vegg market ಎಪಿಎಂಸಿಯಲ್ಲಿ ಮಾರಾಟವಾಗದ ತರಕಾರಿ ಸ್ಟಾಕ್​

vegg market ಹುಬ್ಬಳ್ಳಿ ಎಪಿಎಂಸಿಯಲ್ಲಿ ಮಳಿಗೆಗಳ ಮುಂದೆ ಇಡಲಾಗಿರುವ ಮಾರಾಟವಾಗದ ತರಕಾರಿ.
vegg market ಹುಬ್ಬಳ್ಳಿ ಎಪಿಎಂಸಿಯಲ್ಲಿ ಮಳಿಗೆಗಳ ಮುಂದೆ ಇಡಲಾಗಿರುವ ಮಾರಾಟವಾಗದ ತರಕಾರಿ.
Published on

ಪ್ರಮುಖ ಮುಖ್ಯಾಂಶಗಳು

  • ಹೋಟೆಲ್​ಗಳು ಬಂದ್​, ಇನ್ನೊಂದೆಡೆ ಅಕಾಲಿಕ ಮಳೆ ಕಾಟ
  • ಹೋಲ್​ಸೇಲ್​ ದರದಲ್ಲಿ ಎಪಿಎಂಸಿಯಿಂದಲೇ ಖರೀದಿ
ಹುಬ್ಬಳ್ಳಿ: vegg market ಒಂದೆಡೆ ಅಕಾಲಿಕ ಜಡಿ ಮಳೆ, ಆಲಿಕಲ್ಲು ಮಳೆಗಳು ಜಮೀನಿನಲ್ಲಿರುವ ಫಸಲಿಗೆ ಮಾರಕವಾಗಿ ಪರಿಣಮಿಸಿದ್ದರೆ, ಇನ್ನೊಂದೆಡೆ ಅಡುಗೆ ಅನಿಲ ಸಿಗದೇ ಹೋಟೆಲ್​ಗಳು ಬಂದ್​ ಆಗಿ ರೈತರು ಬೆಳೆದ ತರಕಾರಿ ಮಾರಾಟವಾಗದೇ ಉಳಿಯುತ್ತಿದೆ.
ಹುಬ್ಬಳ್ಳಿಯ ಎಪಿಎಂಸಿಯು ಉತ್ತರ ಕರ್ನಾಟಕದ ಬಹುದೊಡ್ಡ ತರಕಾರಿ ಮಾರುಕಟ್ಟೆಯಾಗಿದೆ. ಇಲ್ಲಿಗೆ ನಿತ್ಯ ನೂರಾರು ಲೋಡ್​ ತರಕಾರಿ ಬರುತ್ತದೆ.
ಧಾರವಾಡ ಮಾತ್ರವಲ್ಲ, ಅಕ್ಕಪಕ್ಕದ ಗದಗ, ಹಾವೇರಿ, ಕೊಪ್ಪಳ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಯಿಂದಲೂ ಕಾಯಿಪಲ್ಯ ಮಾರಾಟ ಮಾಡಲು ರೈತರು ಬರುತ್ತಾರೆ. ಹಾಗಾಗಿ ತರಕಾರಿ ವ್ಯಾಪಾರ ಭರ್ಜರಿಯಾಗಿ ನಡೆಯುತ್ತದೆ.
ಅನೇಕ ಹೋಟೆಲ್​ ನವರು ತರಕಾರಿಯನ್ನೂ ಹೋಲ್​ಸೇಲ್​ ದರದಲ್ಲಿ ಎಪಿಎಂಸಿಯಿಂದಲೇ ಖರೀದಿ ಮಾಡುತ್ತಾರೆ. ಆದರೆ, ಕಳೆದೊಂದು ವಾರದಿಂದ ಸಿಲಿಂಡರ್​ ಸಿಗದೇ ಅನೇಕ ಹೋಟೆಲ್​ಗಳ ಬಾಗಿಲು ಬಂದ್​ ಆಗಿವೆ. ಇದರಿಂದ ತರಕಾರಿ ವ್ಯಾಪಾರ ಕುಂಟುತ್ತ ಸಾಗಿದೆ.
ಎಪಿಎಂಸಿಯ ಹೋಲ್​ಸೇಲ್​ ಮಾರುಕಟ್ಟೆಯಲ್ಲಿ ತರಕಾರಿಯು ಮಾರಾಟವಾಗದೇ ಹಾಗೇ ಉಳಿಯುತ್ತಿದೆ. ಅನೇಕ ಮಳಿಗೆಗಳ ಮುಂದೆ ಉಳಿದ ಕಾಯಿಪಲ್ಯವನ್ನು ಸ್ಟಾಕ್​ ಇಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಮಾನ್ಯ ದಿನಗಳಲ್ಲಿ ಎಪಿಎಂಸಿಗೆ ನಿತ್ಯ 30 ಸಾವಿರ ಕ್ವಿಂಟಾಲ್​ನಷ್ಟು ತರಕಾರಿ ಆವಕವಾಗುತ್ತದೆ. ಇದರಲ್ಲಿ ಅರ್ಧದಷ್ಟೂ ಈಗ ಖಾಲಿಯಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಹಾಗೆಂದು ದರ ಇಳಿಕೆಯಾಗಿಲ್ಲ. ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬೆಲೆ ಇಳಿದಿದೆ. ಮೊದಲೆಲ್ಲ ಕೆಜಿಗೆ 80ರೂ. ಆಸುಪಾಸು ಇದ್ದ ತರಕಾರಿ, ಈಗ 50-60 ರೂ. ಗೆ ಇಳಿದಿದೆ.
ಬದನೆಕಾಯಿ, ಹಿರೇಕಾಯಿ, ಸೌತೆಕಾಯಿ, ಡೊಣ್ಣಮೆಣಸಿನಕಾಯಿ ಹೀಗೆ ಬಹುತೇಕ ಎಲ್ಲ ತರಕಾರಿಯು ಮಾರಾಟವಾಗದೇ ಉಳಿಯುತ್ತಿದೆ. ಸೊಪ್ಪಿನ ಪಲ್ಯವೂ ಉಳಿಯುತ್ತಿದ್ದು, ಬಿಸಿಲಿಗೆ ಬೇಗ ಬಾಡಿ ಹೋಗುತ್ತಿದೆ. ಇದೆಲ್ಲದರ ದುಷ್ಪರಿಣಾಮವನ್ನು ರೈತರು ಎದುರಿಸಬೇಕಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net