ಪ್ರಿಯದರ್ಶಿನಿ ಕಾಲನಿಯಲ್ಲಿನ ಡಾ. ಆರ್. ಬಿ. ಪಾಟೀಲ ಮಹೇಶ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಅಂತಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಯೋಗದಿಂದ ಕ್ರಿಯಾಶೀಲ ವ್ಯಕ್ತಿತ್ವ ನಿರ್ಮಾಣ ಸಾಧ್ಯ. ನಿತ್ಯ ಜೀವನದಲ್ಲಿ ಯೋಗಾಭ್ಯಾಸ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಚಾರ್ಯ ರಾಮ ಮೋಹನ ಎಚ್. ಕೆ. ಮಾತನಾಡಿ, ಯೋಗ ಮನುಷ್ಯನನ್ನು ಕ್ರಿಯಾಶೀಲಗೊಳಿಸುತ್ತದೆ. ಯೋಗದಿಂದ ಮಾನಸಿಕ ಹಾಗೂ ದೈಹಿಕ ಶಕ್ತಿಯು ವೃದ್ಧಿಗೊಳ್ಳುತ್ತದೆ. ದೇಹ ಮತ್ತು ಮನಸ್ಸನ್ನು ಸದೃಡವಾಗಿಡಲು ಪ್ರತಿದಿನ ಯೋಗಾಭ್ಯಾಸ ಅವಶ್ಯ ಎಂದು ಹೇಳಿದರು.
ಅತಿಥಿಯಾಗಿದ್ದ ಶ್ರೀ ದತ್ತಾ ಯೋಗ ಕೇಂದ್ರದ ಯೋಗ ತರಬೇತುದಾರ ಅನಿಲಕುಮಾರ ಆನವಟ್ಟಿ ಅವರು ವಿದ್ಯಾರ್ಥಿಗಳಿಗೆ ವಿವಿಧ ಪ್ರಕಾರದ ಯೋಗ ಮಾಡಿಸಿ, ಯೋಗಾಸನದ ಮಹತ್ವ ತಿಳಿಸಿದರು.
ಉಪಪ್ರಾಂಶುಪಾಲ ರಮೇಶ ಹೊಂಬಾಳಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಶ್ರೀನಿವಾಸ ಮಠದ, ಉಪನ್ಯಾಸಕರಾದ ಭಾಗ್ಯಲಕ್ಷ್ಮೀ ಅಂಗಡಿ, ಅಭಿಷೇಕ ರಾಯರೆಡ್ಡಿ ಹಾಗೂ ಇತರರಿದ್ದರು.