valuers seminar ಆಸ್ತಿ ಮೌಲ್ಯಮಾಪನದಲ್ಲಿ ನಿಖರತೆ ಅಗತ್ಯ

valuers seminar ಹುಬ್ಬಳ್ಳಿಯಲ್ಲಿ ಇನ್​ಸ್ಟಿಟ್ಯೂಶನ್​ ಆಫ್ ವಾಲ್ಯೂವರ್ಸ್​ (ಐಒವಿ) ಹುಬ್ಬಳ್ಳಿ ಶಾಖೆ ವತಿಯಿಂದ ಶನಿವಾರ ಏರ್ಪಡಿಸಿದ್ದ ವಿಚಾರ ಸಂಕಿರಣವನ್ನು ಯೂನಿಯನ್​ ಬ್ಯಾಂಕ್​ ಆಫ್​ ಇಂಡಿಯಾ ಪ್ರಾದೇಶಿಕ ಕಚೇರಿ ಅಶ್ಯೂರನ್ಸ್​ ವಿಭಾಗದ ಮುಖ್ಯಸ್ಥ ರಾಜೇಶ ಉದ್ಘಾಟಿಸಿದರು. ಜಿ.ಎಸ್​. ಅಂಗಡಿ, ಎಚ್​.ಎಂ. ಕುಮಾರ, ನಟರಾಜ ಮೂರ್ಶಿಳ್ಳಿ, ದೇವೇಂದ್ರ ಪಾಟೇಕರ, ಶ್ರೀಧರ, ಶಿವಪ್ರಸಾದ, ಇತರರು ಪಾಲ್ಗೊಂಡಿದ್ದರು.
valuers seminar ಹುಬ್ಬಳ್ಳಿಯಲ್ಲಿ ಇನ್​ಸ್ಟಿಟ್ಯೂಶನ್​ ಆಫ್ ವಾಲ್ಯೂವರ್ಸ್​ (ಐಒವಿ) ಹುಬ್ಬಳ್ಳಿ ಶಾಖೆ ವತಿಯಿಂದ ಶನಿವಾರ ಏರ್ಪಡಿಸಿದ್ದ ವಿಚಾರ ಸಂಕಿರಣವನ್ನು ಯೂನಿಯನ್​ ಬ್ಯಾಂಕ್​ ಆಫ್​ ಇಂಡಿಯಾ ಪ್ರಾದೇಶಿಕ ಕಚೇರಿ ಅಶ್ಯೂರನ್ಸ್​ ವಿಭಾಗದ ಮುಖ್ಯಸ್ಥ ರಾಜೇಶ ಉದ್ಘಾಟಿಸಿದರು. ಜಿ.ಎಸ್​. ಅಂಗಡಿ, ಎಚ್​.ಎಂ. ಕುಮಾರ, ನಟರಾಜ ಮೂರ್ಶಿಳ್ಳಿ, ದೇವೇಂದ್ರ ಪಾಟೇಕರ, ಶ್ರೀಧರ, ಶಿವಪ್ರಸಾದ, ಇತರರು ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿಎ ನಟರಾಜ ಮೂರ್ಶಿಳ್ಳಿ ಮಾರ್ಗದರ್ಶನ
  • ಹುಬ್ಬಳ್ಳಿಯಲ್ಲಿ ಮೌಲ್ಯಮಾಪಕರಿಗಾಗಿ ವಿಚಾರ ಸಂಕಿರಣ
ಹುಬ್ಬಳ್ಳಿ: valuers seminar ಆಸ್ತಿ ಮೌಲ್ಯಮಾಪನಕ್ಕೆ ಸಂಬಂಧಿಸಿ ಅನೇಕ ಕಾನೂನುಗಳು ಇವೆ. ಇತ್ತೀಚೆಗೆ ಹೊಸದಾಗಿ ಬಂದಿರುವ ಕಾಯಿದೆ ಪ್ರಕಾರ ಅಧಿಕೃತ ವ್ಯಕ್ತಿ ಹಾಗೂ ಸರಿಯಾದ ರೀತಿಯಲ್ಲಿ ಮೌಲ್ಯಮಾಪನ ಮಾಡುವುದಕ್ಕೆ ಆದ್ಯತೆ ನೀಡಲಾಗಿದೆ. ಇದುವೇ ನಿಯಮದ ವಿಶೇಷತೆಯಾಗಿದೆ ಎಂದು ಹಿರಿಯ ಲೆಕ್ಕಪರಿಶೋಧಕ ನಟರಾಜ ಮೂರ್ಶಿಳ್ಳಿ ಹೇಳಿದರು.
ಇನ್​ಸ್ಟಿಟ್ಯೂಶನ್​ ಆಫ್ ವಾಲ್ಯೂವರ್ಸ್​ (ಮೌಲ್ಯಮಾಪಕರ ಸಂಸ್ಥೆ - ಐಒವಿ) ಹುಬ್ಬಳ್ಳಿ ಶಾಖೆ ವತಿಯಿಂದ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಹೊಸದಾಗಿ ಪರಿಚಯಿಸಲಾದ ರೂಲ್​ 514ರ ಒಳನೋಟ ಹಾಗೂ ವಿಶೇಷ ರೀತಿಯ ಆಸ್ತಿಗಳ ಮೌಲ್ಯಮಾಪನ ಕುರಿತು ಒಂದು ದಿನದ ವಿಚಾರ ಸಂಕಿರಣದಲ್ಲಿ ಅವರು ಉಪನ್ಯಾಸ ನೀಡಿದರು.
ಆರು ದಶಕಗಳಿಂದ ಕಾಯಿದೆಗಳಿಗೆ ತಿದ್ದುಪಡಿ ಮಾಡುತ್ತಲೇ ಬರಲಾಗಿದೆ. ಅನಧಿಕೃತ ವ್ಯಕ್ತಿಗಳು ಮಾಡುವ ತಪ್ಪು ಮೌಲ್ಯಮಾಪನದಿಂದಾಗಿ ಜನರಿಗೆ ಸಮಸ್ಯೆಯಾಗಲಿದೆ, ಸುಳ್ಳು ಮಾಹಿತಿಯಿಂದ ನೋಟಿಸ್​ ಕೂಡ ಜಾರಿಯಾಗುವ ಸಾಧ್ಯತೆ ಇದೆ. ಹಾಗಾಗಿ ಕಾಯಿದೆಗಳ ಮೂಲಕ ಇದಕ್ಕೆ ಕಡಿವಾಣ ಹಾಕಲಾಗುತ್ತಿದೆ ಎಂದರು.
ಪ್ರತಿಯೊಂದು ವೃತ್ತಿಯಲ್ಲಿ ಒತ್ತಡ, ಸ್ಪರ್ಧೆಗಳು ಇರುತ್ತವೆ. ಆಧ್ಯಾತ್ಮಿಕ ಹಾದಿಯಲ್ಲಿ ವೃತ್ತಿ ಮುನ್ನಡೆಸಿದಾಗ ಮನಸ್ಸಿನ ನೆಮ್ಮದಿ ತಾನಾಗಿಯೇ ಸಿಗುತ್ತದೆ. ಒತ್ತಡದ ಮಧ್ಯೆ ಶಾಂತತೆ ಬೇಕೇಬೇಕು. ಆಗ ಮಾಡುವ ಕೆಲಸಗಳು ಸಲೀಸಾಗುತ್ತವೆ ಎಂದು ಸಲಹೆ ನೀಡಿದರು.
ಅತಿಥಿಯಾಗಿದ್ದ ಯುನಿಯನ್​ ಬ್ಯಾಂಕ್​ ಆಫ್​ ಇಂಡಿಯಾ ಪ್ರಾದೇಶಿಕ ಕಚೇರಿ ಅಶ್ಯೂರನ್ಸ್​ ವಿಭಾಗದ ಮುಖ್ಯಸ್ಥ ರಾಜೇಶ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉತ್ತಮ ವಿಷಯದ ಮೇಲೆ ವಿಚಾರ ಸಂಕಿರಣ ಏರ್ಪಡಿಸಿರುವ ಮೌಲ್ಯಮಾಪಕರ ಸಂಸ್ಥೆಯ ಕಾರ್ಯ ಶ್ಲಾಘನೀಯ. ಆದಾಯ ತೆರಿಗೆಯಲ್ಲಿ ಇತ್ತೀಚೆಗೆ ಬಹಳಷ್ಟು ಬದಲಾವಣೆಗಳು ಆಗಿದ್ದು, ಅವುಗಳ ಬಗ್ಗೆ ತಿಳಿದುಕೊಳ್ಳಲು ಇಂತಹ ಕಾರ್ಯಕ್ರಮ ಅಗತ್ಯ ಎಂದರು.
ದೆಹಲಿ ಐಒವಿ ಕೋಆರ್ಡಿನೇಟರ್​ ಹಾಗೂ ಪರಿಷತ್​ ಸದಸ್ಯ ಜಿ.ಎಸ್​. ಅಂಗಡಿ ಮಾತನಾಡಿ, ಆದಾಯ ತೆರಿಗೆ ಕಾಯಿದೆ ಬಗ್ಗೆ ತಿಳಿದುಕೊಳ್ಳುವುದು ಹಾಗೂ ಮೌಲ್ಯಮಾಪಕರು ತಮ್ಮ ಜ್ಞಾನ ವೃದ್ಧಿ ಮಾಡಿಕೊಳ್ಳಲು ಸೆಮಿನಾರ್​ ನೆರವಾಗಲಿದೆ. ಜೈಪುರದಲ್ಲಿ ಮುಂದಿನ ಎರಡು ತಿಂಗಳಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದ್ದು, ಅದರಲ್ಲಿಯೂ ಭಾಗಿಯಾಗಿ ಇನ್ನಷ್ಟು ಅಪ್​ಡೇಟ್​ ಆಗಬೇಕೆಂದು ಸಲಹೆ ನೀಡಿದರು.
ವಿಷಯ ತಜ್ಞರಾದ ದೇವೇಂದ್ರ ಪಾಟೇಕರ, ಟಿ.ಎನ್​.ಸಿ. ಶ್ರೀಧರ ಉಪನ್ಯಾಸ ನೀಡಿದರು. ಐಒವಿ ಹುಬ್ಬಳ್ಳಿ ಶಾಖೆ ಚೇರ್ಮನ್​ ಎಚ್​.ಎಂ. ಕುಮಾರ ಸ್ವಾಗತಿಸಿದರು. ಶಿವಪ್ರಸಾದ ಲಕಮನಹಳ್ಳಿ ಕಾರ್ಯಕ್ರಮ ನಿರೂಪಿಸಿದರು.
ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಶಿರಸಿ, ಬಳ್ಳಾರಿ, ಗಂಗಾವತಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಅನೇಕ ಮೌಲ್ಯಮಾಪಕರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net