women commitioner ಹುಬ್ಬಳ್ಳಿಯ ಐಬಿಎಂಆರ್ ಸಮೂಹ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಪಾಲಿಕೆ ಉಪ ಆಯುಕ್ತೆ ಅನುರಾಧ ವಸ್ತ್ರದ, ಶೈನಿ ರಾಜೇಂದ್ರಕುಮಾರ, ಡಾ. ರೇಖಾ ಮಹೇಂದ್ರಕರ್, ಮೋನಿಕಾ ಪಿ, ಅಣ್ಣಪ್ಪ ಕೊರವರ ಇತರರು ಪಾಲ್ಗೊಂಡಿದ್ದರು.
ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವಿವಿಧ ಕಾರ್ಯಕ್ರಮಗಳು ವಿದ್ಯಾರ್ಥಿನಿಯರಲ್ಲಿ ಆತ್ಮವಿಶ್ವಾಸ, ಸಾಧನೆ ಹಾಗೂ ನಾಯಕತ್ವದ ಮನೋಭಾವ ಬೆಳೆಸುವಲ್ಲಿ ಪ್ರೇರಣೆಯಾದವು.
ಅತಿಥಿಯಾಗಿದ್ದ ಮಹಾನಗರ ಪಾಲಿಕೆ ಉಪ ಆಯುಕ್ತೆ ಅನುರಾಧ ವಸ್ತ್ರದ ಅವರು, ಮಹಿಳೆಯರು ಇಂದಿನ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಅದೇ ರೀತಿ ವಿದ್ಯಾರ್ಥಿನಿಯರು ತಮ್ಮ ಜೀವನದಲ್ಲಿ ಗುರಿ ಇಟ್ಟುಕೊಂಡು ಪರಿಶ್ರಮದಿಂದ ಸಾಧನೆ ಮಾಡಬೇಕು. ಆಗಲೇ ಯಶಸ್ಸು ನಿಶ್ಚಿತ ಎಂದು ಹೇಳಿದರು.
ಸ್ತ್ರೀ ಎಂದೆಂದಿಗೂ ಕುಟುಂಬ ಹಾಗೂ ಸಮಾಜದ ಅಭಿವೃದ್ಧಿಗೆ ತನ್ನನ್ನು ಸರ್ಮಪಿಸಿಕೊಂಡು ಬದುಕು ಸಾರ್ಥಕ ಪಡಿಸಿಕೊಳ್ಳುತ್ತಾಳೆ. ಅವಳ ಬದುಕೇ ಸಮಾಜಕ್ಕೆ ಮಹತ್ತರ ಕೊಡುಗೆಯಾಗಿದೆ ಎಂದರು.