valvex ಹುಬ್ಬಳ್ಳಿಯಲ್ಲಿ ‘ವಾಲ್ವ್​ಎಕ್ಸ್-2026’ ಆಯೋಜನೆ

valvex ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಕರ್ನಾಟಕ ವಾಲ್ವ್ ತಯಾರಕರ ಸಂಘದ ಅಧ್ಯಕ್ಷ ಎಸ್.ಕೆ. ಅವಟೆ,
valvex ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಕರ್ನಾಟಕ ವಾಲ್ವ್ ತಯಾರಕರ ಸಂಘದ ಅಧ್ಯಕ್ಷ ಎಸ್.ಕೆ. ಅವಟೆ,
Published on

ಪ್ರಮುಖ ಮುಖ್ಯಾಂಶಗಳು

  • ಫೆ. 19 ರಿಂದ ಮೂರು ದಿನಗಳ ಕಾಲ ಪ್ರದರ್ಶನ ಏರ್ಪಾಡು
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಕರ್ನಾಟಕ ವಾಲ್ವ್ ತಯಾರಕರ ಸಂಘದ ಅಧ್ಯಕ್ಷ ಎಸ್.ಕೆ. ಅವಟೆ, ಫೆ. 18ರಂದು ಸಂಜೆ 4 ಗಂಟೆಗೆ ಉದ್ಘಾಟನೆ ನಡೆಯಲಿದೆ. ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ, ಸಂಸದ ಬಸವರಾಜ ಬೊಮ್ಮಾಯಿ, ಸಚಿವ ಎಂ.ಬಿ. ಪಾಟೀಲ, ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಮಾಜಿ ಸಚಿವ ಮುರುಗೇಶ ನಿರಾಣಿ ಹಾಗೂ ಇನ್ನಿತರರನ್ನು ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಲಾಗಿದೆ ಎಂದು ತಿಳಿಸಿದರು.
21ರಂದು ಸಂಜೆ 5.30ಕ್ಕೆ ನಡಯಲಿರುವ ಸಮಾರೋಪ ಸಮಾರಂಭದಲ್ಲಿ ಮೈಕ್ರೋಫಿನಿಶ್ ಗ್ರುಪ್ ಚೇರ್ಮನ್ ತಿಲಕ ವಿಕಂಶಿ ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಪ್ರದರ್ಶನದಲ್ಲಿ 60 ಮಳಿಗೆಗಳು ಇರಲಿವೆ. ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಪುಣೆ, ಮುಂಬೈ, ಹೈದರಾಬಾದ್, ಅಹಮದಾಬಾದ್, ಚೆನೈ ಸೇರಿದಂತೆ ದೇಶದ ವಿವಿಧೆಡೆಯ ಹಾಗೂ ಸೌದಿ ಅರೇಬಿಯಾ, ಕತಾರ್ ಸೇರಿದಂತೆ ಇನ್ನಿತರ ವಿದೇಶಿ ಉದ್ಯಮಿಗಳು ಭಾಗವಹಿಸುವರು ಎಂದು ಹೇಳಿದರು.
19ರಂದು ತೈಲ ಹಾಗೂ ಅನಿಲ ವಲಯದ ವಾಲ್ವ್​ಗಳ ಕುರಿತು ತಾಂತ್ರಿಕ ಸಮ್ಮೇಳನ, 20ರಂದು ವಿದ್ಯುತ್ ಉತ್ಪಾದನಾ ವಲಯದ ವಾಲ್ವ್​ಗಳ ಕುರಿತು ತಾಂತ್ರಿಕ ಸಮ್ಮೇಳನ, 21ರಂದು ಸಕ್ಕರೆ, ಉಕ್ಕು ಮತ್ತು ರಾಸಾಯನಿಕ ಉದ್ಯಮಗಳ ವಾಲ್ವ್​ಗಳ ಕುರಿತು ತಾಂತ್ರಿಕ ಸಮ್ಮೇಳನ ನಡೆಯಲಿದೆ ಎಂದು ತಿಳಿಸಿದರು.
ಥರ್ಮಲ್ ಪವರ್, ತೈಲ ಮತ್ತು ಅನಿಲ, ಗಣಿಗಾರಿಕೆ, ಉಕ್ಕು, ಪರಮಾಣು ಶಕ್ತಿ, ಸಕ್ಕರೆ, ಸಿಮೆಂಟ್ ಇನ್ನಿತರ ಕ್ಷೇತ್ರಗಳ ಉದ್ಯಮಿಗಳು ಭಾಗವಹಿಸುವರು.
ಹುಬ್ಬಳ್ಳಿಯನ್ನು ವಾಲ್ವ್ ಮ್ಯಾನುಫ್ಯಾಕ್ಚರಿಂಗ್ ಕ್ರಸ್ಟರ್ ಆಗಿ ಅಭಿವೃದ್ಧಿಪಡಿಸುವುದು ಈ ಪ್ರದರ್ಶನದ ಮುಖ್ಯ ಉದ್ದೇಶ ಎಂದರು.
ಸ್ಥಳೀಯ ತಯಾರಕರಿಗೆ ತಂತ್ರಜ್ಞಾನ ಮೇಲ್ದರ್ಜೆಗೇರಿಸಲು ಮತ್ತು ಕೌಶಲ ಅಭಿವದ್ಧಿಗೆ ಬೆಂಬಲ ನೀಡಲು ಹುಬ್ಬಳ್ಳಿಯಲ್ಲಿ ಸಾಮಾನ್ಯ ಸೌಲಭ್ಯ ಕೇಂದ್ರ ಸ್ಥಾಪಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.
ಪ್ರದರ್ಶನದ ಚೇರ್ಮನ್ ರಮೇಶ ಪಾಟೀಲ, ನಾಗರಾಜ ದಿವಟೆ, ರಘುನಂದ ಮಟ್ಕರ, ಹೇಮಾ ಬೆಂತೂರ, ರಾಜು ಪಾಟೀಲ ಸುದ್ದಿಗೋಷ್ಠಿಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net