yogaday ಯೋಗಾಭ್ಯಾಸದಿಂದ ಜೀವನದಲ್ಲಿ ಚೈತನ್ಯ ಸೃಜನೆ

ಅಂತಾರಾಷ್ಟ್ರೀಯ ಯೋಗ ದಿನ yogaday ನಿಮಿತ್ತ ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಲ್ಲಿ ಯೋಗ ಬಂಧುಗಳು ಭಾನುವಾರ ಪ್ರಾಣಾಯಾಮ ಮಾಡಿದರು.
ಅಂತಾರಾಷ್ಟ್ರೀಯ ಯೋಗ ದಿನ yogaday ನಿಮಿತ್ತ ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಲ್ಲಿ ಯೋಗ ಬಂಧುಗಳು ಭಾನುವಾರ ಪ್ರಾಣಾಯಾಮ ಮಾಡಿದರು.
Published on
ಹುಬ್ಬಳ್ಳಿ: ನಿತ್ಯ yogaday ಯೋಗಾಭ್ಯಾಸ ಮಾಡುವುದರಿಂದ ಜೀವನದಲ್ಲಿ ಚೈತನ್ಯ ಬರುತ್ತದೆ. ಬದುಕು ಸಾರ್ಥಕವೆನಿಸುತ್ತದೆ ಎಂದು ಧಾರವಾಡ ಐಐಟಿ ನಿರ್ದೇಶಕ ವೆಂಕಪ್ಪಯ್ಯ ಆರ್. ದೇಸಾಯಿ ಅಭಿಪ್ರಾಯಪಟ್ಟರು.
ಕನ್ನಡ ನಂ. 1 ದಿನಪತ್ರಿಕೆ ‘ವಿಜಯವಾಣಿ’ ಮಾಧ್ಯಮ ಸಹಯೋಗದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಯೋಗ ಸ್ಪರ್ಶ ಪ್ರತಿಷ್ಠಾನ ವತಿಯಿಂದ ಇಲ್ಲಿಯ ಇಂದಿರಾ ಗಾಜಿನ ಮನೆಯಲ್ಲಿ ಭಾನುವಾರ ಏರ್ಪಡಿಸಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯೋಗವೆಂದರೆ ಕೂಡುವುದು. ಮನಸ್ಸು, ಬುದ್ಧಿ, ಆತ್ಮಗಳ ಸಮ್ಮಿಲನ. ಯೋಗಾಭ್ಯಾಸದಿಂದ ಮನಸ್ಸು ಶಾಂತವಾಗಿರುತ್ತದೆ. ಒತ್ತಡ ರಹಿತ ಜೀವನ ಸಾಗುತ್ತದೆ. ಸಾರ್ಥಕ ಜೀವನದ ಕಾರ್ತಿಕೋತ್ಸವ ಎಲ್ಲರಲ್ಲಿಯೂ ಆಗಲಿ ಎಂದು ಹಾರೈಸಿದರು.
ಎಸ್‌ಪಿವೈಎಸ್‌ಎಸ್ ಶಿಕ್ಷಕ, ನಿವೃತ್ತ ಬ್ಯಾಂಕ್ ಅಧಿಕಾರಿ ದತ್ತಾತ್ರೇಯ ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಯೋಗವೆಂದರೆ ಬರೀ ಆಸನವಲ್ಲ. ಅದೊಂದು ಜೀವನ ಪದ್ಧತಿ. ಪತಂಜಲಿ ಮಹರ್ಷಿಗಳು ನಮಗಾಗಿ ಜೀವನದ ಸೂತ್ರಗಳನ್ನು ಹೇಳಿಕೊಟ್ಟಿದ್ದಾರೆ. ಅದರಂತೆ ನಡೆದರೆ ನಮ್ಮ ಬದುಕು ಹಸನವಾಗುತ್ತದೆ. ಸಾಧಿಸಬೇಕೆಂಬ ಮನಸ್ಸು ಜಾಗೃತಗೊಳ್ಳುತ್ತದೆ ಎಂದರು.
ಎಸ್‌ಪಿವೈಎಸ್‌ಎಸ್ ಕೃಷ್ಣಾ ವಲಯ ಸಂಚಾಲಕಿ ಅಕ್ಕಮಹಾದೇವಿ ಗಣಾಚಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಭಾರತದ ಯೋಗವನ್ನು ವಿಶ್ವ ಮಟ್ಟದಲ್ಲಿ ಪ್ರಚುರಪಡಿಸಿದರು. ಇದಕ್ಕೆ ವಿಶ್ವ ಸಂಸ್ಥೆಯಲ್ಲಿ ಮಾನ್ಯತೆ ಸಿಗುವಂತೆ ಮಾಡಿದರು. ಪರಿಣಾಮ 177 ದೇಶಗಳು ಇದಕ್ಕೆ ಒಪ್ಪಿಕೊಂಡವು. ಇದಕ್ಕೆ ಕಾರಣ ಯೋಗಕ್ಕೆ ಇರುವ ಶಕ್ತಿ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಯೋಗವನ್ನು ನಾವೆಲ್ಲರೂ ನಿತ್ಯ ಜೀವನದಲ್ಲಿ ಅಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.
ಖ್ಯಾತ ಛಾಯಾಗ್ರಾಹಕ ಗೌರವ ಮನೀಶ ಖೋನಾ, ಸಂಚಾಲಕರಾದ ಅನಿಲ ಲದವಾ, ನಿರ್ಮಲಾ ಅಡವಿ, ಯೋಗ ಸ್ಪರ್ಶ ಪ್ರತಿಷ್ಠಾನದ ಅಧ್ಯಕ್ಷ ದಯಾನಂದ ಮಗಜಿಕೊಂಡಿ, ಎಸ್‌ಪಿವೈಎಸ್‌ಎಸ್‌ನ ಜಿಲ್ಲಾ ಸಂಚಾಲಕರಾದ ಗೋಪಾಲಕೃಷ್ಣ ಜೋಶಿ, ಅಮರವಾತಿ ಗಾಣಗಿ, ಪ್ರಸನ್ನ ದೀಕ್ಷಿತ, ಇತರರಿದ್ದರು.
ಗಾಯತ್ರಿ ಜೋಶಿ ನೇತೃತ್ವದಲ್ಲಿ ಬೆಳಗ್ಗೆ ಯೋಗಾಭ್ಯಾಸ, ಪ್ರಾಣಾಯಾಮ ನಡೆದಿದ್ದು, ಬಹಳಷ್ಟು ಯೋಗ ಬಂಧುಗಳ ಭಾಗವಹಿಸಿದ್ದರು.
ರೋಹಿಣಿ ಪಾಟೀಲ ನಿರ್ವಹಿಸಿದರು. ರಾಜೇಶ್ವರಿ ಬಳಗಾನೂರ ಪ್ರಾರ್ಥಿಸಿದರು. ಪ್ರವೀಣ ಮಲ್ಲಾಪುರ ಅತಿಥಿಗಳನ್ನು ಪರಿಚಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net