vascular ಸುಖದಾ ವ್ಯಾಸ್ಕುಲರ್​ ಇನ್​ಸ್ಟಿಟ್ಯೂಟ್​ ಉದ್ಘಾಟನೆ

vascular ಹುಬ್ಬಳ್ಳಿಯಲ್ಲಿ ಭಾನುವಾರ ಸುಖದಾ ವ್ಯಾಸ್ಕುಲರ್​ ಹಾಗೂ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ಸಮಾರಂಭದಲ್ಲಿ ಸಿಇಒ ಡಾ. ಚೇತನ ಹೊಸಕಟ್ಟಿ ಹಾಗೂ ಡಾ. ರಶ್ಮಿ ಹೊಸಕಟ್ಟಿ ಅವರನ್ನು ಸನ್ಮಾನಿಸಲಾಯಿತು. ವಿಆರ್​ಎಲ್​ ಸಮೂಹ ಸಂಸ್ಥೆಗಳ ಚೇರ್ಮನ್​ ಡಾ. ವಿಜಯ ಸಂಕೇಶ್ವರ, ಕೆಎಲ್​ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ವೀರಣ್ಣ ಮಳಗಿ, ಬಸವರಾಜ ಯಕಲಾಸಪುರ, ಇತರರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ರಕ್ತನಾಳ - ಮಧುಮೇಹ ಕಾಯಿಲೆಗೆ ವಿಶೇಷ ಚಿಕಿತ್ಸೆ
ಹುಬ್ಬಳ್ಳಿ: vascular ಉತ್ತರ ಕರ್ನಾಟಕ ಆರೋಗ್ಯ ಕ್ಷೇತ್ರದ ಮೈಲಿಗಲ್ಲು ಎಂದೇ ಹೇಳಲಾಗುವ ರಕ್ತನಾಳ ಹಾಗೂ ಮಧುಮೇಹಿ ಕಾಲು ರೋಗಗಳ ಚಿಕಿತ್ಸೆಗೆ ಮೀಸಲಾದ 50 ಹಾಸಿಗೆಯ ಸುಖದಾ ವ್ಯಾಸ್ಕುಲರ್​ ಮತ್ತು ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆಯು ಭಾನುವಾರ ಶುಭಾರಂಭಗೊಂಡಿತು.
ಇಲ್ಲಿಯ ಹೊಸೂರ ಉಣಕಲ್ಲ ರಸ್ತೆ ಹೊಸ ಕೋರ್ಟ್​ ಬಳಿಯ ಚೇತನ ಕಾಲನಿಯಲ್ಲಿ ನಿರ್ಮಿಸಲಾದ ಸುಸಜ್ಜಿತ ಆಸ್ಪತ್ರೆಯಲ್ಲಿ ಶ್ರ್ರೀಮದ್​ ಉಜ್ಜಯನಿ ಜಗದ್ಗುರು ರವುಡಕುಂದ ಶ್ರೀ ಸಿದ್ಧಾಶ್ರಮ ವೆಂಕಟಗಿರಿ ಕ್ಯಾಂಪ್​ನ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶ್ರೀಗಣೇಶ ಹಾಗೂ ಶಿವ ಪಾರ್ವತಿಯ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಮಂತ್ರಘೋಷ, ಮಂಗಳವಾದ್ಯದೊಂದಿಗೆ ಪೂಜಾ ಕೈಂಕರ್ಯ ಜರುಗಿಸಲಾಯಿತು.
ಬೆಂಗಳೂರಿನ ರಾಮಯ್ಯ ಆಸ್ಪತ್ರೆಯ ವ್ಯಾಸ್ಕುಲರ್​ ವಿಭಾಗದ ಮುಖ್ಯಸ್ಥ ಡಾ. ಸಂಜಯ ದೇಸಾಯಿ, ಸುಖದಾ ಆಸ್ಪತ್ರೆ ಸಿಇಒ ಹಾಗೂ ಮುಖ್ಯ ರಕ್ತನಾಳ ಶಸ್ತ್ರ ಚಿಕಿತ್ಸಕ ಡಾ. ಚೇತನ ಹೊಸಕಟ್ಟಿ, ಆಡಳಿತಾಧಿಕಾರಿ ಡಾ. ರಶ್ಮಿ ಹೊಸಕಟ್ಟಿ, ಕುಟುಂಬ ಸದಸ್ಯರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.
ವಿಆರ್​ಎಲ್​ ಸಮೂಹ ಸಂಸ್ಥೆಗಳ ಚೇರ್ಮನ್​ ಡಾ. ವಿಜಯ ಸಂಕೇಶ್ವರ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದ ಜಗದೀಶ್​ ಶೆಟ್ಟರ್​, ಕೆಎಲ್​ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಮಾಜಿ ಸಚಿವರಾದ ಪಿ.ಸಿ. ಸಿದ್ದನಗೌಡರ, ಶಂಕರ ಪಾಟೀಲ್​ ಮುನೇನಕೊಪ್ಪ, ಶಾಸಕ ಎಂ.ಆರ್​. ಪಾಟೀಲ, ಮಾಜಿ ಶಾಸಕ ಎಸ್​.ಐ. ಚಿಕ್ಕನಗೌಡರ, ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಶುಭ ಹಾರೈಸಿದರು. ಹೊಸಕಟ್ಟಿ ದಂಪತಿಯನ್ನು ಸನ್ಮಾನಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net