Veerashaiva: ಸರ್ವ ಜನಾಂಗದ ಸಂಗಮ ವೀರಶೈವ ಧರ್ಮ

veerashaiva: ನವಲಗುಂದ ಪಟ್ಟಣ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಿಸಲಾಯಿತು. (Veerashaiva) ವೀರಬಸವ ದೇವರು, ಸುಧೀರ ಸಾಹುಕಾರ, ಎಂ.ಪಿ. ಬಾಳಿಹಳ್ಳಿಮಠ ಇತರರು ಇದ್ದರು.
veerashaiva: ನವಲಗುಂದ ಪಟ್ಟಣ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಿಸಲಾಯಿತು. (Veerashaiva) ವೀರಬಸವ ದೇವರು, ಸುಧೀರ ಸಾಹುಕಾರ, ಎಂ.ಪಿ. ಬಾಳಿಹಳ್ಳಿಮಠ ಇತರರು ಇದ್ದರು.
Published on
ನವಲಗುಂದ: ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ (Veerashaiva) ಕೇವಲ ಜಂಗಮರಿಗೆ ಮಾತ್ರ ಸೀಮಿತವಲ್ಲ. ಎಲ್ಲ ಜಾತಿಯನ್ನೊಳಗೊಂಡ ಧರ್ಮವೇ ವೀರಶೈವವಾಗಿದ್ದು, ಜಾತಿಗೆ ಸೀಮಿತರಾಗದೆ ಎಲ್ಲ ಸಮಾಜದವರು ಒಗ್ಗೂಡಿ ಜಯಂತಿಯನ್ನು ಆಚರಿಸಿ ಸಮಾಜದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಪಂಚಗ್ರಹ ಹಿರೇಮಠದ ನಿಯೋಜಿತ ಉತ್ತರಾಧಿಕಾರಿ ವೀರಬಸವ ದೇವರು ಅಭಿಪ್ರಾಯಪಟ್ಟರು.
ಪಟ್ಟಣದ ತಹಸೀಲ್ದಾರ್ ಕಾರ್ಯಲಯದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ತಹಸೀಲ್ದಾರ್ ಸುಧೀರ ಸಾವಕಾರ ಮಾತನಾಡಿ, ‘ಜಗದ್ಗುರು ರೇಣುಕಾಚಾರ್ಯರು ಶೈವ ತತ್ವಗಳನ್ನು ಆಳವಾಗಿ ಅಧ್ಯಯನ ಮಾಡಿ ಇಷ್ಟಲಿಂಗ ಧಾರಣೆಯ ಮೂಲಕ ಭಗವಂತನನ್ನು ಪೂಜಿಸಲು ಸಮಾಜಕ್ಕೆ ತಿಳಿಸಿದರು. ಅವರ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.
ಮುರಗಯ್ಯ ಬಾಳಿಹಳ್ಳಿಮಠ, ಸಿದ್ದಲಿಂಗಯ್ಯ ಹಿರೇಮಠ, ಅಣ್ಣಪ್ಪ ಬಾಗಿ, ಅಶೋಕ ಮಜ್ಜಿಗುಡ್ಡ, ಎಂ.ಡಿ. ಕುಲಕರ್ಣಿ, ಶಶಿಧರ ಭರತ ಭೋಜನಮಠ, ಚರಂತಯ್ಯ ಹಿರೇಮಠ, ಬಸವರಾಜ ಕೆರಿಮಠ, ಕೊಟ್ರೇಶ ಹಿರೇಮಠ, ಕಲ್ಲಯ್ಯ ಹೊಸಮನಿ, ವೀರೇಶ ಜಾವೂರಮಠ, ಮುತ್ತು ಹಿರೇಮಠ, ಸಂಗಯ್ಯ ಹಿರೇಮಠ, ಶಂಕ್ರಯ್ಯ ಸುಭೇದಾರಮಠ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net