

ಹುಬ್ಬಳ್ಳಿ: ಕಡಿಮೆ ದರದಲ್ಲಿ ಐಪೋನ್ 18 ಪ್ರೋ ಸೀರೀಸ್‌ನ ಎರಡು ಮೊಬೈಲ್ ಫೋನ್ ನೀಡುವುದಾಗಿ ನಂಬಿಸಿದ ವಂಚಕರು, ಧಾರವಾಡದ ವಿದ್ಯಾರ್ಥಿಯೊಬ್ಬರ ಬ್ಯಾಂಕ್ ಖಾತೆಯಿಂದ ಆನ್‌ಲೈನ್ ಮೂಲಕ 2.20 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಪೃಥ್ವಿರಾಜ ಸಿ. ಎಂಬ ವಿದ್ಯಾರ್ಥಿ ವಂಚನೆಗೆ ಒಳಗಾಗಿದ್ದಾರೆ. ಒಎಲ್‌ಎಕ್ಸ್ ಅಪ್ಲಿಕೇಷನ್‌ನಲ್ಲಿದ್ದ ಜಾಹೀರಾತಿನಲ್ಲಿ ಕಡಿಮೆ ದರದ ಐಫೋನ್ ನೀಡುವುದಾಗಿ ನಂಬಿಸಿದ್ದಾರೆ. ಇದನ್ನು ನಂಬಿದ ಪೃಥ್ವಿರಾಜ್ ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ 2.20 ಲಕ್ಷ ರೂ. ಹಂತ ಹಂತವಾಗಿ ವಂಚಕರ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.