ಭೂತಾಯಿಗೆ ಚೆರಗ ಚೆಲ್ಲಿ ರೈತರ ಸಂಭ್ರಮ

seegi hunnime
ರೈತ ಕುಟುಂಬವೊಂದು ಹೆಬ್ಬಳ್ಳಿ ರಸ್ತೆಯ ಜಮೀನೊಂದರಲ್ಲಿ ಕುಳಿತು ಸಿಹಿಯೂಟ ಮಾಡಿದರು.
Published on: 

ಹುಬ್ಬಳ್ಳಿ: ಶೀಗಿ ಹುಣ್ಣಿಮೆ ನಿಮಿತ್ತ ರೈತ ಕುಟುಂಬದವರು ಬುಟ್ಟಿ ತುಂಬ ಊಟ, ಭೂತಾಯಿಗೆ ಸಮರ್ಪಿಸಲು ನೈವೇದ್ಯ ಹೊತ್ತುಕೊಂಡು ಹೋಗಿ ನಗರ ಹೊರವಲಯದ ಜಮೀನಿನಲ್ಲಿ ಕುಳಿತ ದೃಶ್ಯ ಸೋಮವಾರ ಎಲ್ಲೆಡೆ ಮನಮೋಹಕಗೊಳಿಸಿತು.

ಕೆಲವರು ಎತ್ತಿನ ಗಾಡಿಯಲ್ಲಿ ಹೊರಟರೆ, ಇನ್ನುಳಿದವರು ಟ್ರಾೃಕ್ಟರ್, ಕಾರ್, ವ್ಯಾನ್‌ಗಳ ಮೂಲಕ ತಮ್ಮ ಜಮೀನಿಗೆ ತೆರಳಿದರು. ಹೊಲದ ಮಧ್ಯೆ ಇರುವ ಬನ್ನಿ (ಶಮೆ) ಗಿಡಕ್ಕೆ ಸೀರೆ ತೊಡಿಸಿ ಹೂವು ಮುಡಿಸಿ ಅದರ ಮುಂದೆ ಪಾಂಡವರ ಹೆಸರಿನಲ್ಲಿ ಕಲ್ಲುಗಳನ್ನಿಟ್ಟು ಪೂಜೆ ಸಲ್ಲಿಸಿದರು. ತಾವು ತಂದಿದ್ದ ನೈವೇದ್ಯ ಸಮರ್ಪಿಸಿದರು. ನಂತರ ಸಮೃದ್ಧ ಮಳೆ, ಬೆಳೆಗಾಗಿ ಪ್ರಾರ್ಥಿಸಿ ಭೂಮಿ ತಾಯಿಗೆ ಭಕ್ತಿಯಿಂದ ನಮಿಸಿ, ಹೊಲದ ತುಂಬೆಲ್ಲ ಚೆರಗ ಚೆಲ್ಲಿ ಖುಷಿಪಟ್ಟರು.

ರೈತರು ತಮ್ಮ ಸಂಬಂದಿಕರು, ಒಡನಾಡಿಗಳನ್ನು ಕರೆದುಕೊಂಡು ಜಮೀನಿನ ಗಿಡದ ನೆರಳಿಗೆ ಕುಳಿತು ತಾವು ತಂದಿದ್ದ ತರಹೇವಾರಿ ಅಡುಗೆಗಳನ್ನು ಬಿಚ್ಚಿಟ್ಟರು. ರೊಟ್ಟಿ, ಚಪಾತಿ, ಕಿಚಡಿ, ಕಡುಬು, ಪುಂಡಿ ಚಟ್ನಿ, ಕಾಳುಪಲ್ಯ, ಮೆಣಸಿನಕಾಯಿ ಕುಚ್ಚಿದ ಚಟ್ನಿ, ಚಿತ್ರಾನ್ನ, ಹುರೆಅಕ್ಕಿ ಹೋಳಿಗೆ, ಕಾಯಿ ಚಟ್ನಿ, ಕೋಡುಬಳೆ ಸೇರಿದಂತೆ ಹಲವಾರು ರೀತಿಯ ಅಹಾರ ಪದಾರ್ಥಗಳನ್ನು ಸವಿದು ಖುಷಿಪಟ್ಟರು. ನಂತರ ಮಾಂಜಾದಾರ ಬಳಸದೆ, ಸಾಮಾನ್ಯ ದರ ಬಳಸಿ ಗಾಳಿಪಟವನ್ನು ಆಕಾಶದೆತ್ತರಕ್ಕೆ ಹಾರಿಸಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net