’ತುರ್ತ ಸಂದರ್ಭ‘ ತಂಡವಾಗಿ ಕೆಲಸ ಮಾಡಿ team

team ಮಳೆ ಹಾಗೂ ಬಿರುಗಾಳಿಯಿಂದ ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಉಂಟಾಗಿರುವ ಸಮಸ್ಯೆಗಳ ಕುರಿತು ಶಾಸಕ ಮಹೇಶ ಟೆಂಗಿನಕಾಯಿ ಹುಬ್ಬಳ್ಳಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
team ಮಳೆ ಹಾಗೂ ಬಿರುಗಾಳಿಯಿಂದ ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಉಂಟಾಗಿರುವ ಸಮಸ್ಯೆಗಳ ಕುರಿತು ಶಾಸಕ ಮಹೇಶ ಟೆಂಗಿನಕಾಯಿ ಹುಬ್ಬಳ್ಳಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ ಶಾಸಕ ಮಹೇಶ ಟೆಂಗಿನಕಾಯಿ ಸೂಚನೆ
  • ಟೊಂಗೆಗಳ ತೆರವು ಕಾರ್ಯ ವಿಳಂಬಕ್ಕೆ ಕಿಡಿ
  • ಮಳೆಯಿಂದಾಗಿ ಹುಬ್ಬಳ್ಳಿಯ ಅರ್ಧಭಾಗಕ್ಕೆ ವಿದ್ಯುತ್ ಸಂಪರ್ಕ ಕಡಿತ
ಹುಬ್ಬಳ್ಳಿ :
team ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು ದೂರು ನೀಡುವ ಮೊದಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಒಂದು ತಂಡವಾಗಿ ಕೆಲಸ ಮಾಡಬೇಕು. ನಿತ್ಯದ ಕೆಲಸಗಳನ್ನು ಬದಿಗೊತ್ತಿ, ತುರ್ತು ಕೆಲಸಗಳನ್ನು ಮೊಸಲು ನಿರ್ವಹಿಸಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ಬುಧವಾರ ಆಯೋಜಿಸಿದ್ದ ಹು- ಧಾ ಸೆಂಟ್ರಲ್ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆ ಹಾಗೂ ಬಿರುಗಾಳಿಯಿಂದ ಉಂಟಾಗಿರುವ ವಿವಿಧ ಸಮಸ್ಯೆಗಳ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಹೆಸ್ಕಾಂ, ಮಹಾನಗರ ಪಾಲಿಕೆ, ತೋಟಗಾರಿಕೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು, ಮಳೆ ಹಾಗೂ ಗಾಳಿಯಿಂದಾದ ಹಾನಿಯ ಕುರಿತು ಮಾಹಿತಿ ನೀಡಿದರು.
ಪಾಲಿಕೆಯ 36, 47, 48 ಹಾಗೂ 49ನೇ ವಾರ್ಡ್​ಗಳಲ್ಲಿ ಹೆಚ್ಚು ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಈ ವಾರ್ಡ್​ಗಳಲ್ಲಿ ಕಳೆದ ಸೋಮವಾರ ಸಂಜೆಯಿಂದಲೇ ವಿದ್ಯುತ್ ಪೂರೈಕೆ ಕಡಿತಗೊಂಡಿದೆ ಎಂದು ಶಾಸಕರು ಹೇಳಿದರು.
ಎರಡು ದಿನಗಳ ಹಿಂದೆ ಬೀಸಿದ ಬಿರುಗಾಳಿ ಹಾಗೂ ಧಾರಾಕಾರ ಮಳೆಯಿಂದಾಗಿ ಹುಬ್ಬಳ್ಳಿಯ ಅರ್ಧಭಾಗಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಗುರುವಾರ ಸಂಜೆಯೊಳಗೆ ವಿದ್ಯುತ್ ಸರಬರಾಜು ಆರಂಭಗೊಳ್ಳಲಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದರು.
ಕಟಾವು ಮಾಡಿರುವ, ನೆಲಕ್ಕೆ ಬಿದ್ದಿರುವ ಮರಗಳನ್ನು ತಕ್ಷಣ ತೆರವುಗೊಳಿಸುವಂತೆ ಶಾಸಕ ಮಹೇಶ ಟೆಂಗಿನಕಾಯಿ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಅಗತ್ಯ ಇರುವ ಟ್ರಾ್ಯಕ್ಟರ್​ಗಳ ಸೇವೆಯನ್ನು ಮಹಾನಗರ ಪಾಲಿಕೆಯಿಂದ ಎರವಲು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
4 ದಿನಗಳಲ್ಲಿ ಗಿಡಗಳ ಟೊಂಗೆಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗುವುದು ಎಂದು ತಿಳಿಸಿದ ತೋಟಗಾರಿಕೆ ಇಲಾಖೆ ಅಧಿಕಾರಿ ಮೊಹ್ಮದ್ ಫಿರೋಜ್, ಗಿಡಗಳನ್ನು ಕಟಾವು ಮಾಡುವುದು ಹಾಗೂ ತೆರವುಗೊಳಿಸುವುದು ನಮ್ಮ ಕೆಲಸವಲ್ಲ. ನಾವು ಉದ್ಯಾನ ನಿರ್ವಹಣೆಯ ತರಬೇತಿ ಪಡೆದಿದ್ದೇವೆ ಎಂದು ಹೇಳಿದರು.
ಇದರಿಂದ ಅಸಮಾಧಾನಗೊಂಡ ಶಾಸಕ ಮಹೇಶ ಟೆಂಗಿನಕಾಯಿ, ಸೆಂಟ್ರಲ್ ಕ್ಷೇತ್ರ ವ್ಯಾಪ್ತಿಯಲ್ಲಿ ಎಷ್ಟು ಉದ್ಯಾನಗಳು ನಿರ್ವಹಣೆಯಲ್ಲಿವೆ? ಎಷ್ಟು ದುಸ್ಥಿತಿಯಲ್ಲಿವೆ? ಎಂದು ಪ್ರಶ್ನಿಸಿದಾಗ ಅಧಿಕಾರಿ ಫಿರೋಜ್ ಉತ್ತರಿಸಲು ತಡವರಿಸಿದರು.
ತುರ್ತು ಸಮಯದಲ್ಲಿ ನಮ್ಮ ಕೆಲಸ ಅದಲ್ಲ ಎಂಬುವುದು ಸರಿಯಲ್ಲ. ಎಲ್ಲ ಇಲಾಖೆಯವರು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಶಾಸಕರು ಸಲಹೆ ನೀಡಿದರು.
ಮರ ಬಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರೂ ಮಹಾನಗರ ಪಾಲಿಕೆ ಹಾಗೂ ಹೆಸ್ಕಾಂ ಅಧಿಕಾರಿಗಳು ಸರಿಯಾಗಿ ಸ್ಪಂದಿಸಲಿಲ್ಲ. ಕೆಲವೇ ಸಿಬ್ಬಂದಿ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಿದರೆ ಹೊರತು ಇನ್ನುಳಿದ ಅಧಿಕಾರಿಗಳು ಮೊಬೈಲ್ ಕರೆಗಳನ್ನು ಸ್ವೀಕರಿಸಲಿಲ್ಲ ಎಂದು ಸಭೆಯಲ್ಲಿ ಹಾಜರಿದ್ದ ಹಿರಿಯ ನಾಗರಿಕ ರಮೇಶ ಬೆಳಗಾವಿ ಆರೋಪಿಸಿದರು.
ಪ್ರತಿ ವಲಯಗಳಲ್ಲಿ ನಾಲಾ ಸ್ವಚ್ಛತೆಗೆ ಕ್ರೇನ್ ನೀಡಲಾಗಿದೆ. ಅಗತ್ಯ ಇರುವಲ್ಲಿ ಕ್ರೇನ್ ಬಳಸಿ, ನಾಲೆ ಸ್ವಚ್ಛಗೊಳಿಸಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಕಾರ್ಯನಿರ್ವಾಹಕ ಇಂಜಿನಿಯರ್ ವಿಠ್ಠಲ ತುಬಾಕಿ ಮಾಹಿತಿ ನೀಡಿದರು.
ಸೋಮವಾರದ ಬಿರುಗಾಳಿಯಿಂದಾಗಿ ಆಗಿರುವ ಸಮಸ್ಯೆಯಿಂದ ಮಹಾನಗರ ಪಾಲಿಕೆಗೆ 240ಕ್ಕೂ ಹೆಚ್ಚು ದೂರು ಬಂದಿವೆ. ಪಾಲಿಕೆ ಕಂಟ್ರೋಲ್ ರೂಮ್ಲ್ಲಿ ದೂರು ಸ್ವೀಕರಿಸುವುದಕ್ಕೆ ಮೂರು ಪ್ರತ್ಯೇಕ ಸ್ಥಿರ ದೂರವಾಣಿ ಹಾಗೂ ಒಂದು ಮೊಬೈಲ್ ಸಂಖ್ಯೆ ಇರುವುದಾಗಿ ಪಾಲಿಕೆ ಅಧಿಕಾರಿ ತಿಳಿಸಿದರು.
ಆರ್​ಎಫ್​ಒ ಆರ್.ಎಸ್. ಉಪ್ಪಾರ, ಪಾಲಿಕೆ ಸಹಾಯಕ ಆಯುಕ್ತರು ಹಾಗೂ ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net