ಕಲಘಟಗಿ ಗ್ರಾಮದೇವಿಯರ ಜಾತ್ರೆ 25ರಿಂದ

ಕಲಘಟಗಿ ಪಟ್ಟಣದ ಗ್ರಾಮದೇವಿ ದೇವಸ್ಥಾನದ ಮುಂಭಾಗದಲ್ಲಿ ಶುಕ್ರವಾರ ದೇವಸ್ಥಾನದ ಟ್ರಸ್ಟ್ ಕಮಿಟಿ ಹಾಗೂ ಜಾತ್ರಾ ಉತ್ಸವ ಸಮಿತಿಯ ಸರ್ವ ಸದಸ್ಯರು.
ಕಲಘಟಗಿ ಪಟ್ಟಣದ ಗ್ರಾಮದೇವಿ ದೇವಸ್ಥಾನದ ಮುಂಭಾಗದಲ್ಲಿ ಶುಕ್ರವಾರ ದೇವಸ್ಥಾನದ ಟ್ರಸ್ಟ್ ಕಮಿಟಿ ಹಾಗೂ ಜಾತ್ರಾ ಉತ್ಸವ ಸಮಿತಿಯ ಸರ್ವ ಸದಸ್ಯರು.
Published on
ವಿಜಯವಾಣಿ ಸುದ್ದಿಜಾಲ ಕಲಘಟಗಿ
ಕಲಘಟಗಿ ಗ್ರಾಮದೇವಿಯರ ಜಾತ್ರೆ ಫೆ.25 ರಿಂದ ಮಾರ್ಚ್ 5ರ ವರೆಗೂ ವಿಜೃಂಭಣೆಯಿಂದ ಜರುಗಲಿದೆ. ಜಾತ್ರೆ ಯಶಸ್ಸಿಗೆ ಸಕಲ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗುತ್ತಿದೆ ಎಂದು ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಸುಧೀರ ಬೋಳಾರ ಹೇಳಿದರು.
ಪಟ್ಟಣದ ಗ್ರಾಮದೇವಿ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ದೇವಿರ ದರ್ಶನಕ್ಕೆ ತೊಂದರೆಯಾಗದಂತೆ ಚೌತಮನೆ ಕಟ್ಟೆ ಮುಂಭಾಗದಲ್ಲಿ ಉತ್ತಮ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಪ್ರತಿದಿನ ಮಧ್ಯಾಹ್ನ 12ರಿಂದ 3 ಮತ್ತು ರಾತ್ರಿ 7 ರಿಂದ 10 ಗಂಟೆವರೆಗೂ ಪ್ರಸಾದ ಸೇವೆ ಇರುತ್ತದೆ. 45ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗುತ್ತಿದೆ. ಪಟ್ಟಣದ ಪ್ರತಿಯೊಂದ ಓಣಿ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀದಿ ದೀಪಗಳ ವ್ಯವಸ್ಥೆ, ಕುಡಿಯುವ ನೀರು, ಸಾರ್ವಜನಿಕ ಶೌಚಾಲಯ, ಪಾರ್ಕಿಂಗ್, ದೇವಿಯ ದರ್ಶನಕ್ಕೆ ಅಲ್ಲಲ್ಲಿ ಬ್ಯಾರಿಕೇಡ್ ಹಾಕಲಾಗುತ್ತಿದೆ. ರಸ್ತೆಗಳ ದುರಸ್ತಿಯನ್ನೂ ಮಾಡಲಾಗುತ್ತಿದೆ. ಜಾತ್ರಾ ಉತ್ಸವ ಹಾಗೂ ಸಭಾ ಕಾರ್ಯಕ್ರಮದ ತಯಾರಿಗಾಗಿ ಸುಸಜ್ಜಿತ ಮಂಟಪ ರಚಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜಾತ್ರೆ ಯಶಸ್ಸಿಗಾಗಿ ಸಮಿತಿ ರಚಿಸಲಾಗಿದೆ. ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವುದರಿಂದ ಸ್ಥಳೀಯರಿಗೆ ಮೊದಲ ಆದ್ಯತೆ ಕಲ್ಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ದೇವಸ್ಥಾನದ ಸಮಿತಿ ಅಧ್ಯಕ್ಷ ಶ್ರೀಕಾಂತ ಕಟಾವಕರ್, ಕುಮಾರ ಖಂಡೆಕರ್, ಬಾಬಣ್ಣ ಅಂಚಟಗೇರಿ, ಬಾಳು ಖಾನಾಪುರ, ರಾಜು ಚಿಕ್ಕಮಠ, ರಾಕೇಶ ಅಳಗವಾಡಿ, ಸದಾನಂದ ಚಿಂತಾಮಣಿ, ಮಾಂತೇಶ ತಹಸೀಲ್ದಾರ್, ಮಂಜುನಾಥ ಸಾಬಣ್ಣವರ, ರಾಘವೇಂದ್ರ ಹುಲಿಹೊಂಡ, ವಿಜಯ ಮುರಾರಿ, ವಿನಾಯಕ ಗೌಳಿ, ಪರಶುರಾಮ ಹುಲಿಹೊಂಡ, ಗಿರೀಶ ಸೂರ್ಯವಂಶಿ, ವಿನಾಯಕ ಗಾಯಕವಾಡ, ನವೀನ ತಹಶೀಲ್ದಾರ್, ಸೇರಿದಂತೆ ಜಾತ್ರಾ ಸಮಿತಿಯ ಸರ್ವ ಸದಸ್ಯರು, ದೇವಸ್ಥಾನದ ಕಮಿಟಿಯವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net