

ಹುಬ್ಬಳ್ಳಿ: ನ್ಯೂ ಭಾರತ ಟ್ರೇಡ್ ಲಿಂಕ್ ಹೆಸರಿನ ಕಂಪನಿಯ ಎಪಿಕೆ ಫೈಲ್ ಕಳುಹಿಸಿದ ವಂಚಕರು, ವೈದ್ಯೆಯೊಬ್ಬರ ಬ್ಯಾಂಕ್ ಖಾತೆಯಿಂದ ಆನ್‌ಲೈನ್ ಮೂಲಕ 1.94 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಗಣೇಶಪೇಟೆಯ ರೂಪಾ ವಂಚನೆಗೆ ಒಳಗಾಗಿದ್ದಾರೆ. ನವಲಗುಂದ ಸಾರ್ವಜನಿಕ ಆಸ್ಪತ್ರೆಗೆ ಸಂಬಂಧಿಸಿದ ಸಾಮಗ್ರಿಗಳನ್ನು 2022ರಲ್ಲಿ ಈ ಕಂಪನಿಯಿಂದ ಖರಿದಿಸಿದ್ದರು. 2026 ನವೆಂಬರ್‌ನಲ್ಲಿ ಆಸ್ಪತ್ರೆಗೆ ಸಂಬಂಧಿಸಿದ ಆಡಿಟ್ ಇರುವುದರಿಂದ ವೋಚರ್‌ಗಾಗಿ ಗೂಗಲ್‌ನಲ್ಲಿ ಕಂಪನಿ ಹೆಸರಿನಿಂದ ಸರ್ಚ್ ಮಾಡಿದ್ದಾರೆ. ಅದರಲ್ಲಿದ್ದ ಫೋನ್ ಸಂಖ್ಯೆಗೆ ಕರೆ ಮಾಡಿದಾಗ, ಅಪರಿಚಿತರು ಎಪಿಕೆ ಫೈಲ್ ಡೌನಲೋಡ್ ಮಾಡಿಸಿ, ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.