ಹುಬ್ಬಳ್ಳಿಯ ಎಂ.ಎಂ. ಜೋಶಿ ಆಸ್ಪತ್ರೆಯಿಂದ ಏರ್ಪಡಿಸಿದ್ದ ಅಪರೇಶನ್ ಪುನಜ್ಯೋತಿ ವಾಕ್ ಫಾರ್ ಸೈಟ್ ಮತ್ತು ಬೈಕ್ ರ್ಯಾಲಿಗೆ ಡಿಸಿಪಿ ಶ್ರುತಿ ಎನ್.ಎಸ್. ಹಾಗೂ ಪತ್ರಕರ್ತರ ಸಂಘದ ಅಧ್ಯಕ್ಷ ಬಂಡು ಕುಲಕರ್ಣಿ ಚಾಲನೆ ನೀಡಿದರು.
ಅತಿಥಿಯಾಗಿದ್ದ ಡಿಸಿಪಿ ಶ್ರುತಿ ಎನ್.ಎಸ್. ಹಾಗೂ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಂಡು ಕುಲಕರ್ಣಿ ಅವರು ವಾಕಥಾನ್ ಹಾಗೂ ಬೈಕ್ ರ್ಯಾಲಿಗೆ ಚಾಲನೆ ನೀಡಿದರು.
1,200 ಕ್ಕೂ ಹೆಚ್ಚು ಜನರು ವಾಕಥಾನ್ನಲ್ಲಿ ಭಾಗವಹಿಸಿದ್ದರೆ, 100 ಕ್ಕೂ ಹೆಚ್ಚು ಬೈಕ್ಗಳು ರ್ಯಾಲಿಯಲ್ಲಿ ಪಾಲ್ಗೊಂಡಿದ್ದವು.
ಕೆಎಂಸಿಆರ್ಐ ನಿರ್ದೇಶಕ ಡಾ. ಉದಯ ಬಾಂದ್ರೆ, ಡಿಎಚ್ಒ ಡಾ. ಎಫ್.ಕೆ. ಪರಶುರಾಮ, ಡಿಪಿಎಂ ಡಾ. ಕಲಸೂರಮಠ ಅತಿಥಿಯಾಗಿದ್ದರು.
ಎಂ.ಎಂ. ಜೋಶಿ ನೇತ್ರ ಸಂಸ್ಥೆಯ ನಿರ್ದೇಶಕರಾದ ಡಾ. ಕೆ.ವಿ. ಸತ್ಯಮೂರ್ತಿ, ಡಾ. ಆರ್. ಕೃಷ್ಣ ಪ್ರಸಾದ, ಡಾ. ಶ್ರೀನಿವಾಸ ಜೋಶಿ ಉಪಸ್ಥಿತರಿದ್ದರು. ಡಾ.ಅನಿಕೇತ ಶಾಸ್ತ್ರಿ ಹಾಗೂ ಡಾ. ಮನೋಹರ ಅವರು ನೇತ್ರದಾನದ ಮಹತ್ವ ವಿವರಿಸಿದರು.
ಹುಬ್ಬಳ್ಳಿ-ಧಾರವಾಡದ ಮೆಡಿಕಲ್ ರೆಪ್ರೆಸೆಂಟೇಟಿವ್ಗಳಿಂದ ವಿಶೇಷ ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು. ರೋಟರಿ ಹುಬ್ಬಳ್ಳಿ ಸೆಂಟ್ರಲ್, ಲಯನ್ಸ್, ಲಿಯೋ, ಅಖಿಲ ಭಾರತೀಯ ತೇರಾಪಂಥ ಯುವಕ ಪರಿಷದ್ ಸೇರಿದಂತೆ ವಿವಿಧ ಸಂಘಟನೆಗಳು, ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.