ಧಾರವಾಡ ತಾಲೂಕಿನ ಲೋಕೂರ ಗ್ರಾಮದಲ್ಲಿ ವಿಠ್ಠಲ ರುಕ್ಮಿಣಿ ಹಾಗೂ ಜ್ಞಾನದೇವ, ತುಕಾರಾಮ ಮಹಾರಾಜರ ಮೂರ್ತಿಗಳ (Idols Procession)ಮೆರವಣಿಗೆ ನಡೆಯಿತು.
Published on:
Copied
Follow Us
ಧಾರವಾಡ: ತಾಲೂಕಿನ ಲೋಕೂರ ಗ್ರಾಮದಲ್ಲಿ ದಿಂಡಿ ಉತ್ಸವ ಹಾಗೂ ಅಖಂಡ ಹರಿನಾಮ ಸ್ಮರಣೆ ಅಂಗವಾಗಿ ವಿಠಲ ರುಕ್ಮಿಣಿ ದೇವಸ್ಥಾನ ನೂತನ ಕಟ್ಟಡ ಉದ್ಘಾಟನೆ ಹಾಗೂ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಸೇರಿ ವಿವಿಧ ಕಾರ್ಯಕ್ರಮಗಳು ಗುರುವಾರ ಆರಂಭವಾದವು.
ಗುರುವಾರ ಬೆಳಗ್ಗೆ ಉಪ್ಪಿನಬೆಟಗೇರಿ ರಸ್ತೆಯಲ್ಲಿರುವ ಮೂರು ಮುಖದಮ್ಮ ದೇವಸ್ಥಾನದಿಂದ ಸಕಲ ಮಂಗಳಕರ ವಾದ್ಯ ಮೇಳದೊಂದಿಗೆ ಸುಂದರವಾಗಿ ಅಲಂಕರಿಸಿದ್ದ ರಥದಲ್ಲಿ ಮಹಾರಾಷ್ಟ್ರದ ಪಂಢರಪುರದಿಂದ ತರಲಾದ ವಿಠಲ-ರುಕ್ಮಿಣಿ, ಜ್ಞಾನದೇವ-ತುಕಾರಾಮರ ಮೂರ್ತಿಗಳನ್ನಿಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ (Idols Procession) ಮಾಡಿ ದುರ್ಗಾದೇವಿ ಮಂದಿರಕ್ಕೆ ತರಲಾಯಿತು. ಮೆರವಣಿಗೆಯುದ್ದಕ್ಕೂ ಜಾನಪದ ಕಲಾ ತಂಡಗಳು, ಗೊಂಬೆಗಳ ನೃತ್ಯ ಸೇರಿದ ಜನರನ್ನು ಬೆರಗುಗೊಳಿಸಿದವು. ಮಹಿಳೆಯರು ಮತ್ತು ಮಕ್ಕಳು ಪೂರ್ಣಕುಂಭ ಹಾಗೂ ಆರತಿ ತಟ್ಟೆಗಳನ್ನಿಡಿದು ಪಾಲ್ಗೊಂಡಿದ್ದರು.
ನಂತರ ಮಹಾರಾಷ್ಟ್ರದ ಅಜಯ ದತ್ತಾತ್ರೇಯ ಜೋಶಿ ಅವರ ಬ್ರಹ್ಮವೃಂದ ಶ್ರೀಗಳಿಂದ ಹೋಮ ಹವನ, ಮಂತ್ರ ಪಠಣ ನೆರವೇರಿತು. ಸಂಜೆ ಪೋತಿ ಸ್ಥಾಪನೆ, ಕೀರ್ತನೆ ಭಜನಾ ಕಾರ್ಯಕ್ರಮ ಜರುಗಿತು.
ಮಾ. 7ರಂದು ನಸುಕಿನಲ್ಲಿ ಕಾಕಡಾರತಿ, ಪಾರಾಯಣ, ಗುಲಾಲ ಕೀರ್ತನೆ, ಪ್ರವಚನ ಹಾಗೂ ನಾಮಜಪ, ಹರಿಪಾಠ ಸಂಗೀತ ಇರುತ್ತದೆ. ಮಾ.8ರಂದು ಮನು ಮಹಾರಾಜ ಅವರಿಂದ ವಿಠ್ಠಲ-ರುಕ್ಮಿಣಿ ದೇವರ ಪ್ರಾಣ ಪ್ರತಿಷ್ಠಾಪನೆ, ಸನ್ಮಾನ ಕಾರ್ಯಕ್ರಮ ಜರುಗಲಿವೆ.