ವಿದುಷಿ ಭೂಮಿಕಾ ಧರಣಿ ರಂಗ ಪ್ರವೇಶ

ಶ್ರೀ ತುಳಸಿ ಏಕವ್ಯಕ್ತಿ ನೃತ್ಯ ರೂಪಕ ಪ್ರದರ್ಶನ
ಹುಬ್ಬಳ್ಳಿಯಲ್ಲಿ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರ ಅಧ್ಯಕ್ಷ ಪ್ರದಿಪ ಭಟ್ಟ ಮಾತನಾಡಿದರು. ಭೂಮಿಕಾ ಧರಣಿ, ಶಿವಾನಂದ, ಸವಿತಾ ಇದ್ದಾರೆ.
ಹುಬ್ಬಳ್ಳಿಯಲ್ಲಿ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರ ಅಧ್ಯಕ್ಷ ಪ್ರದಿಪ ಭಟ್ಟ ಮಾತನಾಡಿದರು. ಭೂಮಿಕಾ ಧರಣಿ, ಶಿವಾನಂದ, ಸವಿತಾ ಇದ್ದಾರೆ.
Published on: 

ಹುಬ್ಬಳ್ಳಿ: ಇಲ್ಲಿಯ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ವತಿಯಿಂದ ವಿದುಷಿ ಭೂಮಿಕಾ ಧರಣಿ ಅವರ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮ ಅಕ್ಟೋಬರ್​ 3ರಂದು ಸಂಜೆ 4ಕ್ಕೆ ನಗರದ ಸವಾಯಿ ಗಂಧರ್ವ ಹಾಲ್​ನಲ್ಲಿ ಏರ್ಪಡಿಸಲಾಗಿದೆ ಎಂದು ಕಲಾ ಕೇಂದ್ರದ ಅಧ್ಯಕ್ಷ ಪ್ರದಿಪ ಭಟ್ಟ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂಮಿಕಾ ಅವರು ಪುಷ್ಪಾಂಜಲಿ, ಅಲಾರಿಪು, ರಾಮ ಭಜನೆ, ದೇವರ ನಾಮ, ಅರ್ಧನಾರೀಶ್ವರ ಸ್ತುತಿ, ತಿಲ್ಲಾನ ಮುಂತಾದ ನೃತ್ಯ ಬಂಧಗಳನ್ನು ಪ್ರಸ್ತುತ ಪಡಿಸಲಿದ್ದಾರೆ ಎಂದರು.

ನೃತ್ಯ ಗುರು ಡಾ. ಸಹನಾ ಭಟ್ಟ ಅವರಿಗೆ ಗುರುವಂದನೆ ಸಲ್ಲಿಸಲಿದ್ದಾರೆ. ಈ ಕಾರ್ಯಕ್ರಮ ಉದ್ಘಾಟನೆಯನ್ನು ಮೇಯರ್​ ದುರ್ಗಮ್ಮ ಬೆಜವಾಡ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ ನೆರವೇರಿಸುವರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರದಿಪ ಭಟ್ಟ ವಹಿಸುವರು.

ಶ್ರೀ ತುಳಸಿ ಏಕವ್ಯಕ್ತಿ ನೃತ್ಯ ರೂಪಕವನ್ನು ಪ್ರದರ್ಶಿಸಲಾಗುತ್ತಿದ್ದು, ಪ್ರದಿಪ ಭಟ್ಟ ಸಾಹಿತ್ಯ, ವಿದ್ವಾನ್​ ಬಾಲಸುಬ್ರಹ್ಮಣ್ಯ ಶರ್ಮಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಡಾ. ಸಹನಾ ಭಟ್ಟ ಅವರ ಪರಿಕಲ್ಪನೆ ಮತ್ತು ನೃತ್ಯ ಸಂಯೋಜನೆಯಲ್ಲಿ ಇದು ಮೂಡಿಬರಲಿದೆ.

ಹಿಮ್ಮೇಳದಲ್ಲಿ ನಟುವಾಂಗ ಡಾ. ಸಹನಾ ಭಟ್ಟ, ಹಾಡುಗಾರಿಕೆ ವಿದ್ವಾನ್​ ಬಾಲಸುಬ್ರಹ್ಮಣ್ಯ ಶರ್ಮಾ, ಮೃದಂಗ ವಿದ್ವಾನ್​ ಪಂಚಮ ಉಪಾಧ್ಯಾಯ, ಕೊಳಲು ವಿದ್ವಾನ್​ ದೀಪಕ ಹೆಬ್ಬಾರ, ರಿದಂ ಪ್ಯಾಡ್​ ವಿದ್ವಾನ್​ ಡಾ. ಗೋಪಾಲಕೃಷ್ಣ ಅವರು ಸಾಥ್​ ನೀಡುವರು ಎಂದರು.

ವಿದುಷಿ ಭೂಮಿಕಾ ಮಾತನಾಡಿ, ಕಳೆದ 15 ವರ್ಷಗಳಿಂದ ಭರತನಾಟ್ಯ ಕಲಿಯುತ್ತಿದ್ದು, ಇದೀಗ ರಂಗ ಪ್ರವೇಶದ ಮೂಲಕ ಹೊಸ ಅಧ್ಯಾಯ ಆರಂಭವಾಗಲಿದೆ. ಈಗಾಗಲೇ ಹಲವು ಕಡೆಗಳಲ್ಲಿ ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದೇನೆ. ಸದ್ಯ ಇಲೆಕ್ಟ್ರಾನಿಕ್ಸ್​ ಆಂಡ್​ ಕಮ್ಯುನಿಕೇಶನ್​ನಲ್ಲಿ ಇಂಜಿನಿಯರಿಂಗ್​ ಓದುತ್ತಿದ್ದೇನೆ ಎಂದರು.

ಪಾಲಕರಾದ ಶಿವಾನಂದ ಧರಣಿ, ಸವಿತಾ ಧರಣಿ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net