ಹಿಂದೂ ಧರ್ಮದಲ್ಲಿನ ಪೂಜೆ, ಪುನಸ್ಕಾರ ಬೇರೆಡೆ ಇಲ್ಲ Hinduism

Hinduism ಹುಬ್ಬಳ್ಳಿಯಲ್ಲಿ ಏರ್ಪಡಿಸಿದ್ದ ತ್ರಿಶೂಲ ದೀಕ್ಷಾ ಕಾರ್ಯಕ್ರಮದಲ್ಲಿ ದೀಕ್ಷೆ ಪಡೆದ ಮಹಿಳೆಯರೊಂದಿಗೆ ಸನಾತನ ಧರ್ಮದ ಪ್ರಚಾರಕಿ ಮೀನಾಕ್ಷಿ ಶೇರಾವತ್, ಭವ್ಯಾ ಗೌಡ, ಶ್ರೀ ಮಾತಾಜಿ ತೇಜೋಮಯಿ, ಪ್ರಮೋದ ಮುತಾಲಿಕ ಹಾಗೂ ಇತರರಿದ್ದರು.
Hinduism ಹುಬ್ಬಳ್ಳಿಯಲ್ಲಿ ಏರ್ಪಡಿಸಿದ್ದ ತ್ರಿಶೂಲ ದೀಕ್ಷಾ ಕಾರ್ಯಕ್ರಮದಲ್ಲಿ ದೀಕ್ಷೆ ಪಡೆದ ಮಹಿಳೆಯರೊಂದಿಗೆ ಸನಾತನ ಧರ್ಮದ ಪ್ರಚಾರಕಿ ಮೀನಾಕ್ಷಿ ಶೇರಾವತ್, ಭವ್ಯಾ ಗೌಡ, ಶ್ರೀ ಮಾತಾಜಿ ತೇಜೋಮಯಿ, ಪ್ರಮೋದ ಮುತಾಲಿಕ ಹಾಗೂ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಲ್ಲ ಧರ್ಮಗಳು ಸಮಾನವಲ್ಲ
  • ತ್ರಿಶೂಲ ದೀಕ್ಷಾ ಕಾರ್ಯಕ್ರಮದಲ್ಲಿ ಮೀನಾಕ್ಷಿ ಶೇರಾವತ್ ಅಭಿಮತ
ಹುಬ್ಬಳ್ಳಿ :
ಹಿಂದೂ ಮಹಿಳೆಯರ ರಕ್ಷಣೆಗಾಗಿ ಶ್ರೀರಾಮ ಸೇನೆ ಹಾಗೂ ದುರ್ಗಾ ಸೇನೆ ವತಿಯಿಂದ ಭಾನುವಾರ ಆಯೋಜಿಸಿದ್ದ ತ್ರಿಶೂಲ ದೀಕ್ಷಾ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.
ಹಿಂದೂ ಧರ್ಮ ಹಾಗೂ ಇನ್ನಿತರ ಧರ್ಮಗಳ ಆಚಾರ, ವಿಚಾರಗಳು ಬೇರೆಯಾಗಿವೆ. ಆದರೂ, ಎಲ್ಲ ಧರ್ಮಗಳು ಸಮಾನ ಅಥವಾ ಒಂದೇ ಎಂದು ಏಕೆ ಹೇಳಬೇಕು ? ಕಾಫೀರರನ್ನು ಹತ್ಯೆ ಮಾಡಬೇಕೆನ್ನುವವರೊಂದಿಗೆ ಸಮಾನತೆ ಸಾಧಿಸಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದರು.
ನಿಗದಿತ ಸಮುದಾಯದಿಂದಾಗಿ ಹಿಂದೂ ಧರ್ಮ ಅಪಾಯದಲ್ಲಿ ಇದೆ. ಆದರೆ, ಸನಾತನ ಧರ್ಮ ಅಪಾಯದಲ್ಲಿ ಇಲ್ಲ. ಸನಾತನ ಧರ್ಮಕ್ಕೆ ರಕ್ಷಣೆಯ ಅಗತ್ಯ ಇಲ್ಲ, ಬದಲಾಗಿ ಅದನ್ನು ಪಾಲಿಸುವ ಅಗತ್ಯವಿದೆ ಎಂದು ತಿಳಿಸಿದರು.
ಅನ್ಯ ಧರ್ಮದಲ್ಲಿ ಲವ್ ಜಿಹಾದ್​ಗಾಗಿ ತರಬೇತಿ ಕೊಡುತ್ತಾರೆ. ಹಿಂದೂ ಮಹಿಳೆಯರನ್ನು ಪ್ರೀತಿಯ ಬಲೆಗೆ ಬೀಳಿಸುವ ಪ್ರಯತ್ನಗಳು ಹೆಚ್ಚುತ್ತಿವೆ.
ಇದನ್ನು ತಡೆಯಬೇಕೆಂದರೆ ನಮ್ಮ ಭಾರತದ ಇತಿಹಾಸ ಹಾಗೂ ಸನಾತನ ಧರ್ಮದ ಬಗ್ಗೆ ಪಾಲಕರು ತಮ್ಮ ಮಕ್ಕಳಿಗೆ ತಿಳಿಹೇಳಬೇಕು. ಲವ್​ಜಿಹಾದ್​ಗೆ ಯತ್ನಿಸುವವರಿಗೆ ತಕ್ಕ ಪಾಠ ಕಲಿಸಬೇಕು ಎಂದರು.
ಹಿಂದೂ ಧರ್ಮದಲ್ಲಿ ಅಹಿಂಸಾ ಪರಮೋ ಧರ್ಮ ಎನ್ನುತ್ತಾರೆ. ಆದರೆ, ನನ್ನ ಹಾಗೂ ನನ್ನ ದೇಶದ ರಕ್ಷಣೆಗೆ ಆಯುಧ ಕೈಯಲ್ಲಿ ಹಿಡಿದರೆ ತಪ್ಪಿಲ್ಲ. ಮಕ್ಕಳಿಗೆ ಹಿಂದೂ ಸಂಪ್ರದಾಯ, ಸಂಸ್ಕೃತಿಯನ್ನು ಮಕ್ಕಳಿಗೆ ಹೇಳಿಕೊಡಬೇಕು. ಇದಕ್ಕಾಗಿ ಪ್ರತಿ ಮನೆ ಗುರುಕುಲಗಳಾಗಬೇಕು ಎಂದು ಸಲಹೆ ನೀಡಿದರು.
ಹಿಂದೂ ಜನಜಾಗೃತಿಯ ಭವ್ಯಾ ಗೌಡ ಮಾತನಾಡಿ, ಸುಶಿಕ್ಷಿತರ ತಾಣವಾಗಿದ್ದ ಹುಬ್ಬಳ್ಳಿ-ಧಾರವಾಡದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿವೆ. ನೇಹಾ ಹಿರೇಮಠ ಹತ್ಯೆಗೂ ಲವ್​ಜಿಹಾದ್​ಗೂ ಸಂಬಂಧ ಇದೆ ಎಂದರು.
ಹೆಚ್ಚುತ್ತಿರುವ ಲವ್ ಜಿಹಾದ್​ಗೆ ಸರ್ಕಾರ ಅಷ್ಟೇ ಹೊಣೆ ಅಲ್ಲ. ಇದನ್ನು ತಡೆಯುವಲ್ಲಿ ಪಾಲಕರ ಜವಾಬ್ದಾರಿಯೂ ಪ್ರಮುಖವಾಗಿದೆ. ಪಾಲಕರು ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು. ಫ್ಯಾಷನ್ ಹೆಸರಿನಲ್ಲಿ ನಮ್ಮ ಸಂಸ್ಕೃತಿಯಿಂದ ಮಕ್ಕಳು ದೂರವಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಇಂಜಿನಿಯರ್, ಡಾಕ್ಟರ್​ನಂತಹ ಉನ್ನತ ಸ್ಥಾನಗಳಲ್ಲಿ ಇರಬೇಕಾದ ಹೆಣ್ಣು ಮಕ್ಕಳು ಲವ್​ಜಿಹಾದ್​ಗೆ ಬಲಿಯಾಗುತ್ತಿದ್ದಾರೆ. ನಮ್ಮ ಸಂಸ್ಕಾರವೇ ಮಕ್ಕಳಿಗೆ ರಕ್ಷಣಾ ಕವಚ ಆಗಲಿದೆ ಎಂದರು.
ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಮಾತನಾಡಿ, ಮಹಿಳೆಯರಿಗೆ ತ್ರಿಶೂಲ ನೀಡುತ್ತಿರುವುದು ಕೇವಲ ಕೈಯಲ್ಲಿ ಹಿಡಿದುಕೊಂಡು ಪ್ರತಿಜ್ಞೆ ಮಾಡುವುದಕ್ಕಾಗಿ ಅಲ್ಲ.
ತಮ್ಮ ವ್ಯಾನಿಟಿ ಬ್ಯಾಗ್​ಗಳಲ್ಲಿ ಈ ತ್ರಿಶೂಲಗಳನ್ನು ಒಟ್ಟುಕೊಂಡು, ತಮ್ಮ ರಕ್ಷಣೆಗೆ ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಘಜನಿ, ಘೋರಿ, ಟಿಪು್ಪ ಸುಲ್ತಾನರಂತಹ ಅನೇಕರು ಹಿಂದೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಸಿದ್ದನ್ನು ಮರೆಯಬಾರದು. ಭಾರತವನ್ನು ಇಸ್ಲಾಂ ಅಥವಾ ಕ್ರಿಶ್ಚಿಯನ್ ದೇಶವನ್ನಾಗಿ ಮಾಡುವ ಕುತಂತ್ರ ನಡೆಯುತ್ತಿದೆ.
ಸಮಾಜ ಸೇವೆ ಹೆಸರಿನಲ್ಲಿ ಕೆಲ ಧರ್ಮದವರು ನಡೆಸುತ್ತಿರುವ ಶಾಲೆ, ಅನಾಥಾಶ್ರಮಗಳೆಲ್ಲ ಡೋಂಗಿ. ಅಲ್ಲೆಲ್ಲ ಹಿಂದೂಗಳನ್ನು ಮತಾಂತರ ಮಾಡಲಾಗುತ್ತಿದೆ. ಹಿಂದೂಗಳ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಆಶೀರ್ವಚನ ನೀಡಿದ ಸಾನ್ನಿಧ್ಯ ವಹಿಸಿದ್ದ ಶ್ರೀಮಾತಾ ಆಶ್ರಮದ ಅಧ್ಯಕ್ಷೆ ಶ್ರೀ ಮಾತಾಜಿ ತೇಜೋಮಯಿ, ದೇಹ ಕಾಣುವಂತೆ ಬಟ್ಟೆ ಹಾಕಿಕೊಳ್ಳುವುದು ಮಾಡರ್ನ್ ಅಲ್ಲ. ಬದಲಾಗಿ, ಹೊಸ ಚಿಂತನೆ, ವಿಚಾರಗಳನ್ನು ಮೈಗೂಡಿಸಿಕೊಂಡು, ನಮ್ಮ ಸಂಸ್ಕೃತಿ ಪಾಲಿಸಿಕೊಂಡು ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರುವುದು ಮಾಡರ್ನ್.
ಆದರೆ, ಯುವ ಜನತೆ ಫ್ಯಾಷನ್ ಹೆಸರಿನಲ್ಲಿ ನಮ್ಮ ಸಂಸ್ಕೃತಿ ಮರೆಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಹಿಂದೂ ಮಹಿಳೆಯರಿಗೆ ತ್ರಿಶೂಲ ನೀಡಿ, ದೀಕ್ಷೆ ಕೊಡಲಾಯಿತು.
ಶ್ರೀರಾಮ ಸೇನಾ ಉತ್ತರ ಪ್ರಾಂತ ಗೌರವಾಧ್ಯಕ್ಷ ಶ್ರೀ ಸತ್ಯಪ್ರಮೋದೆಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿದರು. ಗೋಕುಲ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಶ್ರೀ ಮೋಹನ ಗುರುಸ್ವಾಮಿ, ಎಸ್​ಎಸ್​ಕೆ ಸಮಾಜ ಮಹಿಳಾ ಘಟಕದ ರಾಜ್ಯಾಧ್ಯಕ್ಷ ರಾಜಶ್ರೀ ಜಡಿ, ಜಿತೇಂದ್ರ ಮಜೇಥಿಯಾ ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net