ವೃದ್ಧಾಶ್ರಮದಲ್ಲಿ (Virat Foundation) ವಿಶಿಷ್ಟ ಹೋಳಿ ಆಚರಣೆ

ಹುಬ್ಬಳ್ಳಿಯ ವಿರಾಟ್ ಫೌಂಡೇಷನ್ (Virat Foundation) ಸದಸ್ಯರು ಹಾಗೂ ಅವರ ಕುಟುಂಬದವರು ನವನಗರದ ಮೈತ್ರಿ ವೃದ್ಧಾಶ್ರಮದಲ್ಲಿ ಪರಸ್ಪರ ಬಣ್ಣ ಹಚ್ಚಿಕೊಳ್ಳುವ ಮೂಲಕ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಹುಬ್ಬಳ್ಳಿಯ ವಿರಾಟ್ ಫೌಂಡೇಷನ್ (Virat Foundation) ಸದಸ್ಯರು ಹಾಗೂ ಅವರ ಕುಟುಂಬದವರು ನವನಗರದ ಮೈತ್ರಿ ವೃದ್ಧಾಶ್ರಮದಲ್ಲಿ ಪರಸ್ಪರ ಬಣ್ಣ ಹಚ್ಚಿಕೊಳ್ಳುವ ಮೂಲಕ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
Published on
ಹುಬ್ಬಳ್ಳಿ: ನವನಗರದ (Virat Foundation)ಮೈತ್ರಿ ವೃದ್ಧಾಶ್ರಮದಲ್ಲಿ ವಿರಾಟ್ ಫೌಂಡೆಷನ್ ವತಿಯಿಂದ ಹೋಳಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ಆಶ್ರಮ ವಾಸಿಗಳಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಡಾ. ವರ್ಷಾ ಅಂಗಡಿ ಹಾಗೂ ನರ್ಸಿಂಗ್ ಸಿಬ್ಬಂದಿ ಆರೋಗ್ಯ ತಪಾಸಣೆ ನಡೆಸಿದರು. ಆಶ್ರಮಕ್ಕೆ ಅಗತ್ಯವಿರುವ ಕಿರಾಣಿ ಸಾಮಗ್ರಿಗಳನ್ನು ದೇಣಿಗೆಯಾಗಿ ನೀಡಲಾಯಿತು.
ಮನೋರಂಜನಾ ಕಾರ್ಯಕ್ರಮಗಳು ನಡೆದವು. ಫೌಂಡೇಷನ್ ಸದಸ್ಯರು ಹಾಗೂ ಅವರ ಕುಟುಂಬದವರು ಆಶ್ರಮದ ವಾಸಿಗಳೊಂದಿಗೆ ಪರಸ್ಪರ ಬಣ್ಣ ಹಚ್ಚಿಕೊಳ್ಳುವ ಮೂಲಕ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಫೌಂಡೇಷನ್ ಅಧ್ಯಕ್ಷ ಕಾಂತಿಲಾಲ ಪುರೋಹಿತ, ಉಪಾಧ್ಯಕ್ಷ ಲಿಂಗರಾಜ ಧಾರವಾಡಶೆಟ್ಟರ್, ಕೋಶಾಧ್ಯಕ್ಷ ಶ್ರೀನಿವಾಸ ಸರ್ವದೆ, ಶಶಿಕುಮಾರ ದೊಡ್ಮನಿ, ರುದ್ರಣ್ಣ ವಿರುಪಣ್ಣವರ, ಸುರೇಶ ಮಾಚಲ್ಲಿ, ರಾಜೇಶ ಧಾರವಾಡಕರ್, ಮಲ್ಲಿಕಾರ್ಜುನ ಜವಳಿ, ಅಶೋಕ ಪಿತಾಂಬರಶೆಟ್ಟಿ, ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net