ಬೆಳಗಾವಿಯಲ್ಲಿ ಇತ್ತೀಚೆಗೆ ಜರುಗಿದ ಸಿಐಎಸ್‌ಸಿಇ ವಲಯ-ಜೆ ಕ್ರೀಡಾಕೂಟದಲ್ಲಿ ಹುಬ್ಬಳ್ಳಿ ವೇದ ಇಂಟರ್‌ನ್ಯಾಷನಲ್ ಶಾಲೆಯ Veda School ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಗೆದ್ದು ಸಂಭ್ರಮಿಸಿದರು.
ಹುಬ್ಬಳ್ಳಿ: ಬೆಳಗಾವಿಯಲ್ಲಿ ಇತ್ತೀಚೆಗೆ ಜರುಗಿದ ಸಿಐಎಸ್‌ಸಿಇ ವಲಯ-ಜೆ ಕ್ರೀಡಾಕೂಟದಲ್ಲಿ ಹುಬ್ಬಳ್ಳಿ ವೇದ ಇಂಟರ್‌ನ್ಯಾಷನಲ್ ಶಾಲೆಯ
Veda School
ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಗೆದ್ದು ಬೀಗಿದ್ದಾರೆ.
ವೈಯಕ್ತಿಕ ವಿಭಾಗದಲ್ಲಿ ಶುಭಾ ಹೊಲ್ತಿಕೋಟಿ (ಅಂಡರ್-17) ಉದ್ದ ಜಿಗಿತದಲ್ಲಿ ಪ್ರಥಮ ಹಾಗೂ 100 ಮೀಟರ್ ಓಟದಲ್ಲಿ ದ್ವಿತೀಯ, ಹರ್ಷ ಕಲ್ರಾ (ಅಂಡರ್-14) ಕರಾಟೆಯಲ್ಲಿ ಪ್ರಥಮ.
100 ಮೀಟರ್ ಓಟ ಮತ್ತು ಎತ್ತರ ಜಿಗಿತದಲ್ಲಿ ತೃತೀಯ, ಪ್ರಗತಿ ಅಯ್ಯನಗೌಡರ (ಅಂಡರ್-14) 400 ಮೀಟರ್ ಓಟದಲ್ಲಿ ದ್ವಿತೀಯ, ಪೂಜಾ ಗಣಿ (ಅಂಡರ್-14) ಉದ್ದ ಜಿಗಿತ ಮತ್ತು ಯೋಗದಲ್ಲಿ ದ್ವಿತೀಯ, 100 ಮೀಟರ್ ಓಟದಲ್ಲಿ ತೃತೀಯ.
ಟಿ. ಸಮರ್ಜಿತ (ಅಂಡರ್-17) ಚದುರಂಗದಲ್ಲಿ ದ್ವಿತೀಯ, ನಿಷ್ಕಲ್ ಅಗಸಿಮಾನಿ ಯೋಗದಲ್ಲಿ ದ್ವಿತೀಯ, ಬಸವರಾಜ ನವಲೂರು (ಅಂಡರ್-17) ಉದ್ದ ಜಿಗಿತದಲ್ಲಿ ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಗುಂಪು ಸ್ಪರ್ಧೆಯಲ್ಲಿ ಬಾಸ್ಕೆಟ್‌ಬಾಲ್ ತಂಡ ಪ್ರಥಮ, 4*100 ಮೀಟರ್ ರಿಲೇ ತಂಡ ದ್ವಿತೀಯ ಹಾಗೂ ಕಬಡ್ಡಿ ತಂಡ ತೃತೀಯ ಸ್ಥಾನ ಪಡೆದಿದೆ.
ಹುಬ್ಬಳ್ಳಿಯ ವೇದ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಲಯ-ಜೆ ಕ್ರೀಡಾಕೂಟದಲ್ಲಿ ಹರ್ಷ ಕಲ್ರಾ, ನಿಷ್ಕಲ್ ಅಗಸಿಮಾನಿ ಹಾಗೂ ಪೂಜಾ ಗಣಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳ ಸಾಧನೆಗೆ ಶಾಲೆ ಅಧ್ಯಕ್ಷ ಸಂಕಲ್ಪ ಶೆಟ್ಟರ್, ಟ್ರಸ್ಟಿ ಶ್ರದ್ಧಾ ಸಂಕಲ್ಪ ಶೆಟ್ಟರ್, ಪ್ರಾಂಶುಪಾಲೆ ಕಲಾವತಿ ಕೆಂಚರಾವತ, ಆಡಳಿತಾಧಿಕಾರಿ ಪರಮ್ ಕಿತ್ಲಿ, ದೈಹಿಕ ಶಿಕ್ಷಣ ಶಿಕ್ಷಕರಾದ ಮಂಜುನಾಥ ಹಾಗೂ ದಿವ್ಯಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.