ಪದವಿ ಮುಗಿಸಿ ಹೊರಗೆ ಹೋಗುವ ವಿದ್ಯಾರ್ಥಿಗಳು ತಮ್ಮ ಕೌಶಲದಿಂದಲೇ ಉದ್ಯೋಗ ಪಡೆದುಕೊಳ್ಳುವ ಅಥವಾ ಉದ್ದಿಮೆ ಪ್ರಾರಂಭಿಸುವ ಆತ್ಮಸ್ಥೈರ್ಯ ಪಡೆಯುವಂತಿರಬೇಕು ಎಂದರು. ವಿದ್ಯಾರ್ಥಿಗಳಿಗೆ ಕೌಶಲ, ಸಂವಹನ ಕಲೆಯಂತಹ ಶಿಕ್ಷಣವನ್ನು ನೀಡುವುದು ಪ್ರತಿಯೊಂದು ಕಾಲೇಜಿನ ಜವಾಬ್ದಾರಿ. ವಿದ್ಯಾರ್ಥಿಗಳು ಸಹ ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.