ಪುಷ್ಕರಣಿ ಜಾಗ ಕಬಳಿಸಿದ ರಸ್ತೆ ಕಿತ್ತೊಗೆಯುತ್ತೇವೆ land

land ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪುಷ್ಕರಣಿ ಸಂರಕ್ಷಣಾ ಸಮಿತಿ ಸಂಯೋಜಕ ಸುಧಾಕರ ಶೆಟ್ಟಿ.
land ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪುಷ್ಕರಣಿ ಸಂರಕ್ಷಣಾ ಸಮಿತಿ ಸಂಯೋಜಕ ಸುಧಾಕರ ಶೆಟ್ಟಿ.
Published on

ಪ್ರಮುಖ ಮುಖ್ಯಾಂಶಗಳು

  • ಸಂರಕ್ಷಣಾ ಸಮಿತಿಯಿಂದ ಪಾಲಿಕೆಗೆ ಆ. 22ರ ಗಡವು
  • ಈಗಾಗಲೇ ಮುಕ್ಕಾಲು ಭಾಗ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ
  • ಪುಷ್ಕರಣಿ ಇರುವುದರ ಬಗ್ಗೆ 1823-24ರ ಬಾಂಬೆ ಗೆಜೆಟ್​ನಲ್ಲಿ ಉಲ್ಲೇಖವಿದೆ.

ಹುಬ್ಬಳ್ಳಿ :

land

ಹಳೇ ಹುಬ್ಬಳ್ಳಿಯ ಇತಿಹಾಸ ಪ್ರಸಿದ್ಧ ಶ್ರೀ ಭವಾನಿಶಂಕರ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಪುಷ್ಕರಣಿ ಅತಿಕ್ರಮಿಸಿಕೊಂಡು ನಿರ್ವಿುಸಿರುವ ರಸ್ತೆಯನ್ನು ಮಹಾನಗರ ಪಾಲಿಕೆ ಆ. 22ರೊಳಗೆ ತೆರವುಗೊಳಿಸಬೇಕು. ಇಲ್ಲದಿದ್ದರೆ ಹಿಂದೂ ಸಂಘಟನೆಗಳೆಲ್ಲ ಸೇರಿ ರಸ್ತೆಯನ್ನು ಕಿತ್ತೊಗೆಯುತ್ತೇವೆ ಎಂದು ಪುಷ್ಕರಣಿ ಸಂರಕ್ಷಣಾ ಸಮಿತಿ ಸಂಯೋಜಕ ಸುಧಾಕರ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

ಹಳೇ ಹುಬ್ಬಳ್ಳಿ ಅಸಾರ ಹೊಂಡದಲ್ಲಿನ ಶ್ರೀ ಭವಾನಿ ಶಂಕರ ದೇವಸ್ಥಾನದಲ್ಲಿ ಸೋಮವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ನೀಡಿದ ಗಡುವಿನೊಳಗೆ ಪಾಲಿಕೆಯು ಪುಷ್ಕರಣೆಯ ಜಾಗೆಯ ಒತ್ತುವರಿಯನ್ನು ತೆರವುಗೊಳಿಸದಿದ್ದರೆ ಬೃಹತ್ ಹೋರಾಟ ಅನಿವಾರ್ಯವಾಗಲಿದೆ ಎಂದರು.

ಪುಷ್ಕರಣೆ ಜಾಗದ ಒತ್ತುವರಿ ತೆರವುಗೊಳಿಸುವಂತೆ ಭಕ್ತರು 2007ನೇ ವರ್ಷದಿಂದಲೂ ಪುರಾತತ್ವ ಇಲಾಖೆ ಹಾಗೂ ಮಹಾನಗರ ಪಾಲಿಕೆಗೆ ಪತ್ರ ಬರೆಯುತ್ತಲೇ ಇದ್ದಾರೆ.

ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಆ. 5ರಂದು ಸಹ ಪತ್ರ ಬರೆದಿದ್ದೇವೆ. ಈ ಮಧ್ಯೆ ಪಾಲಿಕೆ ಅಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ಆ. 8ರಂದು ರಸ್ತೆ ನಿರ್ವಿುಸಿದ್ದಾರೆ. ಈಗಾಗಲೇ ಮುಕ್ಕಾಲು ಭಾಗ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ ಎಂದು ತಿಳಿಸಿದರು.

ಆ. 8ರಂದು ರಸ್ತೆ ನಿರ್ಮಾಣ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದ ಸಂದರ್ಭದಲ್ಲಿ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ಮಾತುಕತೆಗೆ ಆಹ್ವಾನಿಸಲಾಗಿತ್ತು.

ಆ ಸಂದರ್ಭದಲ್ಲಿ 3 ದಿನದೊಳಗೆ ರಸ್ತೆ ತೆರವುಗೊಳಿಸುವಂತೆ ಗಡವು ನೀಡಲಾಗಿತ್ತು. ಈಗಾಗಲೇ ಗಡವು ಮುಗಿದಿದ್ದರಿಂದ ಆ. 22ರಂದು ಬೃಹತ್ ಪ್ರತಿಭಟನೆ ನಡೆಸಿ, ಈಗಾಗಲೇ ಪುಷ್ಕರಣಿ ಜಾಗದಲ್ಲಿ ನಿರ್ವಿುಸಿರುವ ರಸ್ತೆಯನ್ನು ಕಿತ್ತೊಗೆಯಲಾಗುವುದು ಎಂದು ಹೇಳಿದರು.

ಭವಾನಿ ಶಂಕರ ದೇವಸ್ಥಾನದ ಎದುರು ಪುಷ್ಕರಣಿ ಇರುವುದರ ಬಗ್ಗೆ 1823-24ರ ಬಾಂಬೆ ಗೆಜೆಟ್​ನಲ್ಲಿ ಉಲ್ಲೇಖವಿದೆ.

2023ರ ಆ. 5ರಂದು ಧಾರವಾಡದ ಪುರಾತತ್ವ ಇಲಾಖೆ ಸಹಾಯಕ ಆಯುಕ್ತರು, ಅಂದಿನ ಪಾಲಿಕೆ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ದೇವಸ್ಥಾನದ ಸುತ್ತಲಿನ 100 ಮೀಟರ್ ಪ್ರದೇಶ ನಿಷೇದಿತ ಪ್ರದೇಶವಾಗಿದ್ದು, 200 ನೀಟರ್ ಪ್ರದೇಶ ನಿಯಂತ್ರಿತ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಯಾವುದೆ ನಿರ್ವಣ, ರಿಪೇರಿ ಮತ್ತು ಗಣಿಕೆಗಾರಿಕೆ ಅನುಮತಿ ಪಡೆಯುವ ಅವಶ್ಯಕತೆ ಇದೆ ಎಂಬ ಮಾಹಿತಿ ನೀಡಿದ್ದಾರೆ.

ಆದರೆ, ಇದೀಗ ಪಾಲಿಕೆ ಆಯುಕ್ತರು ಈ ಪ್ರಧೇಶದಲ್ಲಿ ರಸ್ತೆ ನಿರ್ವಿುಸಲು ಹೊರಟಿದ್ದಾರೆ. ಈ ಮಧ್ಯೆ ಪುರಾತತ್ವ ಇಲಾಖೆ ಅಧಿಕಾರಿಗಳು ಪುಷ್ಕರಣಿ ಬಗ್ಗೆ ತಮ್ಮಲ್ಲಿ ದಾಖಲೆಗಳಿಲ್ಲ ಎಂಬ ಮಾಹಿತಿ ನೀಡುವುದನ್ನು ಗಮನಿಸಿದರೆ ಅಧಿಕಾರಿಗಳ ಮೇಲೆ ಕಾಣದ ಕೈಗಳು ಒತ್ತಡ ಹೇರುತ್ತಿವೆ ಎಂದು ಶಂಕೆ ವ್ಯಕ್ತಪಡಿಸಿದರು.

ಭವಾನಿಶಂಕರ ದೇವಸ್ಥಾನದ ಸುತ್ತ 200 ಮೀಟರ್ ಜಾಗವನ್ನು ಸಂಪೂರ್ಣ ವೈಜ್ಞಾನಿಕ ಸರ್ವೆ ಮಾಡಿಸಬೇಕು. ದೇವಸ್ಥಾನದ ಹದ್ದು ನಿಗದಿಪಡಿಸಿ, ಸುರಕ್ಷಿತ ಪ್ರದೇಶವೆಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

ಹೊಂಡ ಎಂದು ನಮೂದಿಸಿದ ಜಾಗೆಯ ಉತ್ಖನನ ಮಾಡಿಸಿ, ಅದು ಚಾಲುಕ್ಯರ ಕಾಲದ್ದೊ ಅಥವಾ ಇತ್ತೀಚಿನ ದಿನದ್ದೋ ಎಂಬುದನ್ನು ಗುರುತಿಸಬೇಕು. ಅಧಿಕಾರಿಗಳು ಯಾವುದೇ ಒತ್ತಡ, ಹೆದರಿಕೆ, ಬೆದರಿಕೆ ಹಾಗೂ ಆಮಿಷಗಳಿಗೆ ಬಲಿಯಾಗದೇ, ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಸಮಿತಿ ಸಹ ಸಂಯೋಜಕ ಜಯತೀರ್ಥ ಕಟ್ಟಿ ಮಾತನಾಡಿ, ರಸ್ತೆ ನಿರ್ವಣಕ್ಕೆ ಸುಮಾರು 25 ಲಕ್ಷ ರೂ.ಗಳನ್ನು ವ್ಯಯಿಸಿದ್ದಾರೆ. ಅಧಿಕಾರಿಗಳು ಸಾರ್ವಜನಿಕ ಹಣ ಪೋಲು ಮಾಡಿದ್ದಾರೆ. ಈ ಹಣವನ್ನು ಸಂಬಂಧಿಸಿದ ಇಲಾಖೆ ಅಥವಾ ವ್ಯಕ್ತಿಗಳಿಂದ ವಸೂಲಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಪುರಾತತ್ವ ಇಲಾಖೆ ಹಾಗೂ ಮಹಾನಗರ ಪಾಲಿಕೆಗಳು ತಮ್ಮ ಆಸ್ತಿ ರಕ್ಷಣೆ ಮಾಡಿಕೊಳ್ಳುವಲ್ಲಿ ವಿಫಲವಾಗಿವೆ. ಆದರೆ, ಈ ಐತಿಹಾಸಿಕ ದೇವಸ್ಥಾನ ಹಾಗೂ ಪುಷ್ಕರಣಿಯ ರಕ್ಷಣೆಗೆ ಹಿಂದೂ ಸಂಘಟನೆಗಳು ಬದ್ಧವಾಗಿವೆ ಎಂದು ತಿಳಿಸಿದರು.

ದತ್ತಮೂರ್ತಿ ಕುಲಕರ್ಣಿ, ಉದ್ಯಮಿ ವೆಂಕಟೇಶ ಮೇಸ್ತ್ರಿ, ಆನಂದ ಬೇಲಕರ ಹಾಗೂ ರಾಘವೇಂದ್ರ ಮೆಹರವಾಡೆ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net