ಅಗ್ನಿಹೋತ್ರದೊಂದಿಗೆ ಯೋಗ ವೈಜ್ಞಾನಿಕ ಸಂಗಮ Yoga

Yoga ಹುಬ್ಬಳ್ಳಿಯ ಸೇವಾ ಭಾರತಿ ಮಾತೃ ಛಾಯಾ ಕಲ್ಯಾಣ ಕೇಂದ್ರದಲ್ಲಿ ಏರ್ಪಡಿಸಿದ್ದ ಅಗ್ನಿಹೋತ್ರ ಕಾರ್ಯಕ್ರಮದೊಂದಿಗೆ ವಿಶ್ವ ಯೋಗದಿನದ ಕಾರ್ಯಕ್ರಮದಲ್ಲಿ ಕೇಂದ್ರದ ಅಧ್ಯಕ್ಷೆ ಕಮಲಾ ಜೋಶಿ, ಪ್ರಿಯಾ ದಾವುಸ್ಕರ, ಯೋಗ ಗುರು ಉತ್ತಮ್ ಹಾಗೂ ಇತರರು ಪಾಲ್ಗೊಂಡಿದ್ದರು.
Yoga ಹುಬ್ಬಳ್ಳಿಯ ಸೇವಾ ಭಾರತಿ ಮಾತೃ ಛಾಯಾ ಕಲ್ಯಾಣ ಕೇಂದ್ರದಲ್ಲಿ ಏರ್ಪಡಿಸಿದ್ದ ಅಗ್ನಿಹೋತ್ರ ಕಾರ್ಯಕ್ರಮದೊಂದಿಗೆ ವಿಶ್ವ ಯೋಗದಿನದ ಕಾರ್ಯಕ್ರಮದಲ್ಲಿ ಕೇಂದ್ರದ ಅಧ್ಯಕ್ಷೆ ಕಮಲಾ ಜೋಶಿ, ಪ್ರಿಯಾ ದಾವುಸ್ಕರ, ಯೋಗ ಗುರು ಉತ್ತಮ್ ಹಾಗೂ ಇತರರು ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಗ್ನಿಹೋತ್ರ ಕಾರ್ಯಕ್ರಮದೊಂದಿಗೆ ವಿಶ್ವ ಯೋಗದಿನದ ಕಾರ್ಯಕ್ರಮ
  • ಯೋಗದಿಂದ ಮಾನಸಿಕ ಶಾಂತಿ ದೊರಕುವ ಜತೆಗೆ ದೈಹಿಕ ಸಾಮರ್ಥ್ಯವೂ ಹೆಚ್ಚುತ್ತದೆ
  • ಮಕ್ಕಳಿಗೆ ಚಿಕ್ಕವರಿದ್ದಾಗಿಂದಲೇ ಯೋಗಾಭ್ಯಾಸ ರೂಢಿಸಬೇಕು.
ಹುಬ್ಬಳ್ಳಿ :
ವಿಶ್ವ ಯೋಗದಿನದ ಅಂಗವಾಗಿ ಸೇವಾ ಭಾರತಿ ಮಾತೃ ಛಾಯಾ ಕಲ್ಯಾಣ ಕೇಂದ್ರದಲ್ಲಿ ಏರ್ಪಡಿಸಿದ್ದ ಅಗ್ನಿಹೋತ್ರ ಕಾರ್ಯಕ್ರಮದೊಂದಿಗೆ ವಿಶ್ವ ಯೋಗದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿ ವರ್ಷ ಜೂನ್ 21 ರಂದು ವಿಶ್ವಾದ್ಯಂತ ವಿಶ್ವ ಯೋಗ ದಿನವನ್ನು ಆಚರಿಸಲಾಗುತ್ತಿದ್ದು, ಇದರೊಂದಿಗೆ ವೈದಿಕ ಪರಂಪರೆಯ ಅಗ್ನಿಹೋತ್ರವನ್ನು ಜೋಡಿಸುವುದರಿಂದ ಯೋಗಾಭ್ಯಾಸದ ದೈಹಿಕ ಮತ್ತು ಮಾನಸಿಕ ಪ್ರಯೋಜನಗಳು ದ್ವಿಗುಣಗೊಳ್ಳುತ್ತವೆ ಎಂದು ತಿಳಿಸಿದರು.
ಯೋಗವು ದೇಹ ಮತ್ತು ಮನಸ್ಸನ್ನು ಪ್ರಾಣಾಯಾಮ ಹಾಗೂ ಆಸನಗಳ ಮೂಲಕ ಶುದ್ಧೀಕರಿಸಿದರೆ, ಅಗ್ನಿಹೋತ್ರವು ಸುತ್ತಲಿನ ವಾತಾವರಣವನ್ನು ಶುದ್ಧಗೊಳಿಸುತ್ತದೆ ಎಂದು ಹೇಳಿದರು.
ಯೋಗದಿಂದ ಮಾನಸಿಕ ಶಾಂತಿ ದೊರಕುವ ಜತೆಗೆ ದೈಹಿಕ ಸಾಮರ್ಥ್ಯವೂ ಹೆಚ್ಚುತ್ತದೆ. ನಿತ್ಯ ಯೋಗಾಭ್ಯಾಸ ರೂಢಿಸಿಕೊಂಡರೆ ಜೀವನವು ರೋಗಮುಕ್ತ ಹಾಗೂ ಸಂತೋಷಭರಿತವಾಗುತ್ತದೆ ಎಂದರು.
ಅತಿಥಿಯಾಗಿದ್ದ ಪ್ರಿಯಾ ದಾವುಸ್ಕರ ಮಾತನಾಡಿ, ಪಾಲಕರು ತಮ್ಮ ಮಕ್ಕಳಿಗೆ ಚಿಕ್ಕವರಿದ್ದಾಗಿಂದಲೇ ಯೋಗಾಭ್ಯಾಸ ರೂಢಿಸಬೇಕು. ಆ ಮೂಲಕ ಬಾಲ್ಯದಿಂದಲೇ ಅವರನ್ನು ಮಾನಸಿಕ ಹಾಗೂ ದೈಹಿಕವಾಗಿ ಸದೃಢಗೊಳಿಸಬೇಕು ಎಂದು ಸಲಹೆ ನೀಡಿದರು.
ಯೋಗ ಗುರು ಉತ್ತಮ್ ಶಿಬಿರ ನಡೆಸಿಕೊಟ್ಟರು. ಅನಿತಾ ಪಾಟೀಲ, ಅರ್ಚನಾ ಜೋಶಿ, ನಂದಾ ಸವಡಿ ಹಾಗೂ ಇತರರಿದ್ದರು. ನಮ್ರತಾ ಜೋಶಿ ಪ್ರಾರ್ಥಿಸಿದರು. ಮಾತಾಜಿ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net