vsv prasad ಕಲಘಟಗತಿಯ ಗರ್ಲ್ಸ್ ಇಂಗ್ಲೀಷ್ ಸ್ಕೂಲ್ನಲ್ಲಿ ಶನಿವಾರ ಎಸ್‌ಎಸ್‌ಎಲ್ಸಿಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿನಿಯರನ್ನು ಸ್ವರ್ಣ ಸಮೂಹ ಸಂಸ್ಥೆಗಳ ಮಾಲೀಕ ಡಾ.ವಿ.ಎಸ್.ವಿ. ಪ್ರಸಾದ ಸನ್ಮಾನಿಸಿದರು.
ಕಲಘಟಗಿ: ಸಾಧನೆಗೆ ಯಾವುದೇ ಭಾಷೆ, ಪ್ರದೇಶ, ಸ್ಥಾನ ಮುಖ್ಯವಲ್ಲ. ಗುರಿ ಸಾಧಿಸುವ ಛಲ ನಿರಂತರವಾಗಿರಬೇಕು ಎಂದು ಹುಬ್ಬಳ್ಳಿಯ ಸ್ವರ್ಣ ಸಮೂಹ ಸಂಸ್ಥೆಯ ಮಾಲೀಕ ಡಾ.ವಿ.ಎಸ್.ವಿ. ಪ್ರಸಾದ vsv prasad ಹೇಳಿದರು.
ಇಲ್ಲಿಯ ಪ್ರೊಗ್ರೇಸ್ಸಿವ್ ಎಜುಕೇಷನ್ ಸೊಸೈಟಿಯ ಗರ್ಲ್ಸ್ ಇಂಗ್ಲೀಷ್ ಸ್ಕೂಲ್ನಲ್ಲಿ ಶನಿವಾರ ಏರ್ಪಡಿಸಿದ್ದ ಎಸ್‌ಎಸ್‌ಎಲ್ಸಿಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿನಿಯರ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡ ಪ್ರಸಾದ ಅವರು, ನಾನು ಬಡತನದ ಕುಟುಂಬದಲ್ಲಿ ಜನಿಸಿದ್ದು, ಆಗ ಶಾಲೆಯ ಶಿಕ್ಷಣ ಪಡೆಯುವ ವ್ಯವಸ್ಥೆ ಬಹಳ ಕಠಿಣವಾಗಿತ್ತು. ಮಾತೃ ಭಾಷೆ ತೆಲುಗಿನಲ್ಲಿ ಶಿಕ್ಷಣ ಪಡೆದೆ. ಕರ್ನಾಟಕ ಸೇರಿ ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿದೆ. ಏನಾದರೂ ಸಾಧಿಸಬೇಕೆಂಬ ಹಠ ನನ್ನದಾಗಿತ್ತು. ಆ ಛಲ ನನ್ನಲ್ಲಿ ಗಾಢವಾಯಿತು. ಅದರ ಪರಿಣಾಮವಾಗಿ ಅಂದಿನಿಂದ ಇಲ್ಲಿಯವರೆಗೂ ಯಾವ ಪರಿಸ್ಥಿತಿಗೂ ಜಗ್ಗದೆ -ಕುಗ್ಗದೇ ಎಲ್ಲ ಸಮಸ್ಯೆ ಮೆಟ್ಟಿ ನಿಂತು ಸಾಧನೆಯ ಬೆನ್ನು ಹತ್ತಿದೆ. ಕೃಷಿ ಕುಟುಂಬದಿಂದ ಬಂದರೂ ನನ್ನ ಸಾಧನೆಯ ಬಯಕೆ ನಿಲ್ಲಲಿಲ್ಲ. ನಾನು ಅಂದು ಕೊಂಡಿರುವುದನ್ನು ಸಾಧಿಸಿಯೇ ತೀರಬೇಕೆಂಬ ಛಲ ನಾನು ಈ ಮಟ್ಟದಲ್ಲಿ ಬೆಳೆಯಲು ಸಹಕಾರಿಯಾಯಿತು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿದೇವಿ ಸಜ್ಜನ್ ಮಾತನಾಡಿದರು. ಮುಖ್ಯಗುರು ಸಂತೋಷ ಬಿಜಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹದೇವಪ್ಪ ವರದಾನಿ ಅಧ್ಯಕ್ಷತೆ ವಹಿಸಿದ್ದರು.
ಹೆಚ್ಚು ಅಂಕಗಳಿಸಿ ಪ್ರಥಮ ಸ್ಥಾನ ಪಡೆದ ಶಾಂತವ್ವ ರೆಡ್ಡೇರ, ದ್ವಿತೀಯ ಸ್ಥಾನಗಳಿಸಿದ ಶ್ರೇಯಾ ಟೊಂಗಳೆ, ವೀಣಾ ಮರರ್ದನಗೌಡ್ರು, ತೃತೀಯ ಸ್ಥಾನ ಗಳಿಸಿದ ಕಾವ್ಯ ಹುಲಿಹೊಂಡ, ಚತುರ್ಥ ಸ್ಥಾನ ಗಳಿಸಿದ ಸೃಷ್ಟಿ ಗುಡಿಗೇರಿ, ಐದನೇ ಸ್ಥಾನ ಗಳಿಸಿದ ಮಾಲಾ ಮಾಚಾಪುರ ಅವರನ್ನು ಗೌರವಿಸಲಾಯಿತು.
ತಾಲೂಕಿನ ವಿವಿಧ ಶಾಲೆಗಳಿಂದ ಆಹ್ವಾನಿಸಿದ ಮಹಮ್ಮದ ರಫೀಕ ನಲವಡಿ, ಬಸವರಾಜ ಬುಳ್ಳಾಪುರ, ರೇಣುಕಾ ಹರ್ನಾಳ, ಕಮಲಾ ಹುಡೇದಕರ, ನವೀನಾ ಸುಂಕದ ಹಾಗೂ ಶಾಲೆಯ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಿದ ಹಿತಚಿಂತಕರನ್ನು ಗೌರವಿಸಲಾಯಿತು.
ಜೆಬಿಎಂ ಪುಸ್ತಕ ಪ್ರೆಡಕ್ಷನ್ಸ್ ಮ್ಯಾನೇಜರ್ ಸತೀಶ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್‌ಗಳನ್ನು ವಿತರಿಸಿದರು.
ಸಾಯಿ ಸ್ಪೋರ್ಟ್ಸ್ ಕ್ಲಬ್ ಮಾಲೀಕ ಜ್ಯೋತಿಬಾ ಕದಂ ಮಕ್ಕಳಿಗೆ ಉಚಿತವಾಗ ಸಮವಸ್ತ್ರ ನೀಡಿದರು.
ನಿವೃತ್ತ ಶಿಕ್ಷಕರಾದ ಕೇಶವ ಕೊಂಗಿ, ನೀಲಾಂಬಿಕಾ ಪಾಟೀಲ, ವಿಜಯಾ ಬಾಯಿ ಲೋಕರೆ, ಮಹೇಂದ್ರಕರ, ಬಸವನಗೌಡ ಪಾಟೀಲ, ಪಾಲಕರಾದ ದೊಡ್ಡ ಗೌಡರ, ಜೆ.ಈ. ಕಾಲೇಜಿನ ಪ್ರಾಂಶುಪಾಲೆ ಶಾರದಾ ಹಾದಿಮನಿ , ಆರ್.ಡಿ. ನೀಲಣ್ಣವರ ಹಾಗೂ ಇತರರಿದ್ದರು.