ಹುಬ್ಬಳ್ಳಿ: ರೈಲ್ವೆ ಹಳಿಗೆ ಬಿದ್ದು ಯುವಕನೊಬ್ಬ Youth dies ಮೃತಪಟ್ಟ ಘಟನೆ ಗುರುವಾರ ಮಧ್ಯಾಹ್ನ ಇಲ್ಲಿಯ ಲೋಕಪ್ಪನಹಕ್ಕಲ ಬಳಿ ನಡೆದಿದೆ.
ಕೇಶ್ವಾಪುರದ ನಿವಾಸಿ ವಿನೋದ ಎಂ. (25) ಮೃತ ಯುವಕ. ಹೋಟೆಲ್‌ನಲ್ಲಿ ಅಡುಗೆ ಕೆಲಸ ಮಾಡುವ ವಿನೋದ ರೈಲಿಗೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ರೈಲ್ವೆ ಪೊಲೀಸರು ಹಾಗೂ ಅಶೋಕನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.