_1763471678418.webp?w=480&auto=format%2Ccompress&fit=max)
_1763471678418.webp?w=480&auto=format%2Ccompress&fit=max)
ಧಾರವಾಡ: ಪಂ.ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನಿಂದ ಪದ್ಮಭೂಷಣ ಸ್ವರಸಾಮ್ರಾಟ ಪಂ.ಬಸವರಾಜ ರಾಜಗುರು ಅವರ ಸ್ಮರಣೆಯಲ್ಲಿ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ನ.22 ಮತ್ತು 23ರಂದು ಸಂಜೆ 5.30ರಿಂದ ವಚನ ಸಂಗೀತೋತ್ಸವ-2025 ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಕೈವಲ್ಯಕುಮಾರ ಗುರವ ತಿಳಿಸಿದರು.
ನಗರದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂದಿನ ವರ್ಷದಿಂದ ಪ್ರತಿ ಎರಡು ತಿಂಗಳಿಗೊಮ್ಮೆ ಟ್ರಸ್ಟ್‌ನಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಮತ್ತು ಟ್ರಸ್ಟ್‌ದಿಂದ ಕೊಡಮಾಡುವ ವಾರ್ಷಿಕ ಪ್ರಶಸ್ತಿ ಜತಗೆ ನೀಡುವ ಗೌರವಧನದ ಮೊತ್ತ ಹೆಚ್ಚಿಸುತ್ತೇವೆ ಎಂದರು.
ನ.22ರಂದು ಶಾಸಕ ಅರವಿಂದ ಚಂದ್ರಕಾಂತ ಬೆಲ್ಲದ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ಡಾ.ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಪಂ.ಎಂ.ವೆಂಕಟೇಶಕುಮಾರ ಆಗಮಿಸುವರು. ಈ ದಿನ ವಚನ ಸಂಗೀತೋತ್ಸವದಲ್ಲಿ ಬೆಂಗಳೂರಿನ ರೇಶ್ಮಾ ಭಟ್, ಯಾದಗಿರಿಯ ಬಸವರಾಜ ಭಂಟನೂರ, ಕಲಬುರ್ಗಿಯ ಶಂಕರ ಹೂಗಾರ ಹಾಗೂ ತುಮಕೂರಿನ ಸಿದ್ದೇಂದ್ರಕುಮಾರ ಹಿರೇಮಠ ಅವರು ಸಹಕಲಾವಿದರರೊಂದಿಗೆ ಭಾಗವಹಿಸಿ ವಚನ ಸಂಗೀತ ಕಾರ್ಯಕ್ರಮ ನಡೆಸಲಿದ್ದಾರೆ ಎಂದರು.
ನ.23ರಂದು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಕೆ.ಎಚ್.ಚನ್ನೂರ, ಟ್ರಸ್ಟ್ ಸದಸ್ಯೆ ಭಾರತಿದೇವಿ ಬವರಾಜ ರಾಜಗುರು ಭಾಗವಹಿಸುವರು. ಆ ದಿನದ ಸಂಗೀತೋತ್ಸವದಲ್ಲಿ ಬೆಂಗಳೂರಿನ ಮಾಲಾಶ್ರೀ ಕಣವಿ, ಧಾರವಾಡದ ಕುಮಾರ ಮರಡೂರ, ಮೈಸೂರಿನ ಆನಂದಕುಮಾರ ಕಂಬಳಿಹಾಳ, ಬೆಂಗಳೂರನ ಅನಿರುದ್ಧ ಐತಾಳ ಅವರು ಸಹಕಲಾವಿದರರೊಂದಿಗೆ ವಚನ ಸಂಗೀತ ನಡೆಸಿಕೊಡಲಿದ್ದಾರೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಟ್ರಸ್ಟ್‌ನ ಸದಸ್ಯರಾದ ನಿಜಗುಣಿ ರಾಜಗುರು, ಡಾ.ಅನಿಲ ಮೇತ್ರಿ, ಸುಪ್ರಿಯಾ ಭಟ್, ಶಾಂತಿಲಿಂಗಪ್ಪ ದೇಸಾಯಿ ಸುದ್ದಿಗೋಷ್ಠಿಯಲ್ಲಿದ್ದರು.