

ಹುಬ್ಬಳ್ಳಿ: ಇಲ್ಲಿಯ ಗುಡಿಹಾಳ ರಸ್ತೆ ಹತ್ತಿರ ಗಾಂಜಾ ಮಾರಾಟ ಮಾಡುತ್ತ್ದಿದ ನಾಲ್ವರನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ.
ವಿಶಾಲನಗರದ ಮಹಮ್ಮದ್‌ಗೌಸ್ ಕಿಲ್ಲೇದಾರ (24), ನೇಕಾರನಗರದ ಬಾಬಾಜಾನ್ ಯರಗುಪ್ಪಿ (27), ಆನಂದನಗರದ ಜೇಮ್ಸ್ ಲಮಾಣಿ (21), ಶಿವಪುತ್ರ ನಗರದ ಮಹಮ್ಮದ್ ತೈಯಬ್ ಮುಲ್ಲಾನನ್ನು (19) ಬಂಧಿಸಿದ್ದು, ಮಂಟೂರ ರಸ್ತೆಯ ಅರ್ಮಾನ ಪರಾರಿಯಾಗಿದ್ದಾನೆ. ಬಂಧಿತರಿಂದ 15,800 ರೂ. ಮೌಲ್ಯದ 316 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.