ಹೆಸರು ಬೆಳೆ ಒಕ್ಕಣೆ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು

ಯಲ್ಲವ್ವ ಸುಣಗಾರ
ಯಲ್ಲವ್ವ ಸುಣಗಾರ
Published on

ಧಾರವಾಡ:

ಜಮೀನಿನಲ್ಲಿ ಹೆಸರು ಬೆಳೆ ಕಟಾವು ಮಾಡುತ್ತಿದ್ದ ಯಂತ್ರಕ್ಕೆ ಸಿಲುಕಿ ಮಹಿಳೆ ದಾರುಣವಾಗಿ ಮೃತಪಟ್ಟ ಟನೆ ತಾಲೂಕಿನ ಹಾರೋಬೆಳವಡಿ ಗ್ರಾಮದ ಯಲ್ಲವ್ವ ಈರಪ್ಪ ಸುಣಗಾರ ಮೃತ ಮಹಿಳೆ. ಇವರು ಯಂತ್ರದಿಂದ ಹೆಸರು ಬೆಳೆ ಕಟಾವು ಮಾಡಿದ ನಂತರ ಜಮೀನಿನಲ್ಲಿ ಸಿಗುವ ಹೆಸರು ಕಾಯಿ ಆರಿಸಲು ಹೋಗಿದ್ದರು ಎನ್ನಲಾಗಿದೆ. ಮೂವರು ಮಕ್ಕಳು ಮತ್ತು ಕಣ್ಣು ಕಾಣದ ಪತಿಯ ಹೊಟ್ಟೆ ತುಂಬಿಸಲು ಯಲ್ಲವ್ವ ಕೂಲಿ ಕೆಲಸ ಮಾಡುತ್ತಿದ್ದಳು. ಕುಟುಂಬಕ್ಕೆ ಆಸರೆಯಾಗಿದ್ದ ಮಹಿಳೆಯ ಸಾವಿನ ಸುದ್ದಿ ತಿಳಿದ ಗ್ರಾಮಸ್ಥರು ಮರುಕ ವ್ಯಕ್ತಪಡಿಸಿದರು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net