ಕ್ರೀಡಾಕೂಟದಿಂದ ಮನೋದೈಹಿಕ ಆರೋಗ್ಯ ವೃದ್ಧಿ

education sports
ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಶಹರ ತಹಸೀಲ್ದಾರ್ ಮಹೇಶ ಗಸ್ತೆ ಅವರು ವಿದ್ಯಾರ್ಥಿಗಳಿಗೆ ಶನಿವಾರ ಕ್ರೀಡಾಧ್ವಜ ಹಸ್ತಾಂತರಿಸಿದರು. ಬಿಇಒ ಎಚ್.ಎಂ. ಫಡ್ನೇಶಿ, ಇತರರಿದ್ದರು.
Published on: 

ಹುಬ್ಬಳ್ಳಿ: ಇಲ್ಲಿಯ ಸೆಟ್ಲಮೆಂಟ್ ವ್ಯಾಪ್ತಿಯ ಹಾಕಿ ಮೈದಾನದಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಶಹರ ತಹಸೀಲ್ದಾರ್ ಮಹೇಶ ಗಸ್ತೆ ಉದ್ಘಾಟಿಸಿ ಮಾತನಾಡಿ, ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಮನೋದೈಹಿಕ ಆರೋಗ್ಯ ವೃದ್ಧಿಸುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ. ಗುಂಪಿನೊಂದಿಗೆ ಬೆಳೆಯುವ ಅವಕಾಶ ಲಭಿಸುತ್ತದೆ ಎಂದರಲ್ಲದೆ, ಗೆದ್ದಾಗ ಎದುರಾಳಿಯನ್ನು ಗೌರವಿಸಬೇಕು. ಸೋತಾಗ ಗೆದ್ದವರನ್ನು ಅಭಿನಂದಿಸಬೇಕು ಎಂದು ಹೇಳಿದರು.

ತಹಸೀಲ್ದಾರ್ ವಿದ್ಯಾರ್ಥಿಗಳಿಗೆ ಕ್ರೀಡಾಜ್ಯೋತಿಯನ್ನು ಹಸ್ತಾಂತರಿಸಿದರು.

ಬಿಇಒ ಎಚ್.ಎಂ. ಫಡ್ನೇಶಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net