ಹೆಬ್ಬಳ್ಳಿಯಲ್ಲಿ ವಾಸುದೇವ ಶ್ರೀ ರಥೋತ್ಸವ Rathotsava ಸಂಭ್ರಮ

ಧಾರವಾಡ ತಾಲೂಕಿನ ಹೆಬ್ಬಳ್ಳಿಯ ಶಿವಾನಂದಮಠದ ವಾಸುದೇವ ಸ್ವಾಮೀಜಿ ಹಾಗೂ ಪುಣ್ಯಾರಾಧನೆ ಅಂಗವಾಗಿ ಸೋಮವಾರ ವಾಸುದೇವರ ರಥೋತ್ಸವ  Rathotsava ವಿಜೃಂಭಣೆಯಿಂದ ಜರುಗಿತು.
ಧಾರವಾಡ ತಾಲೂಕಿನ ಹೆಬ್ಬಳ್ಳಿಯ ಶಿವಾನಂದಮಠದ ವಾಸುದೇವ ಸ್ವಾಮೀಜಿ ಹಾಗೂ ಪುಣ್ಯಾರಾಧನೆ ಅಂಗವಾಗಿ ಸೋಮವಾರ ವಾಸುದೇವರ ರಥೋತ್ಸವ Rathotsava ವಿಜೃಂಭಣೆಯಿಂದ ಜರುಗಿತು.
Published on
ಉಪ್ಪಿನಬೆಟಗೇರಿ: ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಶಿವಾನಂದ ಮಠದ ವಾಸುದೇವ ಸ್ವಾಮೀಜಿ ಹಾಗೂ ಪುಣ್ಯಾರಾಧನೆ ಅಂಗವಾಗಿ ಸೋಮವಾರ ವಾಸುದೇವರ ಮೂರ್ತಿಯ ರಥೋತ್ಸವ  Rathotsava ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.
ಬೆಳಿಗ್ಗೆ ಉಭಯ ಶ್ರೀಗಳ ಕರ್ತು ಗದ್ದುಗೆಗೆ ಅರ್ಚಕರು ವಿವಿಧ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು. ನಂತರ ಬಸವರಾಜ ಸ್ವಾಮೀಜಿಯ ನೂತನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯಿತು. ಮಧ್ಯಾಹ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಸಂಜೆ 5 ಗಂಟೆಗೆ ಗದಗ ಶಿವಾನಂದ ಮಠದ ಅಭಿನವ ಶಿವಾನಂದ ಸ್ವಾಮೀಜಿ, ಬ್ರಹ್ಮಾನಂದ ಸ್ವಾಮೀಜಿ, ಶಿವಶರಣೆ ಮುಕ್ತಾತಾಯಿ ರಥೋತ್ಸವಕ್ಕೆ ಚಾಲನೆ ನೀಡಿದರು. ವಿವಿಧ ವಾಧ್ಯಮೇಳದೊಂದಿಗೆ ರಥೋತ್ಸವ ಶ್ರೀಮಠದಿಂದ ಆರಂಭವಾಯಿತು. 
ಚಂಗಲಾಪರಮೇಶ್ವರಿ ದೇವಸ್ಥಾನದವರೆಗೆ ಎಳೆದ ತೇರು ಮರಳಿ ಶಿವಾನಂದ ಮಠ ತಲುಪಿತು. ಭಕ್ತರು ತೇರಿಗೆ ಉತ್ತತ್ತಿ, ನಿಂಬೆ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಸುತ್ತಲಿನ ಗ್ರಾಮಗಳ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net