

ಹುಬ್ಬಳ್ಳಿ: ಮನೆಗಳ್ಳತನ ಮಾಡಿದ್ದ ಆರೋಪದಡಿ ವ್ಯಕ್ತಿಯೊಬ್ಬನನ್ನು ಗೋಕುಲ ರೋಡ್ ಠಾಣೆ ಪೊಲೀಸರು ಇಲ್ಲಿಯ ಅಕ್ಷಯ ಪಾರ್ಕ್ ಹತ್ತಿರ ಮಂಗಳವಾರ ಬಂಧಿಸಿದ್ದಾರೆ.
ಕುಂದಗೋಳ ತಾಲೂಕಿನ ಹೊಸ ಹಂಚಿನಾಳ ಅಂಬಿಗೇರ ಓಣಿ ಸದ್ಯ ಕೇಶ್ವಾಪೂರದ ರಾಮನಗರ ದರ್ಗಾ ಹತ್ತಿರದ ನಿವಾಸಿ ಅಜಯ ಬಂಡಿವಾಡ (20)ನನ್ನು ಬಂಧಿಸಿದ್ದು, ವಾಳ್ವೇಕರ ಪ್ಲಾಟ್‌ನಲ್ಲಿ ಕಳವು ಮಾಡಿದ್ದ 33 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ ವುಸ್ತುಗಳನ್ನು ಜಪ್ತಿ ಮಾಡಲಾಗಿದೆ.