

ಹುಬ್ಬಳ್ಳಿ: ಇಲ್ಲಿಯ ಅಕ್ಷಯ ನಗರದ ಪ್ರತಿಷ್ಠಿತ ಚೇತನ ಪಬ್ಲಿಕ್ ಸ್ಕೂಲ್‌ನ ಸಿಬಿಎಸ್‌ಇ ವಿಭಾಗದಲ್ಲಿ 71ನೇ ಕನ್ನಡ ರಾಜ್ಯೋತ್ಸವವನ್ನು ಭಾನುವಾರ ವಿಜೃಂಭಣೆಯಿಂದ ಅಚರಿಸಲಾಯಿತು.
ನಿರ್ದೇಶಕಿ ಸೌಮ್ಯ ವಳಸಂಗ, ಪ್ರಾಚಾರ್ಯೆ ಡಾ. ಜೆರುಷಾ ಆರ್. ನಡುಗಡ್ಡಿ, ಉಪ ಪ್ರಾಚಾರ್ಯೆ ರೂಪಾ ಆರ್. ಪೈ ಅವರು ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿದ್ಯಾರ್ಥಿಗಳು ನೃತ್ಯ, ಭಾಷಣ, ಹಾಡುಗಳನ್ನು ಹಾಡಿದರು. ಒಂದನೇ ತರಗತಿಯ ವಿದ್ಯಾರ್ಥಿಗಳು ಶರಣರ ವೇಷಭೂಷಣ ಧರಿಸಿ ಕಣ್ಮನ ಸೆಳೆದರು.
8ನೇ ತರಗತಿಯ ವಿದ್ಯಾರ್ಥಿಗಳು ರಾಜ್ಯದ ವಿವಿಧ ಜಿಲ್ಲೆಗಳ ವೇಷಭೂಷಣ ಧರಿಸಿ ಆಯಾ ಜಿಲ್ಲೆಗಳ ವಿಶೇಷತೆಗಳ ಕುರಿತು ಮಾತನಾಡಿದರು. ಇದಕ್ಕೂ ಮೊದಲು ವಿದ್ಯಾರ್ಥಿಗಳಿಂದ ನಾಡಗೀತೆ ಪ್ರಸ್ತುತಪಡಿಸಲಾಯಿತು.
ಕನ್ನಡ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳೇ ಸ್ವಾಗತ, ನಿರೂಪಣೆ ಮತ್ತು ವಂದನಾರ್ಪಣೆ ಕಾರ್ಯಕ್ರಮ ನಡೆಸಿಕೊಟ್ಟರು.