vijayotsav ವಿಜಯೋತ್ಸವ ಅದೃಷ್ಟಶಾಲಿಗಳಿಗೆ ಬಹುಮಾನ ವಿತರಣೆ

vijayotsav ಹುಬ್ಬಳ್ಳಿಯ ವಿಜಯವಾಣಿ ಕಚೇರಿಯಲ್ಲಿ ಗುರುವಾರ ವಿಜಯೋತ್ಸವ ಅದೃಷ್ಟಶಾಲಿ ವಿಜೇತರಿಗೆ ವಿಆರ್​ಎಲ್​ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ ಅವರು ಬಹುಮಾನ ವಿತರಣೆ ಮಾಡಿದರು. ಬಹುಮಾನ ಪಡೆದ ಪವಿತ್ರಾ ಅಂಗಡಿ, ಮಲ್ಲಿಕಾರ್ಜುನ ಅಂಗಡಿ, ಮಾಗುಂಡಪ್ಪ, ಪ್ರವಿಣ, ಪರವೀನ್​ ಬಾನು, ರೋನಾಲ್ಡ್​ ಹಾಗೂ ಉದ್ಯಮಿಗಳಾದ ಪ್ರದಿಪ ಶೆಟ್ಟಿ, ಜಯರಾಮ ಶೆಟ್ಟಿ ಇತರರು ಇದ್ದಾರೆ.
vijayotsav ಹುಬ್ಬಳ್ಳಿಯ ವಿಜಯವಾಣಿ ಕಚೇರಿಯಲ್ಲಿ ಗುರುವಾರ ವಿಜಯೋತ್ಸವ ಅದೃಷ್ಟಶಾಲಿ ವಿಜೇತರಿಗೆ ವಿಆರ್​ಎಲ್​ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ ಅವರು ಬಹುಮಾನ ವಿತರಣೆ ಮಾಡಿದರು. ಬಹುಮಾನ ಪಡೆದ ಪವಿತ್ರಾ ಅಂಗಡಿ, ಮಲ್ಲಿಕಾರ್ಜುನ ಅಂಗಡಿ, ಮಾಗುಂಡಪ್ಪ, ಪ್ರವಿಣ, ಪರವೀನ್​ ಬಾನು, ರೋನಾಲ್ಡ್​ ಹಾಗೂ ಉದ್ಯಮಿಗಳಾದ ಪ್ರದಿಪ ಶೆಟ್ಟಿ, ಜಯರಾಮ ಶೆಟ್ಟಿ ಇತರರು ಇದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಶಾಪಿಂಗ್​ ಸಂಭ್ರಮದಲ್ಲಿ ಕಾರು, ಬೈಕ್​, ಟಿವಿ ಗೆದ್ದ ಗ್ರಾಹಕರು
ಹುಬ್ಬಳ್ಳಿ: vijayotsav ಕನ್ನಡದ ನಂಬರ್​ 1 ಪತ್ರಿಕೆ ವಿಜಯವಾಣಿ ಪ್ರತಿ ವರ್ಷದಂತೆ ಆಯೋಜಿಸಿದ್ದ ವಿಜಯೋತ್ಸವ ಶಾಪಿಂಗ್​ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ವಿಜೇತರಾದ ಅದೃಷ್ಟಶಾಲಿಗಳಿಗೆ ಗುರುವಾರ ಬಹುಮಾನ ವಿತರಣೆ ಮಾಡಲಾಯಿತು.
ಇಲ್ಲಿಯ ನ್ಯೂ ಕಾಟನ್​ ಮಾರ್ಕೆಟ್​ನಲ್ಲಿರುವ ವಿಜಯವಾಣಿ ಕಚೇರಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿಆರ್​ಎಲ್​ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ ಅವರು ಲಕ್ಕಿ ವಿಜೇತರಿಗೆ ಅಭಿನಂದಿಸಿ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಆನಂದ ಸಂಕೇಶ್ವರ ಅವರು, ಕಳೆದ 12 ವರ್ಷದಿಂದ ವಿಜಯೋತ್ಸವ ಆಚರಿಸಲಾಗುತ್ತಿದೆ. ಪ್ರತಿ ವರ್ಷ 2500ಕ್ಕೂ ಹೆಚ್ಚು ಬಹುಮಾನ ನೀಡಲಾಗುತ್ತಿದೆ. ಈ ವರೆಗೆ ಒಟ್ಟು 79 ಕಾರು, 109 ಬೈಕ್​, 25 ಸಾವಿರಕ್ಕೂ ಅಧಿಕ ಅದೃಷ್ಟಶಾಲಿಗಳಿಗೆ ಬಹುಮಾನಗಳನ್ನು ನೀಡಲಾಗಿದೆ ಎಂದರು.
ಹೊಸ ಹೊಸ ಪರಿಕಲ್ಪನೆ ಮೂಲಕ ವಿಜಯವಾಣಿ ಜನಮನ ತಲುಪುತ್ತಿದೆ. ಮುದ್ರಣ ವೀಕ್ಷಣೆಗೆ ವಿದ್ಯಾರ್ಥಿಗಳಿಗೆ, ಸಂಸ್ಥೆಯವರಿಗೆ ಅವಕಾಶ ನೀಡಿರುವುದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅನೇಕ ಜನರು ವಿಜಯವಾಣಿ ಮುದ್ರಣವಾಗುವುದನ್ನು ವೀಕ್ಷಿಸಿ ಹೊಸ ಅನುಭವ ಪಡೆದಿದ್ದಾರೆ ಎಂದರು.
ಶಿರೂರ ಪಾರ್ಕ್​ ಅಯ್ಯಪ್ಪಸ್ವಾಮಿ ಭಕ್ತ ವೃಂದ ಟ್ರಸ್ಟ್​ನ ಪ್ರದಿಪ ಶೆಟ್ಟಿ ಮಾತನಾಡಿ, ವಿಜಯವಾಣಿ ಆರಂಭದಿಂದಲೂ ಹೊಸತನವನ್ನು ಮೈಗೂಡಿಸಿಕೊಂಡಿದೆ. ಮಕ್ಕಳು, ಹಿರಿಯರು, ಮಹಿಳೆಯರು ಎನ್ನದೇ ಎಲ್ಲರಿಗೂ ಹಿಡಿಸುತ್ತದೆ. ಇದೀಗ ಖರೀದಿ ಸಂಭ್ರಮ ಹೆಚ್ಚಿಸುವ ವಿಜಯೋತ್ಸವ ಅನೇಕರಿಗೆ ಅದೃಷ್ಟವನ್ನೂ ತಂದಿದೆ ಎಂದರು.
ಉದ್ಯಮಿ ಜಯರಾಮ ಶೆಟ್ಟಿ ಮಾತನಾಡಿ, ವಿಆರ್​ಎಲ್​ ಸಮೂಹ ಸಂಸ್ಥೆಯು ಜನರ ಆಗುಹೋಗುಗಳಲ್ಲಿ ಭಾಗಿಯಾಗುತ್ತ ಬಂದಿದೆ. ಇದು ಮುಂದುವರಿದು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.

ಬಹುಮಾನ ವಿತರಣೆ

2025ರ ವಿಜಯೋತ್ಸವ ಶಾಪಿಂಗ್​ ಹಬ್ಬದ ಸಂಭ್ರಮದಲ್ಲಿ ಪಾಲುದಾರ ಮಳಿಗೆ, ಶಾಪ್​ಗಳಲ್ಲಿ ಎರಡು ಸಾವಿರ ರೂಪಾಯಿ ಮೌಲ್ಯದ ವಸ್ತು ಖರೀದಿಸಿ ಲಕ್ಕಿ ಡಿಪ್​ನಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಇದರಲ್ಲಿ ಒಟ್ಟು 2500 ಬಹುಮಾನಗಳನ್ನು ನೀಡಲಾಯಿತು. ಬಂಪರ್​ ಬಹುಮಾನವಾಗಿ ಕಾರು, ಬೈಕ್​, ಫ್ರಿಜ್​, ಎಲ್​ಇಡಿ ಟಿವಿ, ವಾಷಿಂಗ್​ ಮಶೀನ್​, ಲಾಕರ್​ ನೀಡಲಾಯಿತು. ವಿಜಯೋತ್ಸವ ಲಕ್ಕಿ ವಿಜೇತರು ಅತ್ಯಂತ ಸಂತೋಷದಿಂದ ಆಗಮಿಸಿ ಬಹುಮಾನ ಪಡೆದುಕೊಂಡರು. ವಿಜೇತರಾದ ಗಜೇಂದ್ರ ಅಂಗಡಿ, ಪ್ರಭಾವತಿ ಅಂಗಡಿ, ಮಾಗುಂಡಪ್ಪ, ಪ್ರವಿಣ, ಪರವೀನ್​ ಬಾನು, ರೋನಾಲ್ಡ್​ ಅವರಿಗೆ ಅನುಕ್ರಮವಾಗಿ ಕಾರು, ಬೈಕ್​, ಎಲ್​ಇಡಿ ಟಿವಿ, ರೆಫ್ರಿಜರೇಟರ್​, ವಾಷಿಂಗ್​ ಮಶೀನ್​, ಲಾಕರ್​ಗಳನ್ನು ಬಹುಮಾನವಾಗಿ ವಿತರಣೆ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net