‘ಮನ್ ಕೀ ಬಾತ್’ನಿಂದ ಜನಸಾಮಾನ್ಯರ ಸಾಧನೆ ಪ್ರಸಾರ

man ki baat
ಹುಬ್ಬಳ್ಳಿಯಲ್ಲಿ ಭಾನುವಾರ ‘ಪ್ರಧಾನಿ ಅವರ 139ನೇ ಆವೃತ್ತಿಯನ್ನು ‘ಮನ್ ಕೀ ಬಾತ್’ ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವೀಕ್ಷಿಸಿದರು.
Published on: 

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಪ್ರತೀಕವಾಗಿ ಎಲ್ಲರ ಮನೆ ಮನ ತಲುಪುತ್ತಿರುವ ‘ಮನ್ ಕೀ ಬಾತ್’ ಜನಸಾಮಾನ್ಯರ ಸಾಧನೆಗಳನ್ನು ದೇಶದೆದುರು ಪ್ರಚುರಪಡಿಸುವ ಒಂದು ಅಪೂರ್ವ ವೇದಿಕೆಯಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಅಭಿಪ್ರಾಯಪಟ್ಟರು.

ಇಲ್ಲಿಯ ಬಮ್ಮಾಪೂರ ಓಣಿಯ ಓಲೆ ಮಠದ ಜಗದ್ಗುರು ಗುರುಸಿದ್ಧಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ‘ಪ್ರಧಾನಿ ಅವರ 139ನೇ ಆವೃತ್ತಿಯನ್ನು ‘ಮನ್ ಕೀ ಬಾತ್’ ಕಾರ್ಯಕ್ರಮ ಆಲಿಸಿದ ನಂತರ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಈ ವಿಶಿಷ್ಠ ಕಾರ್ಯಕ್ರಮವನ್ನು ಪ್ರಧಾನಮಂತ್ರಿ ಮೋದಿ ಅವರು ದೇಶದ ಮೂಲೆ ಮೂಲೆಗೂ ತಲುಪಿಸಿದ್ದಾರೆ. ಜತೆಗೆ ಸಾಮಾನ್ಯರ ಸಾಧನೆ, ಪ್ರಗತಿಪರ ರೈತರ ಸಾಧನೆ, ಯುವಜನರ ನವೀನ ಆಲೋಚನೆ ಹಾಗೂ ಮಹಿಳಾ ಸ್ವಾವಲಂಬನೆಯನ್ನು ದೇಶದೆಲ್ಲೆಡೆ ಪಸರಿಸಿದ್ದಾರೆ ಎಂದರು.

‘ಮನ್ ಕೀ ಬಾತ್’ ನಮ್ಮ ಕರುನಾಡಿನ ಹಿರಿಮೆಯನ್ನೂ ತೆರೆದಿಟ್ಟಿದೆ. ಕಲಬುರಗಿಯ ಪ್ರಸಿದ್ಧ ತೊಗರಿ ಬೇಳೆ ಮಲ್ಡೀವ್ಸ್‌ಗೆ ರಫ್ತಾಗುತ್ತಿರುವುದನ್ನು ಅನಾವರಣಗೊಳಿಸಿದೆ. ಅಲ್ಲದೆ, ಭಾರತೀಯ ರೈತರಿಗೆ ಜಾಗತಿಕ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಹೊಸ ಅವಕಾಶಗಳಿಗೆ ಇದು ಉತ್ತಮ ನಿದರ್ಶನವಾಗಿದೆ ಎಂದರು.

ಕರ್ನಾಟಕದ ಬಿದಿರು ಸ್ಟಾರ್ಟ್‌ಪ್ ಸಂಸ್ಥೆಯೊಂದು ಬಿದಿರು ಮತ್ತು ಕೃಷಿ ತ್ಯಾಜ್ಯಗಳಿಂದ ಪರಿಸರ ಸ್ನೇಹಿ ಪ್ಯಾಕೇಜಿಂಗ್ ಸಾಮಗ್ರಿ ತಯಾರಿಸುತ್ತಿರುವ ನಾವೀನ್ಯತೆಯನ್ನು ಪ್ರಧಾನಿ ಅವರು ಶ್ಲಾಘಿಸಿದ್ದು, ರಾಜ್ಯದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿದೆ ಎಂದರು.

ಎಂಎಲ್‌ಸಿ ಲಿಂಗರಾಜ ಪಾಟೀಲ, ಮಾಜಿ ಶಾಸಕ ಅಶೋಕ ಕಾಟವೆ, ಪಾಲಿಕೆ ಸಭಾನಾಯಕ ಶಿವು ಮೆಣಸಿನಕಾಯಿ, ಜಿ.ಎಂ. ಚಿಕ್ಕಮಠ, ಪ್ರಭು ನವಲಗುಂದಮಠ, ಜಯತೀರ್ಥ ಕಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net