vijayendra visit ‘ಬಳ್ಳಾರಿ ಪಾದಯಾತ್ರೆ’ ಹುಬ್ಬಳ್ಳಿಯಲ್ಲಿ ವಿವರಣೆ
vijayendra visit ಹುಬ್ಬಳ್ಳಿಯ ಹೋಟೆಲ್ ಡೆನಿಸನ್‌ನಲ್ಲಿ ವಾಸ್ತವ್ಯ ಹೂಡಿದ್ದ ಕೇಂದ್ರ ಸಚಿವ ಅಮಿತ್‌ಷಾ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಶನಿವಾರ ಭೇಟಿ ಮಾಡಿ, ‘ಬಳ್ಳಾರಿ ಪಾದಯಾತ್ರೆ’ ಕುರಿತು ವಿವರಿಸಿದರು.
ಕೇಂದ್ರ ಸಚಿವ ಅಮಿತ್‌ಷಾ ಭೇಟಿ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
ಹುಬ್ಬಳ್ಳಿ: ಹುಬ್ಬಳ್ಳಿಯ ಹೋಟೆಲ್ ಡೆನಿಸನ್‌ನಲ್ಲಿ vijayendra visit ವಾಸ್ತವ್ಯ ಹೂಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ಷಾ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಶನಿವಾರ ಭೇಟಿ ಮಾಡಿ, ರಾಜ್ಯ ಬಿಜೆಪಿ ನೇತೃತ್ವದಲ್ಲಿ ಇತ್ತೀಚೆಗೆ ನಡೆಸಿದ್ದ ‘ಬಳ್ಳಾರಿ ಪಾದಯಾತ್ರೆ’ ಕುರಿತು ವಿವರಣೆ ನೀಡಿದರು.
ಪಾದಯಾತ್ರೆ ವೇಳೆ ಸಿಕ್ಕ ಜನಸ್ಪಂದನೆ, ರಾಜ್ಯ ಸರ್ಕಾರದ ವಿರುದ್ಧ ಜನರ ಆಕ್ರೋಶ ಕುರಿತು ಬಿ.ವೈ. ವಿಜಯೇಂದ್ರ ಹೇಳಿದರು. ಕಾಂಗ್ರೆಸ್ ಸರ್ಕಾರದ ಕೆಟ್ಟ ಆಡಳಿತದಿಂದ ಜನರು ಬೇಸತ್ತಿದ್ದಾರೆ. ಬಿಜೆಪಿ ಬಳ್ಳಾರಿ ಪಾದಯಾತ್ರೆ ಕೈಗೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಜನರ ನೋವುಗಳಿಗೆ ಧ್ವನಿ ಎತ್ತಿದ್ದಕ್ಕೆ ಖುಷಿ ವ್ಯಕ್ತಪಡಿಸಿದ್ದಲ್ಲೆ ಪಾದಯಾತ್ರೆಯಲ್ಲಿ ಆಯಾ ಪ್ರದೇಶದಲ್ಲಿ ಜನರೇ ಭಾಗವಹಿಸಿದ್ದರು ಎಂದು ವಿವರಿಸಿದರು.
ಈ ವೇಳೆ ತಾವೇ ಸಿದ್ಧಪಡಿಸಿದ್ದ ಫೋಟೋ ಮತ್ತು ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಗಳನ್ನು ಅಮಿತ್‌ಷಾ ಅವರ ಮುಂದಿಟ್ಟರು. ಇವೆಲ್ಲವನ್ನೂ ನೋಡಿದ ಅಮಿತ್‌ಷಾ ಅವರು, ಭೇಷ್ ಎಂದು ತಲೆದೂಗಿದರಲ್ಲದೆ, ಇನ್ನಷ್ಟು ಇಂಥ ಜನಾಂದೋಲನ ರೂಪಿಸುವಂತೆ ಸಲಹೆ ನೀಡಿದರು ಎನ್ನಲಾಗಿದೆ.