corruption ಭ್ರಷ್ಟಾಚಾರ ತಡೆಗಟ್ಟಲು ವಿಬಿ-ಜಿ ರಾಮ್ ಜಿ ಜಾರಿಗೆ

corruption ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಕೇಂದ್ರ ಕಾರ್ವಿುಕ ಮತ್ತು ಉದ್ಯೋಗ ಹಾಗೂ ಸೂಕ್ಷ್ಮ, ಸಣ್ಣ, ಮಧ್ಯಮ ಉದ್ಯಮಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ.
corruption ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಕಾರ್ವಿುಕ ಮತ್ತು ಉದ್ಯೋಗ ಹಾಗೂ ಸೂಕ್ಷ್ಮ, ಸಣ್ಣ, ಮಧ್ಯಮ ಉದ್ಯಮಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ.
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ.
  • ಕೆಲವು ರಾಜ್ಯಗಳು ಮನರೇಗಾ ಯೋಜನೆ ಹೆಸರಿನಲ್ಲಿ ನಕಲಿ ಜಾಬ್​ಕಾರ್ಡ್ ಸೃಷ್ಟಿಸಿದ್ದವು.
  • ಇದೀಗ, 120 ಮಾನವ ದಿನಗಳ ಕೆಲಸ ನೀಡಲಾಗುವುದು.
ಇಲ್ಲಿನ ಅರವಿಂದ ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನರೇಗಾ ಹೆಸರಿನಲ್ಲಿ ನಕಲಿ ಬಿಲ್​ಗಳನ್ನು ಸೃಷ್ಟಿಸಿ ಲಕ್ಷಾಂತರ ರೂ. ಲೂಟಿ ಮಾಡಲಾಗಿದೆ. ಇದರಿಂದ ಬಡ ಕೂಲಿಕಾರ್ವಿುಕರಿಗೆ ಅನ್ಯಾಯವಾಗಿದೆ. ಈ ಸೋರಿಕೆ ತಡೆಗಟ್ಟಲು ಜಿ ರಾಮ್ ತರಲಾಗಿದೆ ಎಂದರು.
ಮನರೇಗಾ ಯೋಜನೆ ಸ್ಥಗಿತಗೊಳಿಸಲಾಗಿದೆ ಎಂಬ ಕಾಂಗ್ರೆಸ್ ಆರೋಪ ಸತ್ಯಕ್ಕೆ ದೂರವಾಗಿದೆ. ಈ ಯೋಜನೆಯಲ್ಲಿ ನಡೆದಿದ್ದ ಅಕ್ರಮಗಳನ್ನು ನರೇಂದ್ರ ಮೋದಿ ಸರ್ಕಾರ ಸರಿಪಡಿಸಿ, ಸುಧಾರಣೆಗೊಳಿಸಿದೆಯಷ್ಟೆ ಎಂದು ಹೇಳಿದರು.
ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವ ಉದ್ದೇಶದಿಂದ 2005ರಲ್ಲಿ ಪ್ರಾರಂಭಗೊಂಡ ಮನರೇಗಾ ಯೋಜನೆಯಡಿ ಇದುವರೆಗೆ 10.67 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ.
ಯುಪಿಎ ಅವಧಿಯಲ್ಲಿ 2,13,220 ಕೋಟಿ ರೂ. ಖರ್ಚು ಮಾಡಿದ್ದರೆ, ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರದ ಅವಧಿಯಲ್ಲಿ ಇದುವರೆಗೆ 8,53,810 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ವಿವರಿಸಿದರು.
ಕೆಲವು ರಾಜ್ಯಗಳು ಮನರೇಗಾ ಯೋಜನೆ ಹೆಸರಿನಲ್ಲಿ ನಕಲಿ ಜಾಬ್​ಕಾರ್ಡ್ ಸೃಷ್ಟಿಸಿದ್ದವು. ಮನರೇಗಾ ಹಣ ದುರುಪಯೋಗ ಪಡಿಸಿಕೊಂಡ 10.50 ಲಕ್ಷ ಪ್ರಕರಣಗಳು ದೇಶಾದ್ಯಂತ ದಾಖಲಾಗಿವೆ. ಹೀಗಾಗಿ, ಈ ಯೋಜನೆಯ ನವೀಕರಣದ ಅವಶ್ಯಕತೆ ಇತ್ತು. ಇದುವರೆಗೆ ಪ್ರತಿ ವರ್ಷಕ್ಕೆ 100 ಮಾನವ ದಿನಗಳ ಕೆಲಸ ನೀಡಲಾಗುತ್ತಿತ್ತು.
ಇದೀಗ, 120 ಮಾನವ ದಿನಗಳ ಕೆಲಸ ನೀಡಲಾಗುವುದು. ಕಾಂಗ್ರೆಸ್​ನ ಬಹುತೇಕರು ನವೀಕೃತ ಹೊಸ ಯೋಜನೆ ಬಗ್ಗೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಆದರೆ, ಲೋಕಸಭೆಯಲ್ಲಿ ಕಾಂಗ್ರೆಸ್ ಈ ಯೋಜನೆ ವಿರೋಧಿಸುತ್ತಿರುವುದರಿಂದ ತಮ್ಮ ಪಕ್ಷದೊಂದಿಗೆ ಧ್ವನಿ ಗೂಡಿಸುವುದು ಅವರಿಗೆ ಅನಿವಾರ್ಯವಾಗಿದೆ ಎಂದರು.
ಚರ್ಚೆಗೆ ಕರೆದರೆ ಸಿದ್ಧ: ವಿಬಿ-ಜಿ ರಾಮ್ ಜಿ ಯೋಜನೆ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಬಹಿರಂಗ ಚರ್ಚೆಗೆ ಆಹ್ವಾನಿಸಿದರೆ ಹೋಗುತ್ತೇನೆ. ಸಮಯ ಹಾಗೂ ದಿನವನ್ನು ಅವರೇ ನಿರ್ಧರಿಸಲಿ ಎಂದು ಸಚಿವೆ ಶೊಭಾ ಕರಂದ್ಲಾಜೆ ಸವಾಲು ಹಾಕಿದರು.
ಶಾಸಕ ಮಹೇಶ ಟೆಂಗಿನಕಾಯಿ, ಹು-ಧಾ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ ಚವ್ಹಾಣ, ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಜಿಲ್ಲಾ ಅಧ್ಯಕ್ಷರಾದ ತಿಪ್ಪಣ್ಣ ಮಜ್ಜಗಿ, ನಿಂಗಪ್ಪ ಸುತಗಟ್ಟಿ, ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net