ಇನ್‌ಸ್ಟಾಗ್ರಾಮ್ ಸ್ಟೇಟಸ್ ವಿಚಾರವಾಗಿ ಹಲ್ಲೆ

asualut on youth
ಇನ್‌ಸ್ಟಾಗ್ರಾಮ್ ಅಡಿಕ್ಷನ್ ಹಿಂದಿರುವ ರಹಸ್ಯ ಬಯಲು! ಆಂತರಿಕ ವರದಿ ಮುಚ್ಚಿಟ್ಟು ಯುವಕರನ್ನು ಬಲಿಯಾಗಿಸಿತೇ ಮೆಟಾ? Instagram Addiction
Published on: 

ಹುಬ್ಬಳ್ಳಿ: ಇನ್‌ಸ್ಟಾಗ್ರಾಮ್ ಸ್ಟೇಟಸ್ ವಿಚಾರವಾಗಿ ಆರು ಜನರ ಗುಂಪೊಂದು ಯುವಕನ ಮೇಲೆ ನಡೆಸಿದ ಘಟನೆ ಇಲ್ಲಿಯ ಗಬ್ಬೂರ ಸಮೀಪ ಗುರುವಾರ ಸಂಜೆ ನಡೆದಿದೆ.

ಸಾಧಿಕ್ (24) ಹಲ್ಲೆಗೊಳಗಾದ ಯುವಕ. ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿದ್ದ ಸ್ಟೇಟ್ ಬೆಂಡಿಗೇರಿ ಪ್ರದೇಶದ ಯುವಕರ ಗುಂಪೊಂದಕ್ಕೆ ಆಕ್ರೋಶ ತರಿಸಿತ್ತು ಎನ್ನಲಾಗಿದೆ.

ಆ ಗುಂಪು ಸಾಧಿಕ್‌ನನ್ನು ಗಬ್ಬೂರ ಸಮೀಪ ಕರೆಸಿದೆ. ಅಲ್ಲಿಂದ ಆತನನ್ನು ಕಾರ್‌ನಲ್ಲಿ ಕರೆದೊಯ್ದು ಹಲ್ಲೆ ನಡೆಸಿ, ಪ್ರಜ್ಞೆ ತಪ್ಪಿದ ನಂತರ ಬಿಟ್ಟು ಪರಾರಿಯಾಗಿದೆ.

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಾಧಿಕ್‌ನನ್ನು ಸಾರ್ವಜನಿಕರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಡಿಸಿಪಿ ಶ್ರುತಿ ಎನ್.ಎಸ್., ಎಸಿಪಿ ಉಮೇಶ ಚಿಕ್ಕಮಠ ನೇತೃತ್ವದ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಯುವಕನ್ನು ಕೆಎಂಸಿಆರ್‌ಐಗೆ ದಾಖಲಿಸಿದ್ದಾರೆ. ಸಾಧಿಕ್ ಚೇತರಿಸಿಕೊಳ್ಳುತ್ತಿದ್ದಾನೆ ಎನ್ನಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತರು ಸೇರಿ ಆರು ಜನರನ್ನು ಬಂಧಿಸಿದ್ದು, ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೆ ನಿಖರ ಕಾರಣ ಪತ್ತೆ ಹಚ್ಚಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net