ಅಳ್ನಾವರ-ಹಳಿಯಾಳ ರಾಜ್ಯ ಹೆದ್ದಾರಿಯ ಅಕ್ಕಪಕ್ಕದಲ್ಲಿರುವ ಮಣ್ಣನ್ನು ಜೆಸಿಬಿಯಿಂದ ತೆಗೆದು ಹಾಕುವಾಗ ಪಟ್ಟಣಕ್ಕೆ ಹರಿಯುವ ಕಾಳಿ ನದಿಯ(burst-pipeline) ಪೈಪ್‌ಲೈನ್ ಒಡೆದಿದ್ದರಿಂದ ಅಪಾರ ಪ್ರಮಾಣದ ನೀರು ಪೋಲಾಯಿತು.
ಅಳ್ನಾವರ: ಪಟ್ಟಣದ ಜೇನು ಸಾಕಣೆ ಕೇಂದ್ರದ ಹತ್ತಿರ ರಾಜ್ಯ ಹೆದ್ದಾರಿ ಬದಿ ಮಣ್ಣು ಹಾಕುವ ಸಂದರ್ಭದಲ್ಲಿ ಕಾಳಿ ನದಿಯ (burst-pipeline) ಪೈಪ್‌ಲೈನ್ ಒಡೆದಿದೆ. ಇದರಿಂದಾಗಿ ಅಪಾರ ಪ್ರಮಾಣದ ನೀರು ಪೋಲಾಗಿದೆ.
ಪಟ್ಟಣದಲ್ಲಿನ ಕಾಂಕ್ರೀಟ್ ರಸ್ತೆ ನಿರ್ಮಾಣ ವೇಳೆ ಅಕ್ಕ ಪಕ್ಕದಲ್ಲಿ ಕಳೆದ ಎರಡು ತಿಂಗಳಿಂದ ಮಣ್ಣು ಹಾಕದೇ ಹಾಗೆಯೇ ಬಿಡಲಾಗಿತ್ತು. ಇದರಿಂದ ವಾಹನಗಳು ಅಪಘಾತಕ್ಕೀಡಾಗುವುದು ಸಾಮಾನ್ಯವಾದಂತಾಗಿತ್ತು.
ಕಾಂಕ್ರೀಟ್ ರಸ್ತೆಯ ಬದಿ ಮಣ್ಣು ತುಂಬಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರ ಗುತ್ತಿಗೆದಾರನನ್ನು ಒತ್ತಾಯಿಸಿದ್ದರು.
ಒತ್ತಾಯಕ್ಕೆ ಮಣಿದ ಗುತ್ತಿಗೆದಾರ ಶುಕ್ರವಾರ ಬೇರೆಡೆಯಿಂದ ಮಣ್ಣು ತಂದು ಕಾಂಕ್ರೀಟ್ ರಸ್ತೆ ಪಕ್ಕದಲ್ಲಿ ಹಾಕಬೇಕಿತ್ತು. ಅದನ್ನು ಬಿಟ್ಟು ರಸ್ತೆಯ ಪಕ್ಕದಲ್ಲಿದ್ದ ಮಣ್ಣನ್ನು ಜೆಸಿಬಿ ಮೂಲಕ ಹಾಕಲಾಗಿದೆ. ಈ ವೇಳೆ ಪೈಪ್ ಒಡೆದಿದೆ. ನಾಗರಿಕರು ದಿನಪೂರ್ತಿ ಕುಡಿಯುವ ನೀರಿಗಾಗಿ ಪರದಾಡುವಂತಾಯಿತು.
ಈ ಕುರಿತು ಪಟ್ಟಣ ಪಂಚಾಯಿತಿ ಪ್ರಭಾರ ಮುಖ್ಯಾಧಿಕಾರಿ ನಾಗರಾಜ ಗುರ್ಲಹೊಸೂರ ಮತ್ತು ಎಂ.ಬಿ. ಬೆಂತೂರ ಸ್ಥಳಕ್ಕೆ ಭೇಟಿ ನೀಡಿ ದುರಸ್ತಿ ಕಾರ್ಯಕ್ಕೆ ಕ್ರಮ ಕೈಗೊಂಡರು.