ಧಾರವಾಡ: ಭಾರತೀಯ ಸಂಗೀತ ವಿದ್ಯಾಲಯ, ಐಎಂಎ ಧಾರವಾಡ ಶಾಖೆ, ಧಾರವಾಡ ಸಂಸ್ಕಾರ ಭಾರತಿ ಆಶ್ರಯದಲ್ಲಿ ಮೇ 10ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 1 ಗಂಟೆವರೆಗೆ ಧಾರವಾಡ ಯು.ಬಿ. ಹಿಲ್‌ನ ಐಎಂಐ ಸಭಾಭವನದಲ್ಲಿ `ವಾಯ್ಸ್ ಕಲ್ಚರ್' ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಸ್ತ್ತೀರೋಗ ಜತ್ಞೆ ಡಾ. ಸೌಭಾಗ್ಯ ಕುಲಕರ್ಣಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಯಕರು, ನಿರೂಪಕರು, ಶಿಕ್ಷಕರು, ಭಾಷಣಕಾರರಿಗೆ ಈ ಕಾರ್ಯಾಗಾರ ಆಯೋಜಿಸಲಾಗಿದೆ. ಪುಣೆಯ ಕಿವಿ, ಮೂಗು, ಗಂಟಲು ತಜ್ಞ ಡಾ. ಮಿಲಿಂದ ಭೋವಿ ಕಾರ್ಯಾಗಾರ ನಡೆಸಿಕೊಡುವರು ಎಂದರು.
ಡಾ. ಮಿಲಿಂದ ಅವರು ಧ್ವನಿಯನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದರ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾರೆ. ಕಾರ್ಯಾಗಾರದಲ್ಲಿ ಧ್ವನಿ ಹೇಗಿರಬೇಕು ? ಧ್ವನಿ ಸುಧಾರಣೆ ಬಗ್ಗೆ ತಾಂತ್ರಿಕ ಅಂಶಗಳನ್ನು ತಿಳಿಸಿಕೊಡಲಿದ್ದಾರೆ. ಈ ರೀತಿ ವಿಶೇಷ ಕಾರ್ಯಾಗಾರ ಇದೇ ಮೊದಲ ಬಾರಿಗೆ ನಡೆಯುತ್ತಿದೆ. ಪ್ರವೇಶ ಉಚಿತವಾಗಿದ್ದು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು. ಮನಶ್ಯಾಸ್ತçಜ್ಞ ಡಾ. ಶ್ರೀಧರ ವಿಶೇಷ ಉಪನ್ಯಾಸ ನೀಡುವರು. ಕವಿವಿ ಕುಲಸಚಿವ ಡಾ. ಎಂ.ಎಚ್. ಅಗಡಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಐಎಂಎ ಧಾರವಾಡ ಅಧ್ಯಕ್ಷ ಡಾ. ಜಗದೀಶ ನಿರಡಿ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.