ಪ್ರತಿಭಾವಂತ ವಿದ್ಯಾಥಿರ್ಗಳಿಗೆ 'ವಿವೇಕ' ಪ್ರತಿಭಾ ಪುರಸ್ಕಾರ

ಪ್ರತಿಭಾವಂತ ವಿದ್ಯಾಥಿರ್ಗಳಿಗೆ 'ವಿವೇಕ' ಪ್ರತಿಭಾ ಪುರಸ್ಕಾರ
ಪ್ರತಿಭಾವಂತ ವಿದ್ಯಾಥಿರ್ಗಳಿಗೆ 'ವಿವೇಕ' ಪ್ರತಿಭಾ ಪುರಸ್ಕಾರ
Published on
ಧಾರವಾಡ: ಸ್ವಾಮಿ ವಿವೇಕಾನಂದ ರಕ್ತದಾನ ಫೌಂಡೇಶನ್​ ಮತ್ತು ಸ್ವರ್ಣ ಗ್ರೂಪ್​ ಆಫ್​ ಕಂಪನಿಸ್​ ಸಹಭಾಗಿತ್ವದಲ್ಲಿ ನಗರದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್​ ಸಾಂಸತಿಕ ಭವನದಲ್ಲಿ ಎಸ್​ಎಸ್​ಎಲ್​ಸಿ ಮತ್ತು ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ 211
ವಿದ್ಯಾರ್ಥಿಗಳಿಗೆ "ವಿವೇಕ' ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು.
ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಎರಡೂ ತರಗತಿಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ಮೂವರು ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಕಲಿಕೆಯನ್ನು ಪ್ರೋತ್ಸಾಹಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಸಿಎಚ್​ ವಿ.ಎಸ್​.ವಿ. ಪ್ರಸಾದ್​ ಅವರು, ಜೀವನದಲ್ಲಿ ತಾವು ನಡೆದು ಬಂದ ಹಾದಿ, ಅನುಭವಿಸಿದ ಸವಾಲುಗಳು ಹಾಗೂ ಸಾಧನೆಯ ಪಯಣವನ್ನು ವಿದ್ಯಾಥಿರ್ಗಳೊಂದಿಗೆ ಹಂಚಿಕೊಂಡರು. ತಮ್ಮ ಹೆಜ್ಜೆ ಗುರುತುಗಳನ್ನು ಅನುಸರಿಸಿ ಜೀವನದಲ್ಲಿ ಗುರಿ ಸಾಧಿಸಬೇಕು ಎಂದರು.
ಡಾ. ಎಚ್​.ವಿ. ಡಂಬಳ ಮಾತನಾಡಿ, ಉತ್ತಮ ಸಂಸ್ಕಾರ ಹಾಗೂ ಸನ್ನಡತೆ ವ್ಯಕ್ತಿಯ ಜೀವನವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂದರು.
ಪಾಲಿಕೆ ಮೇಯರ್​ ಜ್ಯೋತಿ ಪಾಟೀಲ ಮಾತನಾಡಿ, ಭಾರತದ ಭವಿಷ್ಯ ಇಂದಿನ ವಿದ್ಯಾರ್ಥಿಗಳ ಕೈಯಲ್ಲಿದೆ. ದೇಶದ ಅಭಿವೃದ್ಧಿಗೆ ಯುವಜನತೆ ಜ್ಞಾನ, ಸಂಸ್ಕಾರ ಮತ್ತು ದೇಶಭಕ್ತಿಯೊಂದಿಗೆ ಮುಂದಾಗಬೇಕು ಎಂದರು.
ಯುವ ವೈದ್ಯ ಡಾ. ಆದರ್ಶ ಜಿ.ಎಸ್​. ಅವರು ಡಿಜಿಜಿಯವರ ಚಿಂತನೆಗಳು ಹಾಗೂ ಮೌಲ್ಯಾಧಾರಿತ ಬದುಕಿನ ಸಂದೇಶಗಳನ್ನು ತಿಳಿಸಿದರು.
ಧಾರವಾಡ ರಾಮಕೃಷ್ಣ ಆಶ್ರಮದ ಶ್ರೀ ಬುದ್ಧಿ ಯೋಗಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಫೌಂಡೇಷನ್​ ಸಂಸ್ಥಾಪಕ ಶಿವಕುಮಾರ ರಟ್ಟಿಹಳ್ಳಿ, ಉಪಾಧ್ಯಕ್ಷ ವಿದ್ಯಾನಂದ ಸ್ಥಾವರಮಠ, ಶಿವಯೋಗಿ ಹಾವೇರಿ, ಚಂದ್ರು, ಅಶ್ವಿನಿ ಅಂಗಡಿ, ಶಿಕ್ಷಕರು, ಪಾಲಕರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net