

ಹುಬ್ಬಳ್ಳಿ: ನಗರದ ಸುಕೃತಿ ವಿಜ್ಞಾನ ಕಾಲೇಜ್‌ನಲ್ಲಿ ಭಾನುವಾರ ಹೂಬಳ್ಳಿ ಲೇಖಕಿಯರ ಬಳಗದ ಮೂರನೇ ವಾರ್ಷಿಕೋತ್ಸವವನ್ನು ಏರ್ಪಡಿಸಲಾಗಿತ್ತು.
ಮಾಜಿ ಎಂಎಲ್‌ಸಿ ಮೋಹನ ಲಿಂಬಿಕಾಯಿ ಮಾತನಾಡಿ, ಮಕ್ಕಳಿಗೆ ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿರುಚಿ ಮೂಡಿಸಬೇಕು. ಆರೋಗ್ಯವೃದ್ಧಿಗೆ ಅಗತ್ಯ ಮುಂಜಾಗ್ರತೆ ವಹಿಸಬೇಕು ಎಂದು ತಿಳಿವಳಿಕೆ ನೀಡಿದರು.
ಲೇಖಕಿ ಮಾಲತಿ ಮುದಕವಿ ಮಾತನಾಡಿ, ಕನ್ನಡ ಸಾಹಿತ್ಯ ಬಹು ವಿಸ್ತಾರಗೊಂಡಿದೆ. ಅದರಲ್ಲೂ ಧಾರವಾಡ ಜಿಲ್ಲೆಯ ಸಾಹಿತ್ಯಕ್ಕೆ ತನ್ನದೇ ಆದ ಸ್ಥಾನಮಾನವಿದೆ. ಇಲ್ಲಿನ ಸಾಹಿತಿಗಳ ಸಾಹಿತ್ಯವನ್ನು ಓದಿ ತಿಳಿಯಬೇಕು ಎಂದರು.
ಬಳಗದ ಅಧ್ಯಕ್ಷೆ ಡಾ. ಸರೋಜಾ ಮೇಟಿ ಅಧ್ಯಕ್ಷತೆ ವಹಿಸಿದರು. ಲೇಖಕಿ ಡಾ. ವೀಣಾ ಸಂಕನಗೌಡರ ಉದ್ಘಾಟಿಸಿದರು. ಸಂಧ್ಯಾ ದೀಕ್ಷಿತ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀದೇವಿ ಬಿರಾದಾರ ವಾರ್ಷಿಕ ವರದಿ ಓದಿದರು.
ವಿವಿಧ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು.
ಬಸವ ಕೇಂದ್ರದ ಉಮಾ ಹುಲಕಂತಿಮಠ ಅವರನ್ನು ಗೌರವಿಸಲಾಯಿತು. ನಂತರ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಪ್ರೊ.ಕೆ.ಎಸ್. ಕೌಜಲಗಿ, ಪತ್ರಕರ್ತ ಡಾ. ವೀರೇಶ ಹಂಡಗಿ, ರೇಣುಕಾ ತಾಯಿ, ನೇತ್ರಾ ರುದ್ರಾಪುರಮಠ, ಪದ್ಮಜಾ ಉಮರ್ಜಿ, ಸುನಿತಾ ಹುಬ್ಳೀಕರ ಇತರರಿದ್ದರು.
ಮಂಗಳಾ ನಾಡಕರ್ಣಿ ಪ್ರಾರ್ಥಿಸಿದರು. ನಿರ್ಮಲಾ ಶೆಟ್ಟರ್ ಸ್ವಾಗತಿಸಿದರು. ಸಂಚಾಲಕಿ ಕವಿತಾ ಹೆಗಡೆ ನಿರೂಪಿಸಿದರು. ಅಶ್ವಿನಿ ಮಠದ ವಂದಿಸಿದರು.