

ಹುಬ್ಬಳ್ಳಿ: ಇಲ್ಲಿಯ ರಾಮಲಿಂಗೇಶ್ವರ ನಗರದ ಮನೆಯೊಂದರಲ್ಲಿ ಇಸ್ಪೀಟ್ ಜೂಜಾಡುತ್ತಿದ್ದ 21 ಜನರನ್ನು ಗೋಕುಲ ರೋಡ್ ಠಾಣೆ ಪೊಲೀಸರು ಬಂಧಿಸಿದ್ದು, ಬಂಧಿತರಿಂದ 43,050 ರೂ. ನಗದು ಜಪ್ತಿ ಮಾಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು, ಚಂದ್ರು ಬಂಡಿವಡ್ಡರ, ರಾಜೇಸಾಬ್ ಧಾರವಾಡ, ಸಂಗಮೇಶ ತೇಜಿ, ಮಾಂತಯ್ಯ ನೀಲಮ್ಮನಮಠ, ಅಕ್ಷಯ ಮುದ್ದಿ, ಅಮರ ಮುದ್ದಿ, ಜಮೀರ ಅಳಿಹೊಸೂರ, ಸುಭಾಷ ಗೋಡಕೆ, ಶಿವಕುಮಾಋ ಏವೂರ, ಚೇತನ ಮಡಿವಾಳರ, ಬಾಬು ಸುಭಾನಿ, ಸೈಯದ್‌ಸಾಬ್ ಹಲಸಂಗಿ, ಚಂದ್ರಶೇಖರ ಸಂದಿಮನಿ, ಸಜಯರಾಮ ಜಾಲಿಹಾಳ, ಮುತ್ತು ಉತಳೇಕರ, ಮಹಾಂತೇಶ ಕೊಂಚಿಕೊವರ, ಕಿರಣ ಅರ್ಕಸಾಲಿ, ಆಸೀಫ್ ಖಲಂದರ, ಮಂಜುನಾಥ ಭಜಂತ್ರಿ, ವಸಂತ ಭೋವಿ, ಗಂಗಪ್ಪ ಕೊರವರನನ್ನು ಬಂಧಿಸಿದ್ದಾರೆ.