ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿಶ್ವ ವಿಪ್ರ ನಿಧಿ ಸ್ಥಾಪನೆ

ಧಾರವಾಡ ಮಾಳಮಡ್ಡಿಯ ಪರಿಮಳ ಸಭಾಭವನದಲ್ಲಿ ಆಯೋಜಿಸಿದ್ದ ಬ್ರಾಹ್ಮಣ ಮಹಾಸಭಾದ ಸದಸ್ಯತ್ವ ಆಂದೋಲನ ಕಾರ್ಯಕ್ರಮದಲ್ಲಿ ಲಕ್ಷ್ಮಣ್ ಕುಲಕರ್ಣಿ ಮಾತನಾಡಿದರು.
ಧಾರವಾಡ ಮಾಳಮಡ್ಡಿಯ ಪರಿಮಳ ಸಭಾಭವನದಲ್ಲಿ ಆಯೋಜಿಸಿದ್ದ ಬ್ರಾಹ್ಮಣ ಮಹಾಸಭಾದ ಸದಸ್ಯತ್ವ ಆಂದೋಲನ ಕಾರ್ಯಕ್ರಮದಲ್ಲಿ ಲಕ್ಷ್ಮಣ್ ಕುಲಕರ್ಣಿ ಮಾತನಾಡಿದರು.
Published on
ಧಾರವಾಡ: ಬ್ರಾಹ್ಮಣ ಸಮುದಾಯದ ಆಥಿರ್ಕವಾಗಿ ಹಿಂದುಳಿದ ಪಾಲಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೆರವು ನೀಡಲು ವಿಶ್ವ ವಿಪ್ರ ವಿದ್ಯಾನಿಧಿ ಸ್ಥಾಪಿಸಲಾಗುವುದು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಹಾಗೂ ಜಿಲ್ಲಾ ಚುನಾಯಿತ ಪ್ರತಿನಿಧಿ ಲಕ್ಷ್ಮಣ್ ಕುಲಕರ್ಣಿ ಹೇಳಿದರು.
ನಗರದ ಮಾಳಮಡ್ಡಿಯ ಪರಿಮಳ ಸಭಾಭವನದಲ್ಲಿ ಆಯೋಜಿಸಿದ್ದ ಬ್ರಾಹ್ಮಣ ಮಹಾಸಭಾದ ಸದಸ್ಯತ್ವ ಆಂದೋಲನ ಮತ್ತು ಸಂಘಟನಾತ್ಮಕ ಚಟುವಟಿಕೆಗಳ ಚಾಲನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರೋಗ್ಯ ಸೇವೆ ಕಲ್ಪಿಸಲು ಆರೋಗ್ಯ ನಿಧಿ ಸ್ಥಾಪಿಸುವ ಯೋಜನೆ ಇದೆ. ಕಳೆದ ವರ್ಷ ಅಸ್ತಿತ್ವಕ್ಕೆ ಬಂದಿರುವ ಪದಾಧಿಕಾರಿಗಳ ತಂಡ ಬೆಂಗಳೂರು ಹಾಗೂ ಕೆಲ ಮಹಾನಗರಗಳಿಗೆ ಮಾತ್ರ ಸೀಮಿತವಾಗಿತ್ತು. ಮಹಾಸಭಾದ ಸಂಘಟನೆಯನ್ನು ಜಿಲ್ಲಾ ಮತ್ತು ತಾಲೂಕು ಮಟ್ಟಕ್ಕೂ ವಿಸ್ತರಿಸುವ ಉದ್ದೇಶವಿದೆ. ಅನೇಕ ಮಕ್ಕಳು ಓದು ಅರ್ಧಕ್ಕೆ ನಿಲ್ಲಿಸುವ ಆತಂಕಕಾರಿ ಬೆಳವಣಿಗೆ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಒಳಪಂಗಡಗಳನ್ನು ಬದಿಗಿಟ್ಟು ಮಹಾಸಭಾದ ಸದಸ್ಯರಾಗಿ ಕುಟುಂಬದ ಏಳ್ಗೆಯ ಜತೆಗೆ ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಸತ್ಯನಾರಾಯಣ ಆಚಾರ್​ ಮಾತನಾಡಿ, ಬ್ರಾಹ್ಮಣ ಸಮಾಜದಲ್ಲಿ ಸಂಘಟನೆಯ ಕೊರತೆ ಇದ್ದು, ಬ್ರಾಹ್ಮಣರು ಸಂಘಟಿತರಾಗಲು ಮುಂದಾಗಬೇಕು ಎಂದರು.
ಆನಂದ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಸಿ.ಆರ್​. ಜೋಶಿ, ಶಂಕರ ಕುಲಕರ್ಣಿ, ಗಿರೀಶ ಮುತ್ಸದ್ದಿ, ಪ್ರಮೋದ ಕಾರಕೂನ, ಗೋಪಿ ಕಟ್ಟಿ, ರಾಜು ಪಾಟೀಲ ಕುಲಕಣಿರ್, ಎನ್​.ಆರ್​. ಕುಲಕರ್ಣಿ, ಪ್ರಮೋದ ದೇಸಾಯಿ, ಸಿ.ಎಂ. ದೀಕ್ಷಿತ್​, ವಿನಾಯಕ ಜೋಶಿ, ಪಿ.ಜಿ. ನರಸಾಪೂರ, ವಾಣಿಶ್ರೀ ಕುಲಕಣಿರ್ ಮೋಟೇಕರ, ಪ್ರಕಾಶ ದೇಶಪಾಂಡೆ, ಗುರುನಾಥ ಮಂಗಳೂರ, ಎಸ್​.ಕೆ. ದೇಶಪಾಂಡೆ, ಮಹೇಶ ಜೋಶಿ, ಇತರರಿದ್ದರು.
ಮಹಾಸಭಾದ ಜಿಲ್ಲಾ ಯುವ ಸಂಚಾಲಕ ಪವನ್​ ದೇಸಾಯಿ ಹಾಗೂ ರಾಮನಾಥ ಪ್ರಭು ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net