(vidyavardaka) ಸಹಪಠ್ಯ ಚಟುವಟಿಕೆಯಿಂದ ನೈತಿಕ ಮೌಲ್ಯ ವೃದ್ಧಿ

ವಿಜಯನಗರ ಪದವಿ ಪೂರ್ವ ಕಾಲೇಜ್‌ನಲ್ಲಿ (vidyavardaka)ಇತ್ತೀಚೆಗೆ ಏರ್ಪಡಿಸಿದ್ದ ಶಿಕ್ಷಣದಲ್ಲಿ ‘ಸಹಪಠ್ಯ ಚಟುವಟಿಕೆ ಮಹತ್ವ’ ಕಾರ್ಯಕ್ರಮವನ್ನು ರವೀಂದ್ರನಾಥ ದಂಡಿನ ಉದ್ಘಾಟಿಸಿದರು.
ವಿಜಯನಗರ ಪದವಿ ಪೂರ್ವ ಕಾಲೇಜ್‌ನಲ್ಲಿ (vidyavardaka)ಇತ್ತೀಚೆಗೆ ಏರ್ಪಡಿಸಿದ್ದ ಶಿಕ್ಷಣದಲ್ಲಿ ‘ಸಹಪಠ್ಯ ಚಟುವಟಿಕೆ ಮಹತ್ವ’ ಕಾರ್ಯಕ್ರಮವನ್ನು ರವೀಂದ್ರನಾಥ ದಂಡಿನ ಉದ್ಘಾಟಿಸಿದರು.
Published on
ಹುಬ್ಬಳ್ಳಿ: ವಿದ್ಯಾರ್ಥಿಗಳ ಜೀವನ ಕೌಶಲಕ್ಕೆ ಪಠ್ಯದ ಸಹಪಠ್ಯ ಚಟುವಟಿಕೆ ಅಗತ್ಯ. ಸಹಜೀವನ, ಸಹಬಾಳ್ವೆ, ಶಿಸ್ತು, ಶಾಲಾಭಿಮಾನವನ್ನು (vidyavardaka) ಇಂಥ ಚಟುವಟಿಕೆಗಳು ಕಲಿಸಿಕೊಡುತ್ತವೆ ಎಂದು ಕನಕದಾಸ ಶಿಕ್ಷಣ ಸಮಿತಿ ಅಧ್ಯಕ್ಷ ರವೀಂದ್ರನಾಥ ದಂಡಿನ ಅಭಿಪ್ರಾಯಪಟ್ಟರು.
ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪದಿಂದ ಇಲ್ಲಿಯ ವಿಜಯನಗರ ಪದವಿ ಪೂರ್ವ ಕಾಲೇಜ್‌ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಶಿಕ್ಷಣದಲ್ಲಿ ‘ಸಹಪಠ್ಯ ಚಟುವಟಿಕೆ ಮಹತ್ವ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಆದರ್ಶ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ನಂದೀಶ ಕಾಖಂಡಕಿ ಮಾತನಾಡಿ, ಸಹಪಠ್ಯ ಚಟುವಟಿಕೆಗಳನ್ನು ಎಂದಿಗೂ ಪಠ್ಯೇತರವೆಂದು ಭಾವಿಸಕೂಡದು. ಅವು ಪಠ್ಯದೊಂದಿಗೆ ನಿರಂತರವಾಗಿ ಶಾಲೆಯಲ್ಲಿ ಜರುಗುತ್ತಿರುತ್ತವೆ ಎಂದರು
ಕವಿವ ಸಂಘದ ಕೋಶಾಧ್ಯಕ್ಷ ಸತೀಶ ತುರಮರಿ, ಕ.ವಿ.ವ. ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡೀನ ಮಾತನಾಡಿದರು.
ವಿಜಯನಗರ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸಂದೀಪ ಬೂದಿಹಾಳ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸಕರಾದ ಅಶೋಕ ಚಂಚಿ, ಎನ್.ಡಿ. ಹಾದಿಮನಿ, ಎಸ್.ಬಿ. ಮಾಸಗೊನೆ, ಪಾರ್ವತಿ ಕುಲ್ಲೊಳ್ಳಿ ಇತರರು ಇಇದ್ದರು.
ಡಿ.ಜಿ. ಹುಗ್ಗಿ ಸ್ವಾಗತಿಸಿದರು. ಡಾ.ಎ.ಎಸ್. ಗಡಾದ ನಿರೂಪಿಸಿದರು. ಎಸ್.ಎ. ನಾಯ್ಕರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net