

ಧಾರವಾಡ: ಪದವಿ ಪ್ರವೇಶಾತಿಯ ಹೆಚ್ಚುವರಿ ಶುಲ್ಕ ಮರುಪಾವತಿ ಹಾಗೂ ಮೂಲ ಸೌಕರ್ಯ ಕಲ್ಪಿಸಲು ಆಗ್ರಹಿಸಿ ನಗರದ ಕರ್ನಾಟಕ ಕಾಲೇಜು ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ವಿಶ್ವವಿದ್ಯಾಲಯವು 2026- 27ನೇ ಸಾಲಿನ ಪ್ರವೇಶಾತಿಗೆ ಶುಲ್ಕ ಏರಿಸಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಹೋರಾಟ ಮಾಡಿದ್ದರು. ಹೆಚ್ಚುವರಿ ಶುಲ್ಕ ಮರುಪಾವತಿಸುವುದಾಗಿ ವಿಶ್ವವಿದ್ಯಾಲಯ ಭರವಸೆ ನೀಡಿತ್ತು. ಆದರೆ, ಈವರೆಗೆ ಶುಲ್ಕ ಮರುಪಾವತಿಸಿಲ್ಲ. ಕೂಡಲೇ ಹೆಚ್ಚುವರಿ ಶುಲ್ಕ ಮರುಪಾವತಿ ಮಾಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.

ಕಾಲೇಜಿನ ಆವರಣದಲ್ಲಿರುವ ಶೌಚಗೃಹಗಳಲ್ಲಿ ಸಮರ್ಪಕ ನೀರಿನ ಪೂರೈಕೆ ಇಲ್ಲ. ಕೆಲವೆಡೆ ಬಾಗಿಲುಗಳೇ ಇಲ್ಲ. ಕಾಲೇಜಿನ ಗ್ರಂಥಾಲಯದಲ್ಲಿರುವ ಪುಸ್ತಕಗಳು ಕೇವಲ ಪ್ರದರ್ಶನಕ್ಕೆ ಸೀಮಿತವಾಗಿವೆ. ಹಳೆಯ ಪುಸ್ತಕಗಳೇ ಹೆಚ್ಚಾಗಿದ್ದು, ಹೊಸ ಪುಸ್ತಕಗಳು ಲಭ್ಯವಿಲ್ಲ. ಕೂಡಲೇ ಅಗತ್ಯ ಹೊಸ ಪುಸ್ತಕಗಳನ್ನು ಒದಗಿಸಿ ಬಳಕೆಗೆ ಅವಕಾಶ ನೀಡಬೇಕು. ತರಗತಿಗಳಲ್ಲಿ ಅಳವಡಿಸಲಾದ ಇ- ಪ್ರೊಜೆಕ್ಟರ್​ಗಳ ಬಳಕೆಯಾಗುತ್ತಿಲ್ಲ. ಪತ್ರಿಕೋದ್ಯಮ ವಿದ್ಯಾರ್ಥಿಗಳ ಪ್ರಾಯೋಗಿಕ ಜ್ಞಾನ ಮತ್ತು ಕೌಶಲ್ಯಗಳ ಅಭಿವೃದ್ಧಿಗೆ ಪ್ರಯೋಗಾಲಯ ನಿಮಿರ್ಸಬೇಕು ಎಂದು ಕುಲಪತಿ ಡಾ. ಎ.ಎಂ. ಖಾನ್​ ಅವರಿಗೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net