_1786979407464.webp?w=480&auto=format%2Ccompress&fit=max)
_1786979407464.webp?w=480&auto=format%2Ccompress&fit=max)
ಧಾರವಾಡ: ಯುವ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕಬ್ಬೇನೂರ ಗ್ರಾಮದಲ್ಲಿ ಸೋಮವಾರ ನಡೆದಿದೆ. ಕಬ್ಬೇನೂರ ಗ್ರಾಮದ ಬಸವರಾಜ ಮುತವಾಡ (25) ಆತ್ಮಹತ್ಯೆ ಮಾಡಿಕೊಂಡವನು. ಬಸವರಾಜ ಲಾವಣಿ ರೂಪದಲ್ಲಿ ಸುಮಾರು 20 ಎಕರೆ ಹೊಲ ಮಾಡಿದ್ದ. ಸಮರ್ಪಕ ಮಳೆಯಾಗದ ಕಾರಣ ಹೊಲದಲ್ಲಿ ಬಿತ್ತನೆ ಮಾಡಿದ್ದ ಉದ್ದಿನ ಬೆಳೆ ಕೈಗೆಟುಕದೆ ಮನನೊಂದು ವಿಷ ಸೇವಿಸಿದ್ದ ಎನ್ನಲಾಗಿದೆ. ಹುಬ್ಬಳ್ಳಿಯ ಕೆಎಂಸಿಆರ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ಈತ ಬ್ಯಾಂಕ್ ಹಾಗೂ ಕೈಗಡ ಸಾಲ ಪಡೆದಿದ್ದ ಎಂದು ತಿಳಿದುಬಂದಿದೆ. ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.