ವಿದ್ಯುತ್​ ತಗುಲಿ ಮಹಿಳೆ ಸಾವು

ನಿವೇದಿತಾ ನಾಯ್ಕರ್​
ನಿವೇದಿತಾ ನಾಯ್ಕರ್​
Published on
ಧಾರವಾಡ: ಸ್ನಾನಕ್ಕೆ ನೀರು ಕಾಯಿಸುವ ಕಾಯ್ಲ್​ನಿಂದ ವಿದ್ಯುತ್​ ಪ್ರವಹಿಸಿ ಗೃಹಿಣಿಯೊಬ್ಬಳು ಮೃತಪಟ್ಟ ಘಟನೆ ತಾಲೂಕಿನ ದೇವರಹುಬ್ಬಳ್ಳಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ನಿವೇದಿತಾ ನಾಯ್ಕರ್​ (24) ಮೃತ ಮಹಿಳೆ. ಪತಿ ಕೂಲಿ ಕಾಮಿರ್ಕನಾಗಿದ್ದು, ಕೆಲಸಕ್ಕಾಗಿ ಹೊರಗೆ ಹೋಗಿದ್ದ. ಈ ವೇಳೆ ನಿವೇದಿತಾ ಬಚ್ಚಲು ಮನೆಯಲ್ಲಿ ಕಾಯ್ಲ್​ನಿಂದ ನೀರು ಕಾಯಿಸಿ ಇಬ್ಬರು ಮಕ್ಕಳಿಗೆ ಸ್ನಾನ ಮಾಡಿಸಿದ್ದಾಳೆ. ನಂತರ ತನಗೆ ನೀರು ಕಾಯಿಸುತ್ತಿದ್ದ ವೇಳೇ ವಿದ್ಯುತ್​ ಪ್ರವಹಿಸಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net