waste of water ದೇಸಾಯಿ ಸರ್ಕಲ್​ನಲ್ಲಿ ನಿತ್ಯದ ಗೋಳು

waste of water ಹುಬ್ಬಳ್ಳಿಯ ದೇಸಾಯಿ ಸರ್ಕಲ್​ ಬಳಿ ನೀರಿನ ಪೈಪ್​ ಒಡೆದು ರಸ್ತೆಯಲ್ಲಿ ಪೋಲಾಗುತ್ತಿರುವುದು.
waste of water ಹುಬ್ಬಳ್ಳಿಯ ದೇಸಾಯಿ ಸರ್ಕಲ್​ ಬಳಿ ನೀರಿನ ಪೈಪ್​ ಒಡೆದು ರಸ್ತೆಯಲ್ಲಿ ಪೋಲಾಗುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕುಡಿಯುವ ನೀರು ಪೋಲು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ
ಇದು ಇಲ್ಲಿಯ ಕೇಶ್ವಾಪುರ ದೇಸಾಯಿ ಸರ್ಕಲ್​ನಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯ. ಕಳೆದ ಹಲವು ದಿನಗಳಿಂದ ಇಲ್ಲಿ ಪೈಪ್​ ಒಡೆದು ಅಮೃತ ಸಮಾನ ಕುಡಿಯುವ ನೀರು ಪೋಲಾಗುತ್ತಲೇ ಇದೆ.
ಹುಬ್ಬಳ್ಳಿಯ ಸವೋರ್ದಯ ಸರ್ಕಲ್​ ಕಡೆಯಿಂದ ದೇಸಾಯಿ ಸರ್ಕಲ್​ಗೆ ಬರುವ ಮಾರ್ಗದಲ್ಲಿ ರೈಲ್ವೆ ಸೇತುವೆ ಬಳಿ ದೊಡ್ಡದೊಂದು ಪೈಪ್​ಲೈನ್​ ಇದ್ದು ಅದರ ಮೂಲಕ ನೀರು ಸೋರಿಕೆಯಾಗುತ್ತಿದೆ. ನೀರಿನ ಪೂರೈಕೆ ಇದ್ದಾಗ ದೊಡ್ಡ ಪ್ರಮಾಣದಲ್ಲಿ ನೀರು ಹೊರಕ್ಕೆ ಹೋಗುತ್ತಿದೆ.
ನೀರು ಪೋಲಾಗುತ್ತಿರುವುದರಿಂದ ಸರ್ಕಲ್​ ಪೂರ್ತಿ ಜಲಾವೃತವಾಗುತ್ತಿದೆ. ಸರ್ಕಲ್​ನಿಂದ ನೀರು ಪಿಂಟೋ ರಸ್ತೆ ಕಡೆಗೆ ಹೋಗುತ್ತದೆ. ಸರ್ಕಲ್​ ಅಕ್ಕಪಕ್ಕದ ನಿವಾಸಿಗಳಿಗೆ ಇದು ತೀವ್ರ ತೊಂದರೆ ಮಾಡುತ್ತಿದೆ. ರಸ್ತೆಗಳು ರಾಡಿಮಯವಾಗಿ ಪಾದಚಾರಿಗಳು ಓಡಾಡದಂತಾಗುತ್ತಿವೆ.
ಜೀವಜಲ ಕುಡಿಯುವ ನೀರು ಅತ್ಯಮೂಲ್ಯ ಎಂದು ಹೇಳುತ್ತೇವೆ. ಮಹಾನಗರ ಪಾಲಿಕೆ ಕೂಡ ಮಲಪ್ರಭಾ ನದಿಯಿಂದ ನಗರಕ್ಕೆ ನೀರು ತರಲು ಲಕ್ಷಾಂತರ ರೂ. ಖರ್ಚು ಮಾಡುತ್ತದೆ. ಹೀಗೆ ಬೆಲೆ ತೆತ್ತು ತಂದ ನೀರು ಸಮರ್ಪಕ ಬಳಕೆಯಾಗಬೇಕು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಲವು ದಿನಗಳಿಂದ ಇಲ್ಲಿ ಅಮೂಲ್ಯ ನೀರು ವೇಸ್ಟ್​ ಆಗುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net