ಈ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಇದೇ ಸಂದರ್ಭದಲ್ಲಿ ರಕ್ತದಾನಿಗಳಿಗೆ ಸನ್ಮಾನ, ಜಾಗೃತಿ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ದೇವರಹುಬ್ಬಳ್ಳಿಯ ಸಿದ್ಧಾರೂಢಮಠದ ಶ್ರೀ ಸಿದ್ಧ ಶಿವಯೋಗಿ ಸ್ವಾಮೀಜಿ ಉದ್ಘಾಟಿಸುವರು. ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಪ್ರದೀಪ ಶೆಟ್ಟರ್, ಸ್ವರ್ಣ ಸಮೂಹ ಸಂಸ್ಥೆಗಳ ಎಂಡಿ ಡಾ.ವಿ.ಎಸ್.ವಿ ಪ್ರಸಾದ ಇತರರು ಅತಿಥಿಗಳಾಗಿ ಪಾಲ್ಗೊಳ್ಳುವರು.
ರಾಷ್ಟ್ರೋತ್ಥಾನ ರಕ್ತ ಕೇಂದ್ರದಿಂದ ಆರಂಭಗೊಳ್ಳುವ ವಾಕಥಾನ್, ನೀಲಿಜಿನ್ ರಸ್ತೆ, ಹಳೇಯ ಕೋರ್ಟ್ ಸರ್ಕಲ್ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ದಾಜಿಬಾನಪೇಟೆ ರಸ್ತೆ, ಎಸ್.ಟಿ. ಭಂಡಾರಿ ರಸ್ತೆ, ಮೂರುಸಾವಿರಮಠದಿಂದ ಮರಳಿ ರಕ್ತ ಕೇಂದ್ರಕ್ಕೆ ತಲುಪಲಿದೆ ಎಂದರು.
ರಕ್ತದಾನವು ಜೀವದಾನಕ್ಕೆ ಸಮಾನವಾದದ್ದು ಹೆರಿಗೆ, ಅಪಘಾತ, ಶಸ್ತ್ರಚಿಕಿತ್ಸೆ, ಥಲೆಸ್ಸಿಮಿಯಾ, ಕ್ಯಾನ್ಸರ್ ಹಾಗೂ ತುರ್ತು ಚಿಕಿತ್ಸೆಗಳ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇದೆ.
ಆದ್ದರಿಂದ ಪ್ರತಿಯೊಬ್ಬರು ರಕ್ತದಾನ ಮಾಡಬೇಕು. ನಾನು ಕೂಡ 95ನೇ ಬಾರಿ ರಕ್ತದಾನ ಮಾಡುತ್ತಿದ್ದೇಮೆ ಎಂದು ತಿಳಿಸಿದರು.
ವಿನೋದ ಪಟ್ವಾ, ಕಿರಣ ಗಡ, ರವಿ ನಾಯಕ, ಶ್ರೀಧರ ಜೋಶಿ, ಡಾ.ಸಂಗೊಳ್ಳಿ ಎಸ್.ಎಸ್. ಸುದ್ದಿಗೋಷ್ಠಿಯಲ್ಲಿ ಇದ್ದರು.