ಕಾಂಗ್ರೆಸ್​ಗೆ ಪಾಠ ಕಲಿಸಲು ಸ್ಪರ್ಧೆ Contesting to teach the Congress a lesson

ಡಾ. ಆರ್​.ಎಂ. ಕುಬೇರಪ್ಪ
ಡಾ. ಆರ್​.ಎಂ. ಕುಬೇರಪ್ಪ
Published on: 

ಧಾರವಾಡ: ಕಳೆದ 4 ದಶಕದಿಂದ ಪಕ್ಷಕ್ಕೆ ದುಡಿದ ನನಗೆ ಸೂಕ್ತ ಗೌರವ, ಕೊಟ್ಟ ಮಾತಿನಂತೆ ಅಧಿಕಾರ ನೀಡದೆ ವಂಚಿಸಿದ ಕಾಂಗ್ರೆಸ್​ ಗೆ ಪಾಠ ಕಲಿಸಲು ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಅಹಿಂದ ಅಭ್ಯಥಿರ್ಯಾಗಿ ಸ್ಪಧಿರ್ಸಿದ್ದೇನೆ ಎಂದು ಡಾ. ಆರ್​.ಎಂ. ಕುಬೇರಪ್ಪ ಹೇಳಿದರು.

ಜಿಲ್ಲಾ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಹಿಂದೆ ಚುನಾವಣೆಗೆ ಸ್ಪಧಿರ್ಸದಂತೆ ನನ್ನ ಮನೆ ಬಾಗಿಲಿಗೆ ಬಂದು ಒತ್ತಾಯಿಸಿದ್ದ ಡಿ.ಕೆ. ಶಿವಕುಮಾರ್​ ಸೇರಿ ಅನೇಕ ಹಿರಿಯ ನಾಯಕರು, ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಹುದ್ದೆ ನೀಡುವುದಾಗಿ ವಚನ ನೀಡಿದ್ದರು. ಅದೇ ಡಿ.ಕೆ. ಶಿವಕುಮಾರ್​ ಅವರು ಡಿಸಿಎಂ ಆದರೂ ತಮ್ಮ ವಚನ ಪಾಲಿಸಲಿಲ್ಲ. ಸಚಿವ ಸಂತೋಷ್​ ಲಾಡ್​ ಅವರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾದರೂ ಭರವಸೆ ಸಿಕ್ಕಿತೇ ಹೊರತು ಯಾವುದೇ ಹುದ್ದೆ ಸಿಗಲಿಲ್ಲ ಎಂದರು

ನಾನು ಬಂಡಾಯ ಅಭ್ಯಥಿರ್ಯಲ್ಲ, ಅಹಿಂದ ಸಂಘಟನೆಯ ಅಭ್ಯಥಿರ್. ಹಿಂದುಳಿದ ವರ್ಗಗಳನ್ನು ಕಡೆಗಣಿಸಿದರೆ ನಮಗೂ ಸ್ವಾಭಿಮಾನವಿದೆ ಎಂಬುದನ್ನು ತೋರಿಸಲು ಸ್ಪಧಿರ್ಸುತ್ತಿದ್ದೇನೆ. ಇಷ್ಟು ದಿನ ಕಾದಿದ್ದೇನೆ. ಸಂಧಾನಕ್ಕೆ ಬಂದು ಬಾಯಿ ಮಾತಿನ ಭರವಸೆ ಕೊಟ್ಟರೆ ಒಪ್ಪುವುದಿಲ್ಲ. ನನ್ನ ಬೆಂಬಲಿಗರು ಮತ್ತು ಅಹಿಂದ ಸಂಘಟನೆಯ ಮುಖಂಡರೊಂದಿಗೆ ಚಚಿರ್ಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net